ಮನುಷ್ಯನ ಸಂಕಷ್ಟಗಳಿಗೆ ಮೌನವೂ ಪರಿಹಾರ: ಹಿರೇಕಲ್ಮಠ ಶ್ರೀ

| Published : Jan 20 2024, 02:05 AM IST

ಮನುಷ್ಯನ ಸಂಕಷ್ಟಗಳಿಗೆ ಮೌನವೂ ಪರಿಹಾರ: ಹಿರೇಕಲ್ಮಠ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಣ ಹೋಗುವ ಸಮಸ್ಯೆಗಳು ಎದುರಾದರೂ ಸಮಸ್ಯೆಗಳ ಬಗ್ಗೆ ಚರ್ಚಿಸದೇ 1-2 ದಿನ ಮೌನವಾಗಿದ್ದರೆ ಸಾಕು ಯಾರು ಸಮಸ್ಯೆ ಹುಟ್ಟು ಹಾಕಿದ್ದಾರೋ ಅವರೇ ಸುಮ್ಮನಾಗುತ್ತಾರೆ ಆದರೆ ಅದಕ್ಕೆ ಮದ್ದು ಮೌನದಿಂದ ಇರಬೇಕಷ್ಟೆ.

ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮ ಸಮಾರೋಪ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮನುಷ್ಯನ ಸಂಕಷ್ಟಗಳಿಗೆ ಪರಿಹಾರ ದೊರಕಬೇಕಾದರೆ ಆತ ಮೌನದಿಂದ ಇದ್ದರೆ ಸಾಕು ಸಮಸ್ಯೆ, ಸಂಕಷ್ಟಗಳು ತಾನಾಗಿಯೇ ದೂರವಾಗುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಶ್ರೀಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಗಡಿಭಾಗದ ಹಳ್ಳೂರು ಗ್ರಾಮದ ಹೊರಹೊಲಯದ ಎಂ.ಡಿ ಶಂಕರನಹಳ್ಳಿಯ ತುಂಗಾಭದ್ರಾ ನದಿ ದಡದಲ್ಲಿರುವ ಈಶ್ವರ, ಆಂಜನೇಯ ದೇವಾಲಯ ಬಳಿ ಮೂರು ದಿನದಿಂದ ಆಚರಿಸಿದ ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮ ಸಮಾರೋಪದಲ್ಲಿ ಮಾತನಾಡಿ ಪ್ರಾಣ ಹೋಗುವ ಸಮಸ್ಯೆಗಳು ಎದುರಾದರೂ ಸಮಸ್ಯೆಗಳ ಬಗ್ಗೆ ಚರ್ಚಿಸದೇ 1-2 ದಿನ ಮೌನವಾಗಿದ್ದರೆ ಸಾಕು ಯಾರು ಸಮಸ್ಯೆ ಹುಟ್ಟು ಹಾಕಿದ್ದಾರೋ ಅವರೇ ಸುಮ್ಮನಾಗುತ್ತಾರೆ ಆದರೆ ಅದಕ್ಕೆ ಮದ್ದು ಮೌನದಿಂದ ಇರಬೇಕಷ್ಟೆ ಎಂದರು.

ಲಿಂ.ಗುರುಗಳಾದ ಒಡೆಯರ್ ಚಂದ್ರಶೇಖರ ಸ್ವಾಮೀಜಿ ಸಂಕಲ್ಪದಂತೆ ಪ್ರತಿವರ್ಷ ವಿವಿಧ ಪವಿತ್ರ ಸ್ಥಳಗಳಲ್ಲಿ ಮೌನ ಇಷ್ಟಲಿಂಗ ಪೂಜೆ ಅನುಷ್ಠಾನ ಆಚರಿಸುತ್ತ ಬರುತ್ತಿದ್ದೇನೆ. ಗ್ರಾಮದವರು ಇಷ್ಟಲಿಂಗ ಪೂಜಾಕಾರ್ಯ ನೆರವೇರಿಸಲು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಕೊಣಂದುರು ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಹೊನ್ನಾಳಿ ಶ್ರೀಗಳು ಪ್ರತಿವರ್ಷ ಭಕ್ತರ ಕಲ್ಯಾಣಕ್ಕಾಗಿ ಮೌನ ಇಷ್ಟಲಿಂಗ ಪೂಜಾನುಷ್ಠಾನ ನೆರವೇರಿಸುತ್ತ ಬರುತ್ತಿದ್ದಾರೆ. ಈ ಪೂಜಾ ಕಾರ್ಯಕ್ರಮ ಲೋಕ ಕಲ್ಯಾಣಕ್ಕೆ ಎಂಬುದು ನಾವ್ಯಾರು ಮರೆಯಬಾರದು ಎಂದರು.

ಚಿಕ್ಕಕಬ್ಬಾರ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಉಪನ್ಯಾಸ ನೀಡಿದರು. ಕತ್ತಿಗೆ ಮಠದ ಚನ್ನಪ್ಪಸ್ವಾಮೀಜಿ, ನಿವೃತ್ತ ಉಪನ್ಯಾಸಕ ಬಸವರಾಜಪ್ಪ, ನ್ಯಾಮತಿ ಹವಳದಲಿಂಗರಾಜು ಕಸಬಾ ಸೊಸೈಟಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು. ಪ್ರಕಾಶ ಶಾಸ್ತ್ರಿ, ಹಾಲಸ್ವಾಮಿ, ಸಂತೋಷ ಪಾಟೀಲ್, ತಿಮ್ಮಯ್ಯ, ಜಗದೀಶ್, ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.