ವಕ್ಫ್ ತಿದ್ದುಪಡಿ ವಿರೋಧಿಸಿ ಮೌನ ಪ್ರತಿಭಟನೆ

| Published : Jul 06 2025, 01:48 AM IST

ವಕ್ಫ್ ತಿದ್ದುಪಡಿ ವಿರೋಧಿಸಿ ಮೌನ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಯಾರಿಗಾಗಿ ಇಸ್ಲಾಂ ಧರ್ಮಕ್ಕೆ ತದ್ವಿರುದ್ಧವಾಗಿ ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಧರ್ಮ ನಿರಪೇಕ್ಷ, ಸಮಾಜವಾದಿ, ಜಾತ್ಯತೀತ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವ ಹೇಳಿಕೆ ನೋಡಿದರೆ ಸಂವಿಧಾನ ವಿರೂಪಗೊಳಿಸುವ ಪಿತೂರಿ ನಡೆಸಲಾಗುತ್ತಿದೆ.

ಕೊಪ್ಪಳ:

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆ ನಗರದಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಬಳಿಕ ಮಸೀದಿಗಳ ಎದುರು ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ಮಾಡಲಾಯಿತು.

ಕುಷ್ಟಗಿ ರಸ್ತೆಯಲ್ಲಿರುವ ಖೂಬಾ ಮಸೀದಿ ಎದುದು ಮಾನವ ಸರಪಳಿ ನಿರ್ಮಿಸಿ ಮೌಣ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಕೇಂದ್ರ ಸರ್ಕಾರ ಯಾರಿಗಾಗಿ ಇಸ್ಲಾಂ ಧರ್ಮಕ್ಕೆ ತದ್ವಿರುದ್ಧವಾಗಿ ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಧರ್ಮ ನಿರಪೇಕ್ಷ, ಸಮಾಜವಾದಿ, ಜಾತ್ಯತೀತ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವ ಹೇಳಿಕೆ ನೋಡಿದರೆ ಸಂವಿಧಾನ ವಿರೂಪಗೊಳಿಸುವ ಪಿತೂರಿ ನಡೆಸಲಾಗುತ್ತಿದೆ. ಸವಿಧಾನವನ್ನು ನಿಷ್ಪ್ರಯೋಜಕಗೊಳಿಸುವ ಎಲ್ಲ ಕುತಂತ್ರಗಳು ನಡೆಯುತ್ತಿದೆ ಎಂದು ದೂರಿದ ಅವರು, ಸಂವಿಧಾನ ಉಳಿಸಿಕೊಳ್ಳುವ ಮತ್ತು ಹಳೆಯ ವಕ್ಫ್ ಮಂಡಳಿ ಕಾಯ್ದೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಒತ್ತಾಯಿಸಿದರು.

ಖೂಬಾ ಮಸೀದಿಯ ಪೇಶ್ ಇಮಾಮ್ ಹಾಫಿಝ್ ಮೊಹಮ್ಮದ್ ಮುಜಾಹಿದ್ ಖಾಝಿ ರಝಾ, ಖೂಬಾ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಬ್, ಉಪಾಧ್ಯಕ್ಷ ಖಾಜಾವಲಿ ಬಿಸ್ತಿ, ಮಾಜಿ ಸೈನಿಕ ರಫತುಲ್ಲಾ ಚೌದ್ರಿ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಜಾ ಹುಸೇನ್ ನಿಯಾಝಿ, ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಮುಖಂಡ ಸೈಯ್ಯದ್ ಸಲಿಮುದ್ದೀನ್ ಅಲ್ವಿ, ವಲಿ ಅಹ್ಮದ್ ಸಿದ್ದೀಕಿ, ಸೈಯ್ಯದ್ ಅಫ್ಝಲ್ ಪಾಷಾ, ನೂರುದ್ದೀನ್ ಖಾಝಿ ಕವಲೂರ, ಮಹೆಬೂಬ್ ಸಾಬ್, ಅಹ್ಮದ್ ಮುದಗಲ್ ಮೇಸ್ತ್ರಿ, ಬೆಲ್ದಾರ್ ಕಾಲೋನಿ, ಕಾಳಿದಾಸ ನಗರ ಬಿಟಿ ಪಾಟೀಲ್ ನಗರದ ಅನೇಕರು ಉಪಸ್ಥಿತರಿದ್ದರು.

ದಿಡ್ಡಿಕೇರಿ ಮಸೀದಿ ಬಳಿ ಪ್ರತಿಭಟನೆ:

ನಗರದ ದಿಡ್ಡಿಕೆರಿ ಮಸೀದಿಯ ಮುಂಭಾಗದಲ್ಲಿ ಮಾನವ ಸರಪಳಿ ರಚಿಸಿ ಮೌನ ಪ್ರತಿಭಟನೆ ನಡೆಸಿ ಬಳಿಕ ಮಸೀದಿಯ ಪೇಶ್ ಇಮಾಮ್ ಮೊಹಮ್ಮದ್ ಮೊಹಿಯುದ್ದೀನ್ ಬಡೆಘರ ವಕೀಲರು ಮಾತನಾಡಿ, ವಕ್ಫ್ ಮಂಡಳಿ ಮುಸ್ಲಿಮರ ಆಸ್ತಿ. ಆದನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಮುಸಲ್ಮಾನರ ಹಕ್ಕು ಕಸಿದುಕೊಳ್ಳಲು ಸರ್ಕಾರ ನಡೆಸಿರುವ ಹುನ್ನಾರವನ್ನು ವಿರೋಧಿಸುತ್ತೇವೆ. ಎಚ್ಚರಗೊಂಡು ವಕ್ಫ್ ಕಾಯ್ದೆಯನ್ನು ಸರ್ಕಾರ ವಾಪಸ್‌ ಪಡೆದು ಎಲ್ಲರೂ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಈ ಕುರಿತು ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ದಿಡ್ಡಿಕೆರಿ ಮಸೀದಿ ಕಮಿಟಿ ಅಧ್ಯಕ್ಷ ಖಲೀಲ್ ಆಹ್ಮದ್ ದಾಗದಾರ್, ಖಜಾಂಚಿ ರಜಾಕ್ ಸಾಬ್ ಶಿಕಲಗಾರ, ಜಾಫರ್ ಕುರಿ, ಮೈನುದ್ದೀನ್ ಕುದರಿ, ತೌಸೀಫ್ ನಿಶಾನಿ, ನಗರಸಭಾ ಸದಸ್ಯ ಅಜೀಮ್ ಅತ್ತಾರ್, ಬುಡ್ನೆ ಸಾಬ್ ಅತ್ತಾರ್, ಮಹೆಬೂಬ್ ಸೋಂಪುರ, ಯೂಸೂಫ್ ಗಾದಿಗನೂರ್, ನಯೀಮ್ ದಾಗದಾರ್ ಉಪಸ್ಥಿತರಿದ್ದರು.