ಸಾರಾಂಶ
ಮುಸ್ಲಿಂ ಮಹಿಳೆಯರ ಅವಹೇಳನ ಮಾಡಿದ್ದಲ್ಲದೇ, ಲೈಂಗಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತ ಕಲೆ, ಸಂಸ್ಕೃತಿಯ ದೇಶ ಎನಿಸಿಕೊಂಡಿದ್ದು, ಇಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿರುವುದು ಖಂಡನೀಯ.
ಗಂಗಾವತಿ: ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನೆ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಅವರು ಮುಸ್ಲಿಂ ಮಹಿಳೆಯರಿಗೆ ಅವಮಾನಿಸಿರುವುದನ್ನು ಖಂಡಿಸಿ ಜೆಡಿಎಸ್ ಅಧ್ಯಕ್ಷ ಶೇಖನಬಿಸಾಬ್ ನೇತೃತ್ವದಲ್ಲಿ ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೇಖನಬಿಸಾಬ್, ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಅವರು ಮುಸ್ಲಿಂ ಮಹಿಳೆಯರ ಅವಹೇಳನ ಮಾಡಿದ್ದಲ್ಲದೇ, ಲೈಂಗಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತ ಕಲೆ, ಸಂಸ್ಕೃತಿಯ ದೇಶ ಎನಿಸಿಕೊಂಡಿದ್ದು, ಇಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿರುವುದು ಖಂಡನೀಯ. ಸರ್ಕಾರ ಕೂಡಲೇ ಅವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ನಗರದ ಪ್ರಮುಖ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ದುರ್ಗಾಪ್ರಸಾದ, ಲೂಬೀನಾ ಯೂಸುಫ್, ಅಮೀನಬೇಗಂ, ಸಿರೀನ, ಶಂಶಾದಬೇಗಂ ಯೂಸುಫ್, ತಾಜುದ್ದೀನ್, ಚಂದ್ರಶೇಖರ, ಅಯ್ಯೂಬ್ ಸಿಂಗಾರಿ, ಅನ್ವರ್ ತಾರೀಕ್, ಪಟೇಲ್ ಬಾಷಾ, ಗೌಸ್, ರುಬೀನಾ, ಭೀಮಮ್ಮ, ಶಾಹೀನ, ಶುಕೂರ ಸಾಬ್, ಖೂದ್ದೂಸ ರಿಯಾಜ್, ನೂರು, ಮೆಹೇರಾಜ್, ಸಮೀರ, ಶಾಹೀದ್, ಖಾದರಬಿ, ಹುಸೇಬಿ ಚಾಂದಬಿ, ರಶೀದ್ , ಖಾಸಿಂ ಬಿ ಭಾಗವಹಿಸಿದ್ದರು.