ರಾಮಾನುಜಾಚಾರ್ಯರ ಮೂರ್ತಿಗೆ ಬೆಳ್ಳಿ ಪ್ರಭಾವಳಿ ಅಲಂಕಾರ

| Published : Apr 27 2025, 01:34 AM IST

ಸಾರಾಂಶ

ಮೇ 2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗುರುವಾರ ಹಂಸವಾಹನ ನೆರವೇರಿತ್ತು. ಏ.27 ರಂದು ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, ಏ.28 ರಂದು ಗೋವಿಂದರಾಜಮುಡಿ ಉತ್ಸವ, ಮೇ 1 ರಂದು ಮಹಾರಥೋತ್ಸವ ನಡೆಯಲಿದೆ. ಮೇ.2 ರಂದು ರಾಮಾನುಜಾರ್ಯರ ತಿರುನಕ್ಷತ್ರ ಮಹೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ರಾಮಾನುಜರ ಮೂರ್ತಿಗೆ ಅಭಿಷೇಕದ ನಂತರ ಬೆಳ್ಳಿಯ ಪ್ರಭಾವಳಿಯೊಂದಿಗೆ ಅಲಂಕಾರ ನೆರವೇರಿಸಲಾಗಿತ್ತು.

ಮೇ 2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗುರುವಾರ ಹಂಸವಾಹನ ನೆರವೇರಿತ್ತು. ಏ.27 ರಂದು ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, ಏ.28 ರಂದು ಗೋವಿಂದರಾಜಮುಡಿ ಉತ್ಸವ, ಮೇ 1 ರಂದು ಮಹಾರಥೋತ್ಸವ ನಡೆಯಲಿದೆ. ಮೇ.2 ರಂದು ರಾಮಾನುಜಾರ್ಯರ ತಿರುನಕ್ಷತ್ರ ಮಹೋತ್ಸವ ನಡೆಯಲಿದೆ.

ಮೇ 2 ರಂದು ಇಡೀ ದಿನ ರಾಮಾನುಜರ ಜಯಂತ್ಯುತ್ಸವ ಕಾರ್ಯಕ್ರಮಗಳು ಜರುಗಲಿವೆ. ದ್ವಾದಶಾರಾಧನೆಯೊಂದಿಗೆ ಮಹಾಭಿಷೇಕ ನೆರವೇರಲಿದೆ. ಭಕ್ತರು ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಅನುಸರಿಸಿ ದೇವರದರ್ಶನ ಪಡೆದು ಸಹಕರಿಸಬೇಕು ಎಂದು ದೇಗುಲದ ಇಒ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜೀ, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್ ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಮನವಿ ಮಾಡಿದ್ದಾರೆ

ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಮೇ 3 ರವರೆಗೆ ಪ್ರತಿದಿನ ರಾಮಾನುಜಾರ್ಯರಿಗೆ ಅಭಿಷೇಕ ನೆರವೇರಲಿದೆ.