ಸಾರಾಂಶ
ಇಲ್ಲಿನ ಆರಾಧ್ಯ ದೈವ ಶ್ರೀವೀರಭದ್ರೇಶ್ವರ ಹಾಗೂ ಶ್ರೀಶರಣಬಸವೇಶ್ವರರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕ ಸಹಸ್ರ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ತೇರಿಗೆ ವಿಶೇಷ ಪೂಜೆ ಮತ್ತು ನೂತನ ಬೆಳ್ಳಿ ಕಳಸ ಅರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕನ್ನಡಪ್ರಭ ವಾತೆ ಕಾರಟಗಿ
ಇಲ್ಲಿನ ಆರಾಧ್ಯ ದೈವ ಶ್ರೀವೀರಭದ್ರೇಶ್ವರ ಹಾಗೂ ಶ್ರೀಶರಣಬಸವೇಶ್ವರರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕ ಸಹಸ್ರ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ತೇರಿಗೆ ವಿಶೇಷ ಪೂಜೆ ಮತ್ತು ನೂತನ ಬೆಳ್ಳಿ ಕಳಸ ಅರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.ಪುರಸಭೆಯ ಬಳಿ ಹಾದು ಹೋಗಿರುವ ೩೧ನೇ ಕಾಲುವೆ ಬಳಿ ದೇವಸ್ಥಾನ ಸಮಿತಿಯವರು, ಮುತ್ತೈದೆಯರು ಬೆಳ್ಳಿ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಾಜಾ ಭಜಂತ್ರಿಯೊಂದಿಗೆ ಕುಂಭ-ಕಳಸ ಸಮೇತ ರಾಜ್ಯ ಹೆದ್ದಾರಿಯುದ್ದಕ್ಕೂ ತೇರಿನ ನೂತನ ಬೆಳ್ಳಿ ಕಳಸದ ಭವ್ಯ ಮೆರವಣಿಗೆಯಲ್ಲಿ ಕಳಸವನ್ನು ದೇವಸ್ಥಾನಕ್ಕೆ ತಂದರು.
ಅಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಪೂರೈಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂತನ ಬೆಳ್ಳಿ ಕಳಸ ಅರ್ಪಿಸಲಾಯಿತು.ಈ ವೇಳೆ ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಹಾಗೂ ದೇವಸ್ಥಾನ ಸಮಿತಿಯ ಮುಖ್ಯಸ್ಥ ಗುಂಡಪ್ಪ ಕುಳಗಿ ಮಾತನಾಡಿದರು.
ದೇವಸ್ಥಾನ ಸಮಿತಿಯ ಪ್ರಮುಖರಾದ ಜಗದೀಶಪ್ಪ ಅವರಾದಿ, ಶರಣಪ್ಪ ಗದ್ದಿ, ಸಿದ್ದರಾಮಪ್ಪ ಪಲ್ಲೇದ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಸದಸ್ಯರಾದ ಸೋಮಶೇಖರ ಬೇರಿಗೆ, ಹಿರೇಬಸಪ್ಪ ಸಜ್ಜನ್, ಸುಪ್ರಿಯಾ ಅರಳಿ ಸೇರಿದಂತೆ ಬಸವರಾಜ ಪಗಡದಿನ್ನಿ, ಶಿವಪ್ಪ ಚಿನಿವಾಲ್, ಪ್ರಭು ಉಪನಾಳ, ಸಿದ್ದಲಿಂಗಪ್ಪ ಬಪ್ಪೂರು, ವೀರೇಶ ಕೊಟಗಿ, ಬಸನಗೌಡ ತೆಂಗಿನಕಾಯಿ, ಬಸನಗೌಡ ಬಳೂಟಗಿ, ಮಹಾದೇವಪ್ಪ ಹಡಪದ್, ಶಿವಕುಮಾರ ಹಡಪದ, ಅರ್ಚಕ ಮುತ್ತಯ್ಯಸ್ವಾಮಿ, ಶರಣಪ್ಪ ಅಂಗಡಿ, ವೀರೇಶಯ್ಯಸ್ವಾಮಿ ಯರಡೋಣಾ, ಲಕ್ಷ್ಮೀ ನಿಜಗುಣಯ್ಯಸ್ವಾಮಿ, ವಿಜಯಲಕ್ಷ್ಮೀ ಮೇಲಿನಮನಿ, ಕೆ. ಸುರೇಖಾ, ನಿರ್ಮಲಾ ಕೊಟಗಿ, ಕೆ.ಸಾವಿತ್ರಿ ಎಲ್‌ವಿಟಿ, ನಂದಿನಿ ಬಿಜಕಲ್, ರತ್ನ ಬಪ್ಪೂರು, ಮೀನಾಕ್ಷಿ ಸುಂಕದ್, ಶ್ರೀದೇವಿ ಕಟಾಂಬ್ಲಿ, ಶಶಿಕಲಾ ಪಲ್ಲೇದ್, ಅಮರಮ್ಮ, ಸುಜಾತ ಶರಣಪ್ಪ ಹಡಪದ್, ರಾಜೇಶ್ವರಿ ಇತರರು ಇದ್ದರು.