ಸಾರಾಂಶ
ಚಾಮರಾಜನಗರದ ಸಿಂಹ ಮೂವೀ ಪ್ಯಾರಡೈಸ್‌ನ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಗೌರವಿಸುವ ಕಾರ್ಯಕ್ರಮವನ್ನು ಪೌರಾಯುಕ್ತ ರಾಮದಾಸ್ ಉದ್ಘಾಟಿಸಿದರು. ಎ. ಜಯಸಿಂಹ, ಇತರರು ಇದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರಸ್ವಚ್ಛತೆಗೆ ಸಾರ್ವಜನಿಕರ ಸಹಕರಿಸಬೇಕು. ಪೌರ ಕಾರ್ಮಿಕರು ದಿನಕ್ಕೆ ಒಂದು ಬಾರಿ ಸ್ವಚ್ಛತೆ ಮಾಡುತ್ತಾರೆ. ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ನಗರಸಭೆ ಪೌರಯುಕ್ತ ರಾಮದಾಸ್ ತಿಳಿಸಿದರು.
ನಗರದ ನಂಜನಗೂಡು ರಸ್ತೆಯಲ್ಲಿ ಇರುವ ಸಿಂಹ ಮೂವೀ ಪ್ಯಾರಡೈಸ್‌ನ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶಕ್ಕೆ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಒಂದು ನಗರ ಸುಂದರವಾಗಿರಲು ಅವರ ಶ್ರಮ ಬಹಳಷ್ಟಿದೆ. ಅವರನ್ನು ಸಿಂಹ ಮೂವೀ ಪ್ಯಾರಡೈಸ್ ವತಿಯಿಂದ ಗೌರವಿಸಿ ಮನೋರಂಜನೆಗಾಗಿ ಉಚಿತವಾಗಿ ಚಲನಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಿರುವುದು ಸಂತೋಷದ ವಿಷಯ ಎಂದು ಹೇಳಿದರು.ಸ್ವಚ್ಛತಾ ಅಭಿಯಾನಕ್ಕೆ ಸರ್ಕಾರ ಪ್ರತಿವರ್ಷವು ಒಂದು ಪ್ರಶಸ್ತಿ ಘೋಷಣೆ ಮಾಡಲಿದೆ. ನಮ್ಮ ಜಿಲ್ಲೆಯು ಹಿಂದಿನ ವರ್ಷ ಪ್ರಶಸ್ತಿಯನ್ನು ಪಡೆದಿದೆ. ಈ ಬಾರಿಯು ಸ್ವಚ್ಛತೆಯಲ್ಲಿ ಜಿಲ್ಲಾ ಕೇಂದ್ರವನ್ನು ಕಾಪಾಡುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆ. ಪೌರ ಕಾರ್ಮಿಕರು ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ. ಮುಂದಿನ ಸ್ವಚ್ಚತೆಯನ್ನು ಸುತ್ತಮುತ್ತಲಿನ ಜನರು ಕಾಪಾಡಬೇಕು ಎಂದು ತಿಳಿಸಿದರು. ಸಿಂಹ ಮೂವೀ ಪ್ಯಾರಡೈಸ್ ಮಾಲೀಕ ಎ.ಜಯಸಿಂಹ ಮಾತನಾಡಿ, ನಗರಗಳ ಸ್ವಚ್ಛತೆಗೆ ಪೌರ ಕಾರ್ಮಿಕರ ಪಾತ್ರ ಬಹಳ ಮುಖ್ಯವಾಗಿದೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಬೆಳಗಿನಿಂದ ಸಂಜೆಯವರೆಗೂ ಕೆಲಸದ ಒತ್ತಡದಲ್ಲಿ ಇರುವ ಅವರಿಗೆ ಮನೊರಂಜನೆ ಅವಶ್ಯಕವಾಗಿದೆ. ಹಲವಾರು ಪೌರ ಕಾರ್ಮಿಕರು ನಗರಗಳ ಸ್ವಚ್ಚತೆಯಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರತಿಯೊಬ್ಬ ಸರ್ಕಾರಿ ನೌಕರರು ಸರ್ಕಾರದ ಕೆಲಸಗಳಿಗೆ ಮೊದಲು ಅದ್ಯತೆ ನೀಡಿದರೆ ನಮ್ಮ ದೇಶ ಉತ್ತಮವಾಗಲಿದೆ ಎಂದು ಹೇಳಿದರು.ನಗರಸಭೆ ಉಪಾಧ್ಯಕ್ಷೆ ಮಮತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರಸಭೆಯ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯದ ದೃಷ್ಟಿಯಿಂದ ಕೈ ಕವಚಗಳನ್ನು ನೀಡಿದ್ದೇವೆ ಎಂದರು.ಆರೋಗ್ಯ ಅಧಿಕಾರಿ ಮಂಜುನಾಥ್ ಮಾತನಾಡಿ, ನಗರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸದಸ್ಯರು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಪೌರ ಕಾರ್ಮಿಕರು ಯಾವುದೇ ಸಮಯದಲ್ಲಾದರು ಕರ್ತವ್ಯ ನಿರ್ವಹಿಸಲು ಸಿದ್ದರಿದ್ದಾರೆ. ಅವರಿಗೆ ಮನೋರಂಜನೆಗಾಗಿ ಪ್ರತಿವರ್ಷ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರಸಭೆಯ ವತಿಯಿಂದ ಮಾಡಲಾಗುತ್ತಿದೆ. ಪೌರ ಕಾರ್ಮಿಕರ ಸಂತೋಷಕ್ಕಾಗಿ ಅವರನ್ನು ಗೌರವಿಸಿ,ಉಚಿತವಾಗಿ ಚಲನಚಿತ್ರ ಪ್ರದರ್ಶನ ತೋರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರಸಲಾಯಿತು. ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ನಮ್ಮ ಜಿಲ್ಲೆಯ ಪಕ್ಕದಲ್ಲಿರುವ ಕೇರಳ ರಾಜ್ಯದ ಸುಲ್ತಾನ್‌ಬತ್ತೇರಿಗೆ ಚಾಮರಾಜನಗರ ರೋಟರಿ ಸಂಸ್ಥೆಯ ಸದಸ್ಯರು ಭೇಟಿ ನೀಡಿದ್ದೆವು. ಅಲ್ಲಿನ ಸ್ವಚ್ಛತೆ ನೋಡಿ ಬಹಳ ಸಂತೋಷವಾಯಿತು. ಅಲ್ಲಿನ ಸ್ವಚ್ಛತೆಯ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ. ಜಿಲ್ಲಾಧಿಕಾರಿ ಶಿಲ್ಪನಾಗ್ ಚಾಮರಾಜನಗರವನ್ನು ಸ್ವಚ್ಛತಾ ಅಭಿಯಾನದ ಮುಖಾಂತರ ಸ್ವಚ್ಛತ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ, ಕಾರ್ಯದರ್ಶಿ ಚಿದಾನಂದ ಗಣೇಶ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ್, ನಗರಸಭೆ ಅಧಿಕಾರಿ ಆರಾಧ್ಯ ಮತ್ತು ಇನ್ನಿತರರು ಹಾಜರಿದ್ದರು.