ಸಾರಾಂಶ
ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಲಂಬಾಣಿ ಹಟ್ಟಿಯಲ್ಲಿ 50 ಲಕ್ಷ ರು. ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಚಂದ್ರಪ್ಪ ಭೂಮಿಪೂಜೆ ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಪ್ರಥಮ ಬಾರಿಗೆ ಭರಮಸಾಗರದಿಂದ ಸ್ಪರ್ಧಿಸಿ 31 ವರ್ಷಗಳ ಹಿಂದೆ ಶಾಸಕನಾಗಿದ್ದವನು. ಓಟು ಹಾಕಿದವರು, ಹಾಕದವರು ಎಲ್ಲರೂ ನನ್ನವರೆ ಎಂದು ತಿಳಿದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಪಟ್ಟಣದ ಲಂಬಾಣಿ ಹಟ್ಟಿಯಲ್ಲಿ 50 ಲಕ್ಷ ರು. ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.
ಮೊದಲ ಬಾರಿಗೆ ಭರಮಸಾಗರ ಶಾಸಕನಾದ ಮೇಲೆ ಸಂಚರಿಸಲು ರಸ್ತೆಗಳಿರಲಿಲ್ಲ. 5 ವರ್ಷದಲ್ಲಿ ಎಲ್ಲಾ ಹಳ್ಳಿಗಳಲ್ಲಿ ರಸ್ತೆ ನಿರ್ಮಿಸಿದ್ದರಿಂದ ಜನ ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೂ ಚುನಾವಣೆಯಲ್ಲಿ ಗೆಲ್ಲಿಸಿದರು. ತಾಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿಯೂ ಸಿಸಿ ರಸ್ತೆ ಮಾಡಿಸಿದ್ದೇನೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ನಲ್ಲಿಗಳನ್ನು ಹಾಕಿಸಲಾಗಿದೆ. ನಿಮ್ಮನ್ನು ದಾರಿ ತಪ್ಪಿಸುವವರ ಬರಬಹುದು ಎಚ್ಚರದಿಂದಿರಿ. ಚುನಾವಣೆಯಲ್ಲಿ ಯಾರಿಗೆ ಮತ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಯೋಚಿಸಿ ಮತದಾನ ಮಾಡಿ ಜನತೆಯಲ್ಲಿ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.ಐಟಿಐ, ಕಾಲೇಜು, ಪಿಯು ಕಾಲೇಜು, ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಹೈಟೆಕ್ ಆಸ್ಪತ್ರೆ, ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದೇನೆ. ಕೆಲಸ ಮಾಡಿರುವುದನ್ನು ನೋಡಿ ಜನ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುತ್ತೇನೆ. ರೈತರ ತೋಟಗಳು ಒಣಗಬಾರದೆಂದು ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 500 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಚಂದ್ರನಾಯ್ಕ, ಜಯನಾಯ್ಕ, ಕುಮಾರ ನಾಯ್ಕ, ಚಂದ್ರನಾಯ್ಕ, ಮಹೇಶ್‍ನಾಯ್ಕ ಹಾಗೂ ಗ್ರಾಮದ ಮುಖಂಡರು ಇದ್ದರು.