ಈ ಟ್ರಸ್ಟ್ ಉತ್ತರಕನ್ನಡ ಜಿಲ್ಲೆ ಅಲ್ಲದೆ ಇನ್ನೂ ಅನೇಕ ಜಿಲ್ಲೆಗಳಿಗೆ ವ್ಯಾಪಿಸಿ ವಿದ್ಯಾರ್ಥಿಗಳ ಬದುಕು ಬಂಗಾರವಾಗಿಸಲಿ.

ಶಿರಸಿ: ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ದಿ. ಗಣಪತಿ ನಾಯ್ಕ್ ಮಳಲಗಾಂವ್ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ ಮಾಡಲಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕರೆ ನೀಡಿದರು.

ಸೋಮವಾರ ನಗರದ ಡಾ. ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ದಿ. ಗಣಪತಿ ನಾಯ್ಕ ಮಳಲಗಾಂವ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಶಿಬಿರದಲ್ಲಿ ಮಾತನಾಡಿದರು.ಒಂದು ರಾಜ್ಯ ಅಥವಾ ರಾಷ್ಟ್ರದಲ್ಲಿ ಯಾವುದೇ ಒಂದು ಟ್ರಸ್ಟ್ ರಚಿಸಬೇಕೆಂದರೆ ಎಲ್ಲರೂ ತಂದೆ ತಾಯಿ ಮತ್ತು ದೇವರ ಹಾಗು ಮಕ್ಕಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡುತ್ತಾರೆ. ಆದರೆ ಶಾಸಕ ಭೀಮಣ್ಣ ನಾಯ್ಕ್ ಅವರು ತಮ್ಮನ ಹೆಸರಿನಲ್ಲಿ ಟ್ರಸ್ಟ್ ಮಾಡಿರುವುದು ರಾಜ್ಯದಲ್ಲಿಯೇ ವಿಶೇಷವಾಗಿದೆ ಎಂದು ಬಣ್ಣಿಸಿದರು.ಈಗ ಎರಡನೇ ಬಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಶಿಕ್ಷಣ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು 3 ವರ್ಷದಲ್ಲಿ ಒಂದೊಂದಾಗಿ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತ ಬಂದಿದ್ದೇನೆ. ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸಲು ಇನ್ನೂ ಒಂದುವರೆ ವರ್ಷಗಳ ಕಾಲ ಅವಕಾಶವಿದೆ. ಎಲ್ಲವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಡಾ. ಕೆ.ವಿ. ಶಿವರಾಮ ಮಾತನಾಡಿ, ದಿ. ಗಣಪತಿ ನಾಯ್ಕ್ ಅವರ ಹೆಸರಿನಲ್ಲಿ ಗಣಪತಿ ಟಿ. ನಾಯ್ಕ್ ಮಳಲಾಗಾಂವ್ ಚಾರಿಟೇಬಲ್ ಟ್ರಸ್ಟಗೆ ಮುಂದಿನ ದಿನದಲ್ಲಿ ಗಣೇಶ ನೇತ್ರಾಲಯದ ಮುಖಾಂತರ ಉಚಿತ ಕಣ್ಣಿನ ಪರೀಕ್ಷೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವಿ ಬೆಳ್ಳೆಮನೆ ಮಾತನಾಡಿ, ಈ ಟ್ರಸ್ಟ್ ಉತ್ತರಕನ್ನಡ ಜಿಲ್ಲೆ ಅಲ್ಲದೆ ಇನ್ನೂ ಅನೇಕ ಜಿಲ್ಲೆಗಳಿಗೆ ವ್ಯಾಪಿಸಿ ವಿದ್ಯಾರ್ಥಿಗಳ ಬದುಕು ಬಂಗಾರವಾಗಿಸಲಿ ಎಂದು ಹಾರೈಸಿದರು.ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ, ನಿಕಟಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಹಿರಿಯರಾದ ಎಸ್.ಕೆ. ಭಾಗವತ ಅವರು ಮಾತನಾಡಿದರು. ಬಣ್ಣದ ಮಠದ ಶಿವಲಿಂಗ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಉದಯ ಸ್ವಾದಿ, ಜಯದೇವ ನಿಲೇಕಣಿ, ಗೀತಾ ಭೀಮಣ್ಣ ನಾಯ್ಕ, ಸಂಪನ್ಮೂಲ ವ್ಯಕ್ತಿ ಆರ್.ಕೆ. ಬಾಲಚಂದ್ರ, ಜಗದೀಶ್ ಗೌಡ, ಉದ್ಯಮಿ ಅಶ್ವಿನ್ ನಾಯ್ಕ್, ಸತೀಶ್ ನಾಯ್ಕ್, ಸುನಿಲ್ ನಾಯ್ಕ್, ಗೀತಾ ಶೆಟ್ಟಿ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.