ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಂದು ಹಾಸನ ಜಿಲ್ಲಾ ಕ್ರೀಡಾ ಪರಿಷತ್ ವತಿಯಿಂದ ಸಿಂಚನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆಯಲ್ಲಿ ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಅತ್ಯಂತ ಮುಖ್ಯವಾಗಿದ್ದು, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಯುವ ಕ್ರೀಡಾಪಟುಗಳಿಗೆ ಮಹತ್ವದ ಮೈಲಿಗಲ್ಲಾಗಿದೆ. ಸಿಂಚನ ಅವರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತರುವ ಹಾದಿಯಲ್ಲಿರುವ ಹಾಸನ ಜಿಲ್ಲಾ ವೇಟ್ಲಿಫ್ಟರ್ಸ್ ಸಂಸ್ಥೆಯ ಕ್ರೀಡಾಪಟು ಕು. ಸಿಂಚನ ಅವರು ದೆಹಲಿಯಲ್ಲಿ ಅಕ್ಟೋಬರ್ 29ರಿಂದ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಇವರ ಸಾಧನೆಗೆ ಹಾಸನ ಜಿಲ್ಲಾ ಕ್ರೀಡಾ ಪರಿಷತ್ ಅಭಿನಂದನೆ ಸಲ್ಲಿಸಿದೆ.ಎ.ಪಿ.ಜೆ. ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸಿಂಚನ ಅವರು ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಹಾಗೂ ಕ್ರೀಡಾ ಪರಿಷತ್ ಸದಸ್ಯ ಹನುಮಂತ ಗೌಡ ಮತ್ತು ಯೋಗ ಅವರ ಪುತ್ರಿ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಂದು ಹಾಸನ ಜಿಲ್ಲಾ ಕ್ರೀಡಾ ಪರಿಷತ್ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆಯಲ್ಲಿ ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಅತ್ಯಂತ ಮುಖ್ಯವಾಗಿದ್ದು, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಯುವ ಕ್ರೀಡಾಪಟುಗಳಿಗೆ ಮಹತ್ವದ ಮೈಲಿಗಲ್ಲಾಗಿದೆ. ಸಿಂಚನ ಅವರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು.
ಹಾಸನ ಜಿಲ್ಲಾ ಕ್ರೀಡಾ ಪರಿಷತ್ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಿರಂಜನ ರಾಜ್, ಪುರುಷೋತ್ತಮ, ಅಶ್ವತ್ಥ್, ಯು.ಬಿ. ರಾಜು, ಹನುಮಂತ ಗೌಡ, ಭಾನುಮತಿ ಹಾಗೂ ಯಶೋಧ ಸೇರಿದಂತೆ ಕ್ರೀಡಾ ಪರಿಷತ್ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು, ಸಿಂಚನ ಅವರನ್ನು ಅಭಿನಂದಿಸಿದರು.