ಸಾರಾಂಶ
ಪಾಕ್ ನೆಲದಲ್ಲಿ ಭಯೋತ್ಪಾದಕ ತಾಣಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯುಪಡೆ, ಭಾರತೀಯ ಭೂಸೇನೆ ಹಾಗೂ ನೌಕಾಪಡೆಗಳಿಗೆ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು,ಶಾಸಕ ಜೆ.ಟಿ. ಪಾಟೀಲ ಅಭಿನಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೀಳಗಿ
ಪಾಕ್ ನೆಲದಲ್ಲಿ ಭಯೋತ್ಪಾದಕ ತಾಣಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯುಪಡೆ, ಭಾರತೀಯ ಭೂಸೇನೆ ಹಾಗೂ ನೌಕಾಪಡೆಗಳಿಗೆ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು,ಶಾಸಕ ಜೆ.ಟಿ. ಪಾಟೀಲ ಅಭಿನಂದಿಸಿದ್ದಾರೆ.ಸ್ಥಳೀಯ ಸಿದ್ದೇಶ್ವರ ಸೌಹಾರ್ದ ಸಹಕಾರ ಸಂಘದ ಕಾರ್ಯಾಲಯದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದ ಅವರು, ಆಪರೇಷನ್ ಸಿಂದೂರ ಹೆಸರಿನಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ 9 ಭಯೋತ್ಪಾದಕ ತಾಣಗಳನ್ನು ನೆಲಸಮ ಮಾಡುವಲ್ಲಿ ಅಪರಿಮಿತ ದಕ್ಷತೆ, ಸಾಮರ್ಥ್ಯ ಮೆರೆದಿರುವ ಭಾರತೀಯ ಸೇನೆ ದೇಶದ ಜನರ ವಿಶ್ವಾಸ ಹೆಚ್ಚಿಸಿದೆ. ಇದು ಭಾರತದತ್ತ ಕೆಟ್ಟದೃಷ್ಟಿ ಬೀರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದಿದ್ದಾರೆ.
ಪಾಕಿಸ್ತಾನದ ಭೂಭಾಗದಲ್ಲಿರುವ ಉಗ್ರ ಸಂಘಟನೆಗಳನ್ನು ಹತ್ತಿಕ್ಕಿದ ಭಾರತೀಯ ವಾಯುಪಡೆ, ಭೂಪಡೆ, ನೌಕಾಪಡೆಗಳ ಸಮನ್ವಯಿತ ಕಾರ್ಯಚರಣೆ ಶ್ಲಾಘನೀಯ. ಈ ಸಮಯ ಪಿಒಕೆ ವಶಪಡಿಸಿಕೊಳ್ಳಲು ಸಕಾಲವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ತೆಗೆದುಕೊಂಡು ಭಯೊತ್ಪಾದಕ ಎಂಬ ಕೆಟ್ಟ ಹುಳುಗಳನ್ನು ಕಿತ್ತು ಹಾಕಬೇಕೆಂದ ಅವರು, ಭಯೋತ್ಪಾದಕರ ಅಡ್ಡೆಗಳ ಮೇಲೆ ಭಾರತೀಯ ಸೈನಿಕರು ನಡೆಸಿದ ದಾಳಿಯಿಂದ ಇಡೀ ವಿಶ್ವಕ್ಕೆ ಭಾರತದ ಶಕ್ತಿ, ಸಾಮರ್ಥ್ಯ ಹಾಗೂ ಪರಾಕ್ರಮದ ಪರಿಚಯವಾದಂತಾಗಿದೆ ಎಂದು ತಿಳಿಸಿದರು.ಹನುಮಂತ ಕಾಖಂಡಕಿ, ಅಣವೀರಯ್ಯ ಪ್ಯಾಟಿಮಠ, ಎಂ ಎಸ್ ಕಾಳಗಿ, ಪಡಿಯಪ್ಪ ಕರಿಗಾರ, ಬಸವರಾಜ ಹಳ್ಳದಮನಿ, ಶಿವಾನಂದ ಮಾದರ, ಸಂಗಪ್ಪ ಕದಂಗಲ್, ಸಿದ್ದು ಸಾರಾವರಿ, ಬಿ.ಪಿ. ಪಾಟೀಲ, ಮಂಜು ಕಣಬೂರಮಠ, ರವಿ ಪಾಟೀಲ, ಸಂಗಪ್ಪ ಕಂದಗಲ್ಲ ಇದ್ದರು.