ಸಾರಾಂಶ
ಪುಟ್ಟ ದೇಶ ಸಿಂಗಾಪುರವು ಕೆಲವು ದಶಕದಲ್ಲೇ ಅದ್ಭುತವಾದ ಸಾಧನೆ ಮಾಡಿದೆ. ಆದರೆ ಈ ಸಾಧನೆ ನಮ್ಮಲಿ ಏಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ ಎಂದು ಸಾಹಿತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪುಟ್ಟ ದೇಶ ಸಿಂಗಾಪುರವು ಕೆಲವು ದಶಕದಲ್ಲೇ ಅದ್ಭುತವಾದ ಸಾಧನೆ ಮಾಡಿದೆ. ಆದರೆ ಈ ಸಾಧನೆ ನಮ್ಮಲಿ ಏಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ ಎಂದು ಸಾಹಿತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟರು.ಗಾಂಧಿನಗರದ ಸಪ್ನ ಬುಕ್ ಹೌಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ‘ಸಿಂಗಾಪುರ ಕೆಲವು ಟಿಪ್ಪಣಿಗಳು’, ನಿವೃತ್ತ ಪೊಲೀಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಅವರ ‘ಪಾಕಿಸ್ತಾನದ ಐಎಸ್‌ಐ’ ಮತ್ತು ಸಾಹಿತಿ ಎಚ್.ಡುಂಡಿರಾಜ್ ಅವರ ‘ಒಲವಿನ ಒಲಂಪಿಕ್ಸ್’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಳೆದ 70 ವರ್ಷದಲ್ಲಿ ಸಿಂಗಾಪುರ ಹೇಗೆ ನಿರ್ಮಾಣಗೊಂಡಿತು ಎಂಬುದನ್ನು ಅಲ್ಲಿನವರು ತೋರಿಸಿಕೊಟ್ಟಿದ್ದಾರೆ. ಇದು ನಮಗ್ಯಾಕೆ ಸಾಧ್ಯವಾಗಿಲ್ಲ. ಅಲ್ಲಿನ ಸಂಪರ್ಕ, ಸಾರಿಗೆ ವ್ಯವಸ್ಥೆ ಅದ್ಭುತವಾಗಿದೆ. ರಾಜಕಾರಣಿಗಳು ದೇಶ ಕಟ್ಟುವಾಗ ಜನರೊಂದಿಗೆ ಕೈಜೋಡಿಸಿದರೆ ಮಾತ್ರ ಇದು ಸಾಧ್ಯ. ಇದು ನಮ್ಮಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬ ವ್ಯಥೆ ಕಾಡುತ್ತಿದೆ. ಇದನ್ನು ವಿಶ್ವೇಶ್ವರ ಭಟ್ ಉತ್ತಮವಾಗಿ ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೃತಿಗಳ ಲೇಖಕರಾದ ವಿಶ್ವೇಶ್ವರ ಭಟ್, ಡಾ.ಡಿ.ವಿ.ಗುರುಪ್ರಸಾದ್, ಎಚ್.ಡುಂಡಿರಾಜ್, ಸಾಹಿತಿ ಜಗದೀಶಶರ್ಮಾ ಸಂಪ, ಸಪ್ನ ಬುಕ್‌ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.ಕ್ಯಾಪ್ಷನ್....
ಗಾಂಧಿನಗರದ ಸಪ್ನ ಬುಕ್ ಹೌಸ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮೂರು ಕೃತಿಗಳನ್ನು ಸಾಹಿತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಲೋಕಾರ್ಪಣೆಗೊಳಿಸಿದರು. ಲೇಖಕರಾದ ವಿಶ್ವೇಶ್ವರ ಭಟ್, ಡಾ.ಡಿ.ವಿ.ಗುರುಪ್ರಸಾದ್, ಎಚ್.ಡುಂಡಿರಾಜ್, ಸಾಹಿತಿ ಜಗದೀಶಶರ್ಮಾ ಸಂಪ, ಸಪ್ನ ಬುಕ್ ಹೌಸ್‌ನ ನಿತಿನ್ ಷಾ ಉಪಸ್ಥಿತರಿದ್ದರು.