ವಕೀಲರ ಸಂಘಕ್ಕೆ ಸಿಂಗಯ್ಯ ಅಧ್ಯಕ್ಷರಾಗಿ ಆಯ್ಕೆ

| Published : May 05 2025, 12:48 AM IST

ವಕೀಲರ ಸಂಘಕ್ಕೆ ಸಿಂಗಯ್ಯ ಅಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಣಿಗಲ್ ವಕೀಲರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಶಂಕರ್ ಅವರ ಚುನಾವಣಾ ಅವಧಿ ಮುಗಿದ ನಂತರ ಹೊಸ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಹೊಸ ಸಮಿತಿಗೆ ಅಧ್ಯಕ್ಷರಾಗಿ ಎಸ್ ಎಚ್ ಸಿಂಗಯ್ಯ ಕಾರ್ಯದರ್ಶಿಯಾಗಿ ಕೆ ಜಿ ಪ್ರಸಾದ್ ಖಜಾಂಚಿಯಾಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ವಕೀಲರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಶಂಕರ್ ಅವರ ಚುನಾವಣಾ ಅವಧಿ ಮುಗಿದ ನಂತರ ಹೊಸ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಹೊಸ ಸಮಿತಿಗೆ ಅಧ್ಯಕ್ಷರಾಗಿ ಎಸ್ ಎಚ್ ಸಿಂಗಯ್ಯ ಕಾರ್ಯದರ್ಶಿಯಾಗಿ ಕೆ ಜಿ ಪ್ರಸಾದ್ ಖಜಾಂಚಿಯಾಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಆಯ್ಕೆಯ ನಂತರ ಮಾತನಾಡಿದ ಹೊಸ ಅಧ್ಯಕ್ಷ ಸಿಂಗಯ್ಯ ವಕೀಲರ ಎಲ್ಲಾ ಕಷ್ಟಗಳಿಗೆ ಸ್ಪಂದಿಸುವ ಮತ್ತು ಸಮಸ್ಯೆಗಳಿಗಿನ್ನೂ ಬಗೆಹರಿಸುವ ಹಲವಾರು ಅವರ ಮುಂದಿನ ಅಭಿವೃದ್ಧಿಗಳಿಗೆ ಸ್ಪಂದಿಸುವ ಕೆಲಸವನ್ನು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು ಅದೇ ರೀತಿ ಚುನಾವಣೆಯಲ್ಲಿ ಮತ ಹಾಕಿ ಗೆಲುವಿಗೆ ಕಾರಣರಾದ ಎಲ್ಲಾ ವಕೀಲರಿಗೆ ಅಭಿನಂದಿಸುತ್ತೇನೆ ಎಂದರು.

ಈ ಬಾರಿ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಆಗಿರುವ ಕೆ ಜಿ ಪ್ರಸಾದ್ ಹಲವಾರು ವರ್ಷಗಳಿಂದ ಸಂಘದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಮತ್ತು ಹಲವಾರು ವಕೀಲರ ಒಡನಾಟದಿಂದ ಉತ್ತಮ ಸೇವೆ ಮಾಡುತ್ತಾ ವಕೀಲರ ಶ್ರೇಯಸ್ಸಿಗೆ ಶ್ರಮಿಸುತ್ತೇನೆ ಎಂದರು.

ಖಜಾಂಚಿ ಆಗಿರುವ ಶಿವಕುಮಾರ್‌ ಹಿರಿಯ ವಕೀಲರ ಸಹಕಾರದಿಂದ ಮತ್ತು ಜೊತೆಗೆ ಅಧ್ಯಕ್ಷರ ಜೊತೆಗೂಡಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ ಎಮ್ ರಂಗಸ್ವಾಮಿ ರಾಮಚಂದ್ರಯ್ಯ ಕೆಎಂ ತಿಮ್ಮಪ್ಪ, ರವಿಚಂದ್ರ, ಸತ್ಯನಾರಾಯಣ ಒಡೆಯರ್, ಮಾಜಿ ಅಧ್ಯಕ್ಷ ಚಂದ್ರೇಗೌಡ ಸೇರಿದಂತೆ ಹಲವಾರು ಹಿರಿಯ ವಕೀಲರು ಇದ್ದರು. ಚುನಾವಣಾ ಅಧಿಕಾರಿಯಾಗಿ ಸುರೇಶ್ ಕಾರ್ಯನಿರ್ವಹಿಸಿದರು.