ಮಂಡ್ಯ:

ಗಾಯಕಿ ಎಸ್.ಜಾನಕಿ ಅವರು ಸಂಗೀತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿ ಸಂಗೀತ ಲೋಕದ ಸರಸ್ವತಿಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಅನುಸೂಯ ಹೊಂಬಾಳೆ ತಿಳಿಸಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಕರ್ನಾಟಕದ ಗಾನಕೋಗಿಲೆ ಎಸ್.ಜಾನಕಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಎಸ್.ಜಾನಕಿ ಅವರು ಎಲ್ಲರಿಂದಲೂ ಅಮ್ಮ ಎಂದು ಕರೆಸಿಕೊಂಡಿದ್ದರು. ನಿಜವಾಗಲೂ ಆ ಪದಕ್ಕೆ ವಿಶೇಷ ಶಕ್ತಿ ತುಂಬಿದವರು. ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದರು. ಆಂಧ್ರದ ಹಳ್ಳಿಯಲ್ಲಿ ಜನಿಸಿದ ಅವರು ಸಂಗೀತವನ್ನು ಕಲಿತು ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಭಾರತೀಯ ಚಿತ್ರರಂಗದ ಹೆಮ್ಮೆಯ ಗಾಯಕಿ ಎಸ್.ಜಾನಕಿ ಅವರು 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಹಾಡುವ ಮೂಲಕ ಬಹುಭಾಷಾ ಗಾಯಕಿಯಾಗಿ ದಾಖಲೆ ಬರೆದಿದ್ದಾರೆ. ಮೂರು ರಾಷ್ಟ್ರ ಪ್ರಶಸ್ತಿಗಳು, ಹಲವು ರಾಜ್ಯ ಪ್ರಶಸ್ತಿಗಳು ಲಭಿಸಿವೆ ಎಂದರು.


ಅಭಿಮಾನಿಗಳ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಸಿರುವ ಪ್ರಶಸ್ತಿಗಿಂತ ಮತ್ತೊಂದು ಪ್ರಶಸ್ತಿ ಇಲ್ಲ. ದಕ್ಷಿಣ ಕ್ಷೇತ್ರದ ಸಂಗೀತ ಕ್ಷೇತ್ರವನ್ನು ಬಹಳ ತಡವಾಗಿ ಗುರುತಿಸುತ್ತಿದ್ದೀರಿ ಎಂದು ಪದ್ಮಭೂಷಣ ಪ್ರಶಸ್ತಿಯನ್ನೇ ನಿರಾಕರಿಸಿದವರು ಎಸ್.ಜಾನಕಿ ಎಂದರು.

ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ಇತ್ತೀಚೆಗೆ ನಿಧನರಾದ ಕನ್ನಡದ ಜನಪ್ರಿಯ ಕಾದಂಬರಿಗಾರ್ತಿ ಹಾಗೂ ಸಾಹಿತಿ ಸಿ.ಎನ್.ಮುಕ್ತಾ ಅವರು ಕನ್ನಡದಲ್ಲಿ ಓದುಗ ತಲೆಮಾರನ್ನು ಬೆಳೆಸಿದ ಲೇಖಕಿಯರಲ್ಲಿ ಒಬ್ಬರು. ಅವರು ಬರೆದ 75ಕ್ಕೂ ಹೆಚ್ಚು ಕಾದಂಬರಿಗಳು ಧಾರಾವಾಹಿಗಳಾಗಿ, ಸಿನಿಮಾಗಳಾಗಿ ಜನರನ್ನ ತಲುಪಿವೆ ಎಂದರು.

ಈ ವೇಳೆ ಲೇಖಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಆರ್.ಸುನಂದಮ್ಮ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮೀರಾ ಶಿವಲಿಂಗಯ್ಯ, ಸುನಂದಾ ಜಯರಾಮ್, ಡಾ.ಎಂ.ಕೆಂಪಮ್ಮ, ಮಂಜುಳಾ ಉದಯಶಂಕರ್ ಸೇರಿದಂತೆ ಲೇಖಕಿಯರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಜುಲೈ 22 ರಂದು ಒಂದು ದಿನದ ತರಬೇತಿ ಕಾರ್ಯಾಗಾರಮಂಡ್ಯ:

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವತಿಯಿಂದ ಜುಲೈ 22 ರಂದು ಬೆಳಗ್ಗೆ 10 ಗಂಟೆಗೆ ಸಾಫ್ಟ್ ಸ್ಕಿಲ್, ಖಾಸಗಿ ಕಂಪನಿಗಳ ಸಂದರ್ಶನಕ್ಕೆ ಸಿದ್ಧತೆ ಮತ್ತು ವೃತ್ತಿ ಮಾರ್ಗದಶನದ ಬಗ್ಗೆ ‘ಒಂದು ದಿನದ ತರಬೇತಿ ಕಾರ್ಯಾಗಾರ’ವನ್ನು ಆಯೋಜಿಸಲಾಗಿದೆ. ಕಾರ್ಯಾಗಾರ ತರಬೇತಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. (ಶುಲ್ಕ ರಹಿತ ಮತ್ತು ಯಾವುದೇ ಶೈಕ್ಷಣಿಕ ಮಾನದಂಡಗಳ ಅಗತ್ಯವಿಲ್ಲ), ಹೆಚ್ಚಿನ ಮಾಹಿತಿಗಾಗಿ ಮೊ-970646629, 7483808321, 9164642684, ಮತ್ತು 9113875775 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದು ವಿದ್ಯುತ್ ವ್ಯತ್ಯಯಮಂಡ್ಯ:66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-06 ಹೊಸಹಳ್ಳಿ ಫೀಡರ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 20 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ಎಫ್-06 ಹೊಸಹಳ್ಳಿ ಫೀಡರ್‌ನ ಪ್ರದೇಶಗಳಾದ ಕಾವೇರಿ ನಗರ ಒಂದನೇ ಹಂತ, ಹೊಸಹಳ್ಳಿ, ಹಾಲಹಳ್ಳಿ, ಹಾಲಹಳ್ಳಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೊತ್ತತ್ತಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಆರ್.ಟಿ.ಚಂದ್ರಮೌಳಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.