‘ಗಜಾನನ ಕ್ರಿಕೆಟರ್ಸ್’ ತುಳು ಚಿತ್ರದ ಆಡಿಯೋ ದುಬೈಯಲ್ಲಿ ಗಾಯಕ ವಿಜಯ ಪ್ರಕಾಶ್ ಬಿಡುಗಡೆ

| Published : Sep 04 2025, 01:01 AM IST

‘ಗಜಾನನ ಕ್ರಿಕೆಟರ್ಸ್’ ತುಳು ಚಿತ್ರದ ಆಡಿಯೋ ದುಬೈಯಲ್ಲಿ ಗಾಯಕ ವಿಜಯ ಪ್ರಕಾಶ್ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಹಯೋಗದಲ್ಲಿ ಪ್ರಜ್ವಲ್ ಫಿಲ್ಮ್ಸ್ಈ ಚಿತ್ರವನ್ನು ನಿರ್ಮಿಸಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ, ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಚಿತ್ರದ ಆಡಿಯೋ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂಡರ್‌ಆರ್ಮ್ ಕ್ರಿಕೆಟ್ ಕಥೆಯಾಧಾರಿತ ಭಾರತದ ಮೊದಲ ಚಲನಚಿತ್ರ ‘ಗಜಾನನ ಕ್ರಿಕೆಟರ್ಸ್’ ತುಳು ಚಿತ್ರದ ಆಡಿಯೋವನ್ನು ದುಬೈಯ ಟೆಕಾಂನ ಟೈಮ್ ಓಕ್ ಹೋಟೆಲ್‌ನಲ್ಲಿ ಇತ್ತೀಚೆಗೆ ಸಾಂಸ್ಕೃತಿಕ ರಾಯಭಾರಿಗಳು, ಉದ್ಯಮ ಹಾಗೂ ಚಿತ್ರ ರಂಗದ ದಿಗ್ಗಜರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಹಯೋಗದಲ್ಲಿ ಪ್ರಜ್ವಲ್ ಫಿಲ್ಮ್ಸ್ಈ ಚಿತ್ರವನ್ನು ನಿರ್ಮಿಸಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ, ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಚಿತ್ರದ ಆಡಿಯೋ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ವಿಜಯ ಪ್ರಕಾಶ್, ಈ ಚಿತ್ರದಲ್ಲಿ ನಾನು ಹಾಡಿರುವ ಹಾಡು ವೈಯುಕ್ತಿಕವಾಗಿ ಬಹಳ ಇಷ್ಟವಾಗಿದೆ. ಈ ಚಲನಚಿತ್ರವು ಅತಿದೊಡ್ಡ ಬ್ಲಾಕ್ಬಸ್ಟರ್ ಹಿಟ್ ಆಗುತ್ತದೆ. ಪ್ರಜ್ವಲ್ ಫಿಲ್ಮ್ಸ್ಇನ್ನೂ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಮುಂದಿಡಬೇಕು ಎಂದರು. ಈ ಸಂದರ್ಭ ವಿಜಯ ಪ್ರಕಾಶ್‌ರನ್ನು ಸನ್ಮಾನಿಸಲಾಯಿತು.ಮುಕುಂದ್ ಎಂಜಿಎಂ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರ ಗುರುದತ್ ಶೆಣೈ ಮಾತನಾಡಿ, ಕನ್ನಡದಲ್ಲಿಯೂ ಸಹ ಉತ್ತಮ ಚಲನಚಿತ್ರಗಳು ತುಳುನಾಡಿನವರು ನಿರ್ಮಿಸಿದ್ದಾರೆ. ಪ್ರೇಕ್ಷಕರ ಸಹಕಾರದಲ್ಲಿ ಈ ಚಿತ್ರ ಹೆಚ್ಚಿನ ಯಶಸ್ಸು ಸಿಗುವ ವಿಶ್ವಾಸವಿದೆ ಎಂದರು.ನಿರ್ಮಾಪಕ ಪ್ರಜ್ವಲ್ ಶೆಟ್ಟಿ ಮಾತನಾಡಿ, ನಾವು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದೊಂದಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರದಲ್ಲಿ ಅಳವಡಿಸಿಕೊಂಡಿರುವ ಕಥೆ ನಿಜ ಜೀವನಕ್ಕೆ ಹತ್ತಿರವಾಗಿರುತ್ತದೆ ಎಂದರು.ಯುಎಇ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ, ಉದ್ಯಮಿ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಜೆಮ್ಸ್ ಮೆಂಡೋನ್ಸಾ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.ತುಳುನಾಡಿನ ಗಲ್ಲಿಗಳಲ್ಲಿ ಹಾಗೂ ಮೈದಾನಗಳಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಇತಿಹಾಸ, ಸಂಸ್ಕೃತಿ ಮತ್ತು ಅದಕ್ಕೆ ಸಿಕ್ಕಿರುವ ಗೌರವವನ್ನು ಗಜಾನನ ಕ್ರಿಕೆಟರ್ಸ್ ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ ಎಂದರು.ರೋಹನ್ ವಾಮಂಜೂರ್ ಮತ್ತು ಸಂತೋಷ್‌ ಲಾಡ್ ಸಹ-ನಿರ್ಮಾಪಕರಾಗಿ ಮತ್ತು ಕೀರ್ತನ್ ಭಂಡಾರಿ ನಿರ್ದೇಶಿಸಿದ ಈ ಚಿತ್ರದಲ್ಲಿ ನಾಕ್ಷತ್ರಿಕ ಸಮೂಹ ಎರಕಹೊಯ್ದಿದೆ. ಪ್ರಮುಖ ಹೆಸರುಗಳಲ್ಲಿ ವಿನೀತ್ ಕುಮಾರ್, ಅನ್ವಿಥಾ ಸಾಗರ್, ಸಮನಾ ಅಮೀನ್, ನವೀನ್ ಡಿ.ಪಡಿಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತೂಮಿನಾಡು, ದೀಪಕ್ ರೈ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ವಾಲ್ಟರ್ ನಂದಳಿಕೆ ಮತ್ತು ಸಚಿನ್ ಮಾಡ ನಟಿಸಿದ್ದಾರೆ.ಪ್ರಸನ್ನ ಶೆಟ್ಟಿ ಬೈಲೂರ್ ಅವರ ಸಂಭಾಷಣೆ, ವಿನುತ್ ಕೆ. ಸುವರ್ಣ ಅವರ ಸಿನಿಮಾಟೋಗ್ರಫಿ, ಶ್ರುಜನ್ ಕುಮಾರ್ ಸಂಗೀತ ಸಂಯೋಜನೆ, ಮತ್ತು ಸುಜಯ್ ಶಿವರಾಂ ಮತ್ತು ಕೌಶಿಕ್ ಭಂಡಾರಿ ಅವರ ಸಂಕಲನದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ.

---------------

ನ.೨೨ರಂದು ಗಲ್ಫ್‌ನಲ್ಲಿ ಬಿಡುಗಡೆ

ಗಜಾನನ ಕ್ರಿಕೆಟರ್ಸ್ ಚಿತ್ರವು ನ.೨೨ರಂದು ಗಲ್ಫ್ ದೇಶಗಳಲ್ಲಿ ಪ್ರಥಮ ಪ್ರದರ್ಶನಕ್ಕೆ ಸಜ್ಜಾಗಿದೆ. ನಂತರ ಜ.೨೦೨೬ ಜನವರಿ ೯ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

--------------