-ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಮಾಹಿತಿ । 23,71,542 ಮತದಾರರ ಪೈಕಿ 23,69,860 ಮತದಾರರಿಗೆ ಗಣತಿ ನಮೂನೆ ವಿತರಣೆ
-----ಕನ್ನಡಪ್ರಭ ವಾರ್ತೆ ಕಲಬುರಗಿ
ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಜಿಲ್ಲೆಯಾದ್ಯಂತ ಮಂಗಳವಾರದ ಅಂತ್ಯಕ್ಕೆ ಒಟ್ಟು 23,71,542 ಮತದಾರರ ಪೈಕಿ 14,85,182 ಮತದಾರರ ಗಣತಿ ನಮೂನೆಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.23,71,542 ಮತದಾರರ ಪೈಕಿ 23,69,860 ಮತದಾರರಿಗೆ ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಬಿಎಲ್ಒಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 1,567 ಮತದಾರರು ಮನೆಯಲ್ಲಿ ಇಲ್ಲದಿರುವ, 42,204 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಮತ್ತು 29,610 ಜನ ಮತದಾರರು ನಿಧನ ಹೊಂದಿರುವ ಬಗ್ಗೆ ಹಾಗೂ 9,232 ಮತದಾರರು ಈಗಾಗಲೆ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ.
ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ 8 ವಿಧಾನಸಭಾ ಕ್ಷೇತ್ರದಲ್ಲಿ ಶೇ.100ರಷ್ಟು ಗಣತಿ ನಮೂನೆ ವಿತರಣೆಯಾಗಿದ್ದು, ಇದೀಗ ಡಿಜಿಟೈಸ್ ಕಾರ್ಯ ನಡೆಯುತ್ತಿದೆ.
ಸೇಡಂ ಕ್ಷೇತ್ರ: ಸೇಡಂ ವಿಧಾನಸಭಾ ಕ್ಷೇತ್ರದಾದ್ಯಂತ ಮಂಗಳವಾರದ ಅಂತ್ಯಕ್ಕೆ 1,68,891 ಜನರ ಗಣತಿ ನಮೂನೆ ಪಡೆದುಕೊಂಡು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಾಗಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಸೇಡಂ ತಹಸೀಲ್ದಾರ್ ಶ್ರೇಯಾಂಕಾ ಧನಶ್ರೀ ತಿಳಿಸಿದ್ದಾರೆ. ಇನ್ನು ಕ್ಷೇತ್ರದ ಒಟ್ಟು 2,36,786 ಮತದಾರರಿಗೆ (ಶೇ.100)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ.
----------------ಜೇವರ್ಗಿ ಕ್ಷೇತ್ರ: ಜೇವರ್ಗಿ ವಿಧಾನಸಭಾ ಕ್ಷೇತ್ರದಾದ್ಯಂತ ಮಂಗಳವಾರದ ಅಂತ್ಯಕ್ಕೆ 1,75,985 ಜನರ ಗಣತಿ ನಮೂನೆ ಪಡೆದುಕೊಂಡು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಾಗಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಜೇವರ್ಗಿ ತಹಸೀಲ್ದಾರ್ ಅಂಜುಮ್ ತಬಾಸ್ಸುಮ್ ತಿಳಿಸಿದ್ದಾರೆ. ಕ್ಷೇತ್ರದ ಒಟ್ಟು 2,59,061 ಮತದಾರರಿಗೆ (ಶೇ.100)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಇನ್ನು ಬಿಎಲ್ಒಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 110 ಜನ ಮತದಾರರು ಮನೆಯಲ್ಲಿ ಇಲ್ಲದಿರುವುದು(ಗೈರು), 3,949 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 4,143 ಜನ ಮತದಾರರು ನಿಧನ ಹೊಂದಿರುವುದು ಹಾಗೂ 765 ಜನ ಮತದಾರರು ಈಗಾಗಲೆ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ .
ಗ್ರಾಮೀಣ ಕ್ಷೇತ್ರ: ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭರದಿಂದ ಸಾಗಿದ್ದು, ಕ್ಷೇತ್ರದಾದ್ಯಂತ ಮಂಗಳವಾರ ಅಂತ್ಯಕ್ಕೆ ಒಟ್ಟು 2,74,878 ಮತದಾರರಿಗೆ ನೀಡಲಾದ ಗಣತಿ ನಮೂನೆಗಳ ಪೈಕಿ 1,81,220 (65.93%) ಜನರ ನಮೂನೆಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರು ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಸಾಹಿತ್ಯ ಆಲದಕಟ್ಟಿ ತಿಳಿಸಿದ್ದಾರೆ.ಇನ್ನು 1099 ಮತದಾರರು ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿಎಲ್‌ಒಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 317 ಜನ ಮತದಾರರು ಮನೆಯಲ್ಲಿ ಇಲ್ಲದಿರುವುದು(ಗೈರು), 5,525 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 2,939 ಜನ ಮತದಾರರು ನಿಧನ ಹೊಂದಿರುವುದು ಹಾಗೂ 794 ಜನ ಮತದಾರರು ಈಗಾಗಲೇ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ.
ಫೋಟೋಇಕ್ರಂ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ