ನರಸಿಂಹರಾಜಪುರ: ಸರ್.ಎಂ.ವಿಶ್ವೇಶ್ವರಯ್ಯ ಅವರು ಆಗಿನ ಮೈಸೂರು ರಾಜ್ಯ ಸರ್ವಾಂಗಣೀಯ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಟಿ.ಎಂ.ಶಿವಕುಮಾರ್ ತಿಳಿಸಿದರು.

- ರೋಟರಿ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಎಂಜಿನಿಯರ್ಸ್ ಡೇ । ಸರ್.ಎಂ.ವಿಶ್ವೇಶ್ವರಯ್ಯ ಕುರಿತು ಉಪನ್ಯಾಸ

ನರಸಿಂಹರಾಜಪುರ: ಸರ್.ಎಂ.ವಿಶ್ವೇಶ್ವರಯ್ಯ ಅವರು ಆಗಿನ ಮೈಸೂರು ರಾಜ್ಯ ಸರ್ವಾಂಗಣೀಯ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಟಿ.ಎಂ.ಶಿವಕುಮಾರ್ ತಿಳಿಸಿದರು.

ಶನಿವಾರ ರೋಟರಿ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಎಂಜಿನಯರ್ಸ್ ಡೇ ಅಂಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ಕುರಿತು ಉಪನ್ಯಾಸ ನೀಡಿದರು. ಯಾವುದೇ ಮೂಲ ಸೌಕರ್ಯ ಇಲ್ಲದ ಅಂದಿನ ದಿನಗಳಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಬಡತನ ವಿದ್ದರೂ ಚಿನ್ನೈ ಹಾಗೂ ಪೂನಾದಲ್ಲಿ ವಿಶೇಷ ವ್ಯಾಸಂಗ ಮಾಡಿದ್ದರು. ಮೈಸೂರಿಗೆ ಆಗಮಿಸಿದ ಮೈಸೂರು ರಾಜ್ಯದ ದಿವಾನರಾಗಿ ಹಲವು ಯೋಜನೆ ರೂಪಿಸಿ ಈ ರಾಷ್ಟ್ರಕ್ಕೆ ಅರ್ಪಿಸಿದರು. ಗುಜರಾತ್, ಪೂನಾ, ಮೈಸೂರಿನಲ್ಲಿ ಆಣೆಕಟ್ಟು ನಿರ್ಮಿಸಿದರು. ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಪೇಪರ್ ಮಿಲ್, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಮಹಾರಾಣಿ ಕಾಲೇಜು, ಮೈಸೂರು ವಿವಿ ಹಾಗೂ ಮೈಸೂರು ಬ್ಯಾಂಕ್‌ ಸ್ಥಾಪನೆಗೆ ಕಾರಣಕರ್ತರು ಎಂದರು.

ಇದೇ ಸಂದರ್ಭದಲ್ಲಿ ಕಳೆದ 32 ವರ್ಷಗಳಿಂದ ಸಿವಿಲ್ ಎಂಜಿನಿಯರ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪಿ.ವಿ.ಸೌಮ್ಯ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಪಿ.ಎಸ್. ವಿದ್ಯಾನಂದ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕಾರ್ಯದರ್ಶಿ ಕೆ.ಪಿ.ಮನೋಜ್ ಕುಮಾರ್, ಖಜಾಂಚಿ ಅಭಿಷೇಕ್ ಇದ್ದರು. ರೋಟರಿ ಕ್ಲಬ್ ಸದಸ್ಯರಾದ ಪಿ.ಆರ್.ಸುಕುಮಾರ್, ಕೆ.ಆರ್.ರಜತ್, ಎಚ್.ಡಿ. ವಿನಯ್, ಎಸ್.ಟಿ.ಗೌಡ, ಡಾ.ಸುರೇಶ್ ಕುಮಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೋಟರಿ ಮಾಜಿ ಅಧ್ಯಕ್ಷರು, ರೋಟರಿ ಸಂಸ್ಥೆ ಸದಸ್ಯರು ಇದ್ದರು.