ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ನಂತರ ಕರಡು ಪಟ್ಟಿ ಪ್ರಕಟವಾಗಿದ್ದು, 56,99,660 (ಶೇ.54.87) ಮತದಾರರು ಪಟ್ಟಿಯಲ್ಲಿದ್ದಾರೆ. 46,88,703 (ಶೇ.45.13) ಹೆಸರುಗಳನ್ನು ಕೈಬಿಡಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ನಂತರ ಕರಡು ಪಟ್ಟಿ ಪ್ರಕಟವಾಗಿದ್ದು, 56,99,660 (ಶೇ.54.87) ಮತದಾರರು ಪಟ್ಟಿಯಲ್ಲಿದ್ದಾರೆ. 46,88,703 (ಶೇ.45.13) ಹೆಸರುಗಳನ್ನು ಕೈಬಿಡಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ತಿಳಿಸಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಅವರು, ಪಟ್ಟಿಯಲ್ಲಿ ಉಳಿದುಕೊಂಡವರ ಪೈಕಿ 27,69,866 ಪುರುಷರು, 29,29,092 ಮಹಿಳೆಯರು ಹಾಗೂ ಇತರೆ ಮತ್ತು ತೃತೀಯ ಲಿಂಗ ಮತದಾರರು 702 ಜನರಿದ್ದಾರೆ. ಸ್ಥಳಾಂತರ ಮತ್ತಿತರ ಕಾರಣಗಳಿಂದ ಹೆಸರು ಕೈಬಿಟ್ಟು ಹೋಗಿರುವ ಮತದಾರರು ಆ.24ರಿಂದ ಸೆ.23ರ ವರೆಗೆ ‘ಫಾರ್ಮ್ 6’ ಭರ್ತಿ ಮಾಡಿ ಸರ್ಕಾರದಿಂದ ನೀಡಿರುವ 11 ದಾಖಲೆಗಳ ಪೈಕಿ ಯಾವುದಾದರು ಒಂದು ದಾಖಲೆಯೊಂದಿಗೆ ಮತದಾರರ ನೋಂದಣಾಧಿಕಾರಿ ಮತ್ತು ಬಿಎಲ್‌ಒಗಳಿಗೆ ನೀಡಿ ಹೆಸರನ್ನು ಮರುಸೇರ್ಪಡೆಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ಕರಡು ಮತದಾರರ ಪಟ್ಟಿಯನ್ನು www.ceokarnataka.kar.nic.in ಹಾಗೂ ಜಿಬಿಎ ವೆಬ್‌ಸೈಟ್ www.gba.gov.in ಹಾಗೂ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ವೀಕ್ಷಿಸಬಹುದು. ಅರ್ಹರು, ಹೊಸ ಮತದಾರರು ಫಾರ್ಮ್ 6 ಅನ್ನು ಸಲ್ಲಿಕೆ ಮಾಡುವ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಮುಖ್ಯ ಆಯುಕ್ತ ತಿಳಿಸಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಶನಿವಾರ ಮತ್ತು ಭಾನುವಾರ ಮತದಾರರ ನೋಂದಣಿ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿದರು.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು ಹೆಸರು ಡಿಲೀಟ್

ವಿಧಾನ ಸಭೆ ಕ್ಷೇತ್ರ2026.ಜೂ.16ರವರೆಗೆ ಮತದಾರರುಎಎಸ್‌ಡಿಡಿಒ(ಡಿಲೀಟ್)ಶೇಕಡವಾರು %ದಾಸರಹಳ್ಳಿ4,71,9222,45,72952.07ಬೆಂಗಳೂರು ದಕ್ಷಿಣ7,85,8003,63,78846.30ಮಹದೇವಪುರ6,87,4712,96,02943.06ಬ್ಯಾಟರಾಯನಪುರ5,48,3712,26,95241.39

ಆನೇಕಲ್4,25,6241,73,03640.65ಯಶವಂತಪುರ6,24,7192,40,02238.42ಯಲಹಂಕ4,77,1321,71,86036.02

ಸಿ. ವಿ. ರಾಮನ್ ನಗರ2,74,1421,40,17151.13ಮಲ್ಲೇಶ್ವರ2,30,4821,08,63247.13ಕೆ. ಆರ್.ಪುರ5,60,1022,58,99846.24ಮಹಾಲಕ್ಷ್ಮಿ ಲೇಔಟ್2,97,3261,34,46845.23ಹೆಬ್ಬಾಳ3,01,9001,30,52443.23

ಸರ್ವಜ್ಞನಗರ3,99,3881,70,70242.74ಪುಲಕೇಶಿನಗರ2,69,2811,09,04140.49ರಾಜಾಜಿನಗರ2,10,4781,00,76047.87

ಗಾಂಧಿನಗರ2,35,8381,12,77547.82ರಾಜರಾಜೇಶ್ವರಿನಗರ5,17,8592,45,46747.40ಶಾಂತಿನಗರ2,37,0851,08,71345.85ಚಿಕ್ಕಪೇಟೆ2,37,3541,04,05043.84ಚಾಮರಾಜಪೇಟೆ2,52,0301,07,72242.74ಶಿವಾಜಿನಗರ1,99,27581,23640.77ಬೊಮ್ಮನಹಳ್ಳಿ4,84,9732,65,89454.83

ಬಿ. ಟಿ.ಎಂ ಲೇಔಟ್2,82,0351,45,56351.61ವಿಜಯನಗರ3,20,7931,64,12251.16ಗೋವಿಂದರಾಜನಗರ3,06,4861,48,92748.59ಬಸವನಗುಡಿ2,37,1611,13,25247.75ಪದ್ಮನಾಭನಗರ2,93,1491,26,61543.19ಜಯನಗರ2,20,18793,65542.53

ಒಟ್ಟು1,03,88,36346,88,70345.13-ಬಾಕ್ಸ್-ಬೆಂ.ದಕ್ಷಿಣ ಗರಿಷ್ಠ, ಜಯನಗರ

ಕನಿಷ್ಠ ಹೆಸರುಗಳು ಡಿಲೀಟ್

ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಹೆಸರುಗಳು ಡಿಲೀಟ್ ಆಗಿರುವುದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ. ಇಲ್ಲಿ 3,63,788 ಹೆಸರುಗಳು ಡಿಲೀಟ್ ಆಗಿವೆ. ಜಯನಗರದಲ್ಲಿ ಕನಿಷ್ಠ ಅಂದರೆ 93,655 ಹೆಸರುಗಳು ಡಿಲೀಟ್ ಆಗಿವೆ. ಶೇಕಡವಾರು ಪರಿಗಣಿಸಿದರೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗರಿಷ್ಠ ಶೇ.54.83 ಹಾಗೂ ಯಲಹಂಕ ಕ್ಷೇತ್ರದಲ್ಲಿ ಕಡಿಮೆ ಅಂದರೆ ಶೇ.36.02ರಷ್ಟು ಮತದರಾರ ಹೆಸರು ಡಿಲೀಟ್ ಆಗಿವೆ.ನಗರದ 28 ಕ್ಷೇತ್ರಗಳಲ್ಲಿ ಎಸ್‌ಐಆರ್ ಬಳಿಕ ಅಂಕಿ-ಅಂಶಗಳು

ಗೈರು ಹಾಜರಿ 7,27,258

ಶಾಶ್ವತ ಸ್ಥಳಾಂತರ32,74,535ನಿಧನ3,19,113ಡುಪ್ಲಿಕೇಟ್63,548ಇನ್ನಿತರ3,04,249ಪ್ರಕಾಶ್ ರಾಜ್ ಹೊಸದಾಗಿ

ಫಾರ್ಮ್ ಭರ್ತಿ ಮಾಡಬೇಕು

ನಟ ಪ್ರಕಾಶ್ ರಾಜ್ ಅವರು ಈ ಹಿಂದೆ ವಾಸವಿದ್ದ ಮನೆಯಲ್ಲಿ ಈಗ ವಾಸವಿಲ್ಲದ ಕಾರಣ ಅವರ ಹೆಸರನ್ನು ಸ್ಥಳಾಂತರ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಸದಾಗಿ ಫಾರ್ಮ್ 6ನಲ್ಲಿ ವಿವರಗಳನ್ನು ಭರ್ತಿ ಮಾಡಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಕೇಂದ್ರ ಪಾಲಿಕೆ ಆಯುಕ್ತ ಜಿ. ಜಗದೀಶ್ ಉತ್ತರಿಸಿದರು.

ಪಟ್ಟಿಯಲ್ಲಿ ಹೆಸರು ಇರುವವರ ವಿವರಗಳು: 27,69,866 ಪುರುಷರು, 29,29,092 ಮಹಿಳೆಯರು, 702 ಇತರೆ ಮತ್ತು ತೃತೀಯ ಲಿಂಗಿಗಳು.