The Special Intensive Revision (SIR) process for electoral rolls has commenced in the district, and the task of distributing enumeration forms (EF) through Booth Level Officers (BLOs) via door-to-door visits is proceeding briskly in Yadgir district.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಆರಂಭವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಬಿಎಲ್‍ಒ ಗಳ ಮೂಲಕ ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆ (ಎನುಮರೇಷನ್ ಫಾರಂ-ಇಎಫ್) ವಿತರಿಸುವ ಕಾರ್ಯವು ಚುರುಕಿನಿಂದ ಸಾಗುತ್ತಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಮಾಹಿತಿ ಪ್ರಕಾರ ಸೋಮವಾರ ಸಂಜೆ 4 ರ ವರೆಗಿನ ತನಕ ಜಿಲ್ಲೆಯಲ್ಲಿ ಶೇ. 97.08 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಮನೆ-ಮನೆಗೆ ಗಣತಿ ನಮೂನೆ ನೀಡುವುದು ಹಾಗೂ ಡಿಜಿಟೈಸೇಶನ್ ಕಾರ್ಯ ಜೂ.30 ರಿಂದ ಆರಂಭವಾಗಿದ್ದು, ಆ.17 ರ ತನಕ ನಡೆಯಲಿದೆ. ಜೂ.16 ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 10,53,236 ಮತದಾರರು ದಾಖಲಾಗಿದ್ದಾರೆ.

ಜಿಲ್ಲೆಯಲ್ಲಿ 10,53,236 (ಶೇ.100) ಮತದಾರರಿಗೆ ಎಣಿಕೆ ನಮೂನೆಗಳ ವಿತರಿಸಲಾಗಿದ್ದು, ಎಲ್ಲ ಅರ್ಜಿಗಳನ್ನು ಡಿಜಿಟಲೈಸ್‌ ಮಾಡಲಾಗಿದೆ. ಜತೆಗೆ 5,271 (0.50%) ಇಎಫ್ ಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ.

ಮನೆ-ಮನೆ ಸಮೀಕ್ಷೆಯ ವೇಳೆ ಜಿಲ್ಲೆಯಲ್ಲಿ 1,88,599 ಎಎಸ್‍ಡಿಡಿಓ ಮತದಾರರನ್ನು ಗುರುತಿಸಲಾಗಿದ್ದು, 17,342 ಗೈರಾಗಿದ್ದಾರೆ. 1,16,289 ಮಂದಿ ಶಾಶ್ವತ ಸ್ಥಳಾಂತರಗೊಂಡಿದ್ದಾರೆ. 29,026 ಜನ ಮೃತರಾಗಿದ್ದು, ಈಗಾಗಲೇ ಇತರೆ 3,532 ಸಹಿತ 22,410 ಮಂದಿ ನೋಂದಾಯಿತರಾಗಿದ್ದಾರೆ

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಡಿಜಿಟೈಸೇಶನ್ ಕಾರ್ಯ ಪ್ರಗತಿಯಲ್ಲಿದ್ದು, ಅದರಂತೆ ಶೋರಾಪೂರ ಶೇ.100, ಶಹಾಪೂರ ಶೇ.100, ಯಾದಗಿರಿ ಶೇ.100, ಗುರುಮಟಕಲ್ ಶೇ.100, ವಡಗೇರಾ ಶೇ.100, ಹುಣಸಗಿ ಶೇ.100. ಡಿಜಿಟೈಸ್‌ಗೊಂಡಿದೆ.

ಜಿಲ್ಲೆಯಲ್ಲಿ 1,134 ಭಾಗಗಳಲ್ಲಿ ಈ ಮಹತ್ವದ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಸಂಪೂರ್ಣ ಡಿಜಿಟೈಸೇಶನ್ ಪ್ರಕ್ರಿಯೆ ಮುಕ್ತಾಯಗೊಳಿಸಲು ಚುನಾವಣಾ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

----ಫೋಟೊ-----

11ವೈಡಿಆರ್‌5:

ಡಿಸಿ ರಾಹುಲ್ ತುಕಾರಾಮ ಪಾಂಡ್ವೆ