ಉದ್ಘಾಟನೆಗೆ ಕಾದಿರುವ ಸಿರಿಮನೆ ಪ್ರವಾಸೋದ್ಯಮ ಇಲಾಖೆ ವಾಣಿಜ್ಯ ಮಳಿಗೆ ಕಟ್ಟಡ

| Published : Jan 31 2024, 02:19 AM IST

ಉದ್ಘಾಟನೆಗೆ ಕಾದಿರುವ ಸಿರಿಮನೆ ಪ್ರವಾಸೋದ್ಯಮ ಇಲಾಖೆ ವಾಣಿಜ್ಯ ಮಳಿಗೆ ಕಟ್ಟಡ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದಲ್ಲಿರುವ ಸಿರಿಮನೆ ಜಲಪಾತ ಶೃಂಗೇರಿಯಿಂದ ಸುಮಾರು 11 ಕಿ.ಮಿ ದೂರದಲ್ಲಿದೆ. ಇಲ್ಲಿ ವಿವಿಧೆಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು 1 ಕೋಟಿ ರು. ಅನುದಾನದಲ್ಲಿ ನೂತನ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಸುಮಾರು ಮೂರು ವರ್ಷಗಳು ಕಳೆದಿವೆ. ಆದರೆ ಇನ್ನೂ ಉದ್ಘಾಟನೆಗೊಂಡಿಲ್ಲ. 3 ವರ್ಷ ಕಳೆದರೂ ಉದ್ಘಾಟನೆ ಭಾಗ್ಯದಿಂದ ವಂಚಿತವಾಗಿದೆ.

- ಕಾಮಗಾರಿ ಮುಗಿದು 3 ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯವಿಲ್ಲ.

ಕನ್ನಡಪ್ರಭ ವಾರ್ತೆ,ಶೃಂಗೇರಿ

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದಲ್ಲಿರುವ ಸಿರಿಮನೆ ಜಲಪಾತ ಶೃಂಗೇರಿಯಿಂದ ಸುಮಾರು 11 ಕಿ.ಮಿ ದೂರದಲ್ಲಿದೆ. ಇಲ್ಲಿ ವಿವಿಧೆಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು 1 ಕೋಟಿ ರು. ಅನುದಾನದಲ್ಲಿ ನೂತನ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಸುಮಾರು ಮೂರು ವರ್ಷಗಳು ಕಳೆದಿವೆ. ಆದರೆ ಇನ್ನೂ ಉದ್ಘಾಟನೆಗೊಂಡಿಲ್ಲ. 3 ವರ್ಷ ಕಳೆದರೂ ಉದ್ಘಾಟನೆ ಭಾಗ್ಯದಿಂದ ವಂಚಿತವಾಗಿದೆ.

ಮಳೆ ಬಿಸಿಲಿಗೆ ಸುಣ್ಣ ಬಣ್ಣಗಳು ಮಾಸಿ ಹೋಗಿವೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಕಳಚಿ ಬೀಳುತ್ತಿವೆ. ಕಟ್ಟಡ ಪುನ ಶಿಥಿಲಾವಸ್ಥೆಗೆ ತಲುಪುತ್ತಿವೆ. ಇಲ್ಲಿಗೆ ನಿತ್ಯನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಒಂದೆಡೆ ಮಳಿಗೆಗಳು ವ್ಯವಸ್ಥಿತ ವಾಗಿದ್ದರೆ ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ಇನ್ನಷ್ಟು ಅನುಕೂಲವಾಗುತ್ತದೆ. ಸರ್ಕಾರ ಇಷ್ಟು ಖರ್ಚುವೆಚ್ಚಮಾಡಿ ಕಟ್ಟಡ ನಿರ್ಮಾಣ ಮಾಡಿದ್ದರೂ ಅದು ಉದ್ಘಾಟನೆಯಾಗದೇ ಉಪಯೋಗಕ್ಕೆ ಬಾರದಿರುವುದು ನಿಜಕ್ಕೂ ದುರಾದೃಷ್ಠಕರ.

ಕಳೆದ 2007 ರಿಂದ ಅರಣ್ಯ ಇಲಾಖೆ ಸುಪರ್ದಿಯಲ್ಲಿ ಗ್ರಾಮ ಅರಣ್ಯ ಸಮಿತಿಯವರು ಇಲ್ಲಿನ ಉಸ್ತುವಾರಿ ನಿರ್ವಹಿಸಿ ಕೊಂಡು ಬರುತ್ತಿದೆ. ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಸಿಗುತ್ತಿದೆ. ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿಯವರು ಉದ್ಘಾಟನೆಗೆ ಕಾಯುತ್ತಿರುವ ಈ ವಾಣಿಜ್ಯ ಮಳಿಗೆ ಕಟ್ಟಡದ ಉದ್ಘಾಟನೆಗೆ ಆಗುತ್ತಿರುವ ವಿಘ್ನವನ್ನು ನಿವಾರಿಸಿಗೆ ಪ್ರವಾಸಿಗರಿಗೆ ಇನ್ನಷ್ಟು ಸೌಲಭ್ಯ ಸಿಗುವಂತೆ ಮಾಡಬೇಕಿದೆ.30 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದಲ್ಲಿ ಉದ್ಘಾಟನೆಗಾಗಿ ಕಾಯುತ್ತಿರುವ ಪ್ರವಾಸೋದ್ಯಮ ಇಲಾಖೆ ವಾಣಿಜ್ಯ ಮಳಿಗೆ ಕಟ್ಟಡ.30 ಶ್ರೀ ಚಿತ್ರ 3-ಅನುಧಾನ ಮಂಜುರಾಗಿರುವ ನಾಮಫಲಕ.