ಧರ್ಮಸ್ಥಳದ ಮೇಲಿನ ಕಳಂಕಕ್ಕೆ ಎಸ್ಐಟಿ ಮೂಲಕ ರಾಜ್ಯಕ್ಕೆ ಬೆಳಕು ಚೆಲ್ಲಲಾಯಿತು: ಸಂತೋಷ್ ಲಾಡ್

| Published : Sep 01 2025, 01:03 AM IST

ಧರ್ಮಸ್ಥಳದ ಮೇಲಿನ ಕಳಂಕಕ್ಕೆ ಎಸ್ಐಟಿ ಮೂಲಕ ರಾಜ್ಯಕ್ಕೆ ಬೆಳಕು ಚೆಲ್ಲಲಾಯಿತು: ಸಂತೋಷ್ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲು ಎಸ್ಐಟಿಯನ್ನು ಯಾಕೆ ಸ್ವಾಗತ ಮಾಡಿದರು?, ಎಸ್ಐಟಿ ತನಿಖೆ ಸಹ ಪ್ರಾರಂಭ ಮಾಡಿತು. ಮೃತದೇಹಗಳು ಸಿಗದಿದ್ದಕ್ಕೆ ರಾಜಕೀಯ ಲಾಭ ಪಡೆಯಲು ಮುಂದಾದರು. ಎಸ್ಐಟಿ ರಚನೆ ಮಾಡಿದಾಗಲೇ ವಿದೇಶಿ ಫಂಡಿಂಗ್ ಬಗ್ಗೆ ಹೇಳಬೇಕಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಧರ್ಮಸ್ಥಳದ ಮೇಲೆ ಒಂದು ಕಳಂಕ ಇತ್ತು. ಕೆಲವರು ಧರ್ಮಸ್ಥಳದ ಮೇಲೆ ಆರೋಪ ಮಾಡುತ್ತಿದ್ದರು. ಎಸ್ಐಟಿ ಮೂಲಕ ರಾಜ್ಯಕ್ಕೆ ಬೆಳಕು ಚೆಲ್ಲಲಾಯಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಬಿಜೆಪಿ, ಜೆಡಿಎಸ್ ನಾಯಕರಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ ಮೈಸೂರಿನಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ಮೊದಲು ಎಸ್ಐಟಿಯನ್ನು ಯಾಕೆ ಸ್ವಾಗತ ಮಾಡಿದರು?, ಎಸ್ಐಟಿ ತನಿಖೆ ಸಹ ಪ್ರಾರಂಭ ಮಾಡಿತು. ಮೃತದೇಹಗಳು ಸಿಗದಿದ್ದಕ್ಕೆ ರಾಜಕೀಯ ಲಾಭ ಪಡೆಯಲು ಮುಂದಾದರು. ಎಸ್ಐಟಿ ರಚನೆ ಮಾಡಿದಾಗಲೇ ವಿದೇಶಿ ಫಂಡಿಂಗ್ ಬಗ್ಗೆ ಹೇಳಬೇಕಿತ್ತು ಎಂದರು.

ಪಾರ್ಲಿಮೆಂಟ್ ಉದ್ಘಾಟನೆ ಆದಾಗ ದ್ರೌಪದಿ ಮುರ್ಮು ಅವರನ್ನು ಯಾಕೆ ಕರೆಯಲಿಲ್ಲ?, ಮೊದಲು ಇದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ. ಮುರ್ಮು ಅವರು ವಿಧವೆ ಅಥವಾ ಎಸ್ಟಿ ಸಮುದಾಯ ಅನ್ನೋ ಕಾರಣಕ್ಕೆ ಕರೀಲಿಲ್ವಾ?, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣದೆ ಇರೋದೇ ಬಿಜೆಪಿ ಐಡಿಯಾಲಜಿ. ಬಿಜೆಪಿ ನಾಯಕರು ಯಾರು ಸಹ ಹೆಣ್ಣುಮಕ್ಕಳನ್ನು ಗೌರವಿಸಲ್ಲ ಎಂದು ಅಆರೋಪಿಸಿದರು.

ಗಾಂಧೀಜಿ ಕೊಂದಿದ್ದು ಆರ್‌ಎಸ್ಎಸ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಸಿಎಂ ಹೇಳಿರೋದರಲ್ಲಿ ಏನಾದ್ರು ಡೌಟ್ ಇದಿಯಾ?, ಸಿದ್ದರಾಮಯ್ಯ ಏನು ಸುಳ್ಳು ಹೇಳ್ತಾರಾ?, ಗಾಂಧೀಜಿ ಕೊಂದಿದ್ದು ಯಾರು ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದರು.

ದಸರಾ ಉದ್ಘಾಟಕರ ಪರ-ವಿರೋಧದ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಾನು ಮುಷ್ತಾಕ್ ಕರೀಬಾರ್ದು ಅಂತ ಸಂವಿಧಾನದಾಗ್ ಏನಿಲ್ಲ. ಇವರು ರಾಮಮಂದಿರ ಓಪನ್ ಮಾಡಿದಾಗ ಪೂಜೆ ಮಾಡಿದ್ದು ಯಾರು?, ರಾಮಮಂದಿರ ಓಪನ್ ವೇಳೆ ಪ್ರೊಟೋಕಾಲ್ ಉಲ್ಲಂಘನೆ ಆಗಿಲ್ವ?, ಬ್ರಾಹ್ಮಣ ವ್ಯವಸ್ಥೆ ಬಿಟ್ಟು ನಾವೇ ಮಾಡಕ್ ಆಗುತ್ತಾ?, ನಾನು ಕೂಡ ಹಿಂದೂ.

ನಮ್ಮ ಮನೆಗಳಲ್ಲಿ ಯಾವುದೇ ಪೂಜೆ ಮಾಡಿದರು ಯಾರ್ ಮಾಡ್ತಾರೆ ಎಂದು ಪ್ರಶ್ನಿಸಿದರು.

ಚೀನಾಗೆ ಶೇಕ್ ಹ್ಯಾಂಡ್- ಕಿಡಿ:

ಪಾಕಿಸ್ತಾನ ಮುಸಲ್ಮಾನ ವಿಚಾರ ಮಾತನಾಡೋದು ಬಿಜೆಪಿ ನಾಯಕರೇ. ಸಿಂದೂರ ಬಗ್ಗೆ ಮಾತನಾಡೋರು ಪಾಕಿಸ್ತಾನ ಜೊತೆ ಈಗ ಮ್ಯಾಚ್ ಆಡ್ತಿದ್ದಾರೆ. ಪಾಕಿಸ್ತಾನಕ್ಕೆ ನೀರು ಕೊಡಲ್ಲ ಅಂತಾರೆ. ಚೀನಾ ವಸ್ತುಗಳ ಬಾಯ್ಕಾಟ್ ಮಾಡ್ತೀವಿ ಅಂತಾರೆ. ಈಗ ಚೀನಾಗೆ ಹೋಗಿ ಶೇಕ್ ಹ್ಯಾಂಡ್ ಮಾಡ್ತಾರೆ. ಭಾರತ-ಪಾಕಿಸ್ತಾನ ವಾರ್‌ನಲ್ಲಿ ಪಾಕ್‌ಗೆ ಚೀನಾನೇ ಸಪೋರ್ಟ್ ಮಾಡಿದ್ದು. ಪಾಕಿಸ್ತಾನ, ಚೀನಾ ಜೊತೆಯಾಗಿ ಇಂಡಿಯಾ ಮೇಲೆ ವಾರ್ ಮಾಡಿದ್ದು. ಈಗ ಅದೇ ಚೀನಾಗೆ ಹೋಗಿ ಶೇಕ್ ಹ್ಯಾಂಡ್ ಮಾಡಿ ಬರ್ತೀರಾ ಎಂದು ಕಿಡಿಕಾರಿದರು.