ರೈಲ್ವೆ ಫ್ಲೈಓವರ್‌, ಅಂಡರ್‌ಪಾಸ್‌ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

| Published : Jul 14 2024, 01:35 AM IST

ರೈಲ್ವೆ ಫ್ಲೈಓವರ್‌, ಅಂಡರ್‌ಪಾಸ್‌ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು, ದುಡುಕನಹಳ್ಳಿ, ಬೀರವಳ್ಳಿ ಗ್ರಾಮಗಳಲ್ಲಿ ಪ್ಲೈ ಓವರ್ ಮತ್ತು ಅಂಡರ್‌ಪಾಸ್ ಮತ್ತು ಮಂದಗೆರೆ ಗ್ರಾಮದಲ್ಲಿ ರೈಲ್ವೆ ಪ್ಲೈ ಓವರ್ ಮತ್ತು ರೈಲ್ವೇ ಗೇಟ್ ನಿರ್ಮಾಣ ಆಗಬೇಕಿದೆ. ತಾವುಗಳು ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಪ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಾಣದ ಸಮಸ್ಯೆಗಳನ್ನು ಪರಿಹರಿಸಿಕೊಟ್ಟರೆ ನಮ್ಮ ಭಾಗದ ಜನರಿಗೆ ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಜನರು 40-50 ವರ್ಷಗಳಿಂದ ರೈತರು ಎದುರಿಸುತ್ತಿದ್ದ ರೈಲ್ವೆ ಫ್ಲೈಓವರ್ ಹಾಗೂ ಅಂಡರ್‌ಪಾಸ್ ನಿರ್ಮಾಣ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ಮಂಡ್ಯ ಜಿಲ್ಲೆಯ ಸಂಸದ ಕುಮಾರಸ್ವಾಮಿಯವರ ವಿಶೇಷ ಆಸಕ್ತಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಕೇಂದ್ರ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಹಾಯ್ದು ಹೋಗಿರುವ ರೈಲ್ವೆ ಮಾರ್ಗದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಗಳನ್ನು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ತಾಲೂಕಿನ ಗಡಿ ಭಾಗದಲ್ಲಿ ಹಾಯ್ದುಹೋಗಿರುವ ರೈಲ್ವೆ ಮಾರ್ಗ ಕೇವಲ ಹಲವು ಗ್ರಾಮಗಳಿಗೆ ಮಾತ್ರ ಅನುಕೂಲ ಕಲ್ಪಿಸುತ್ತಿದ್ದು, ಇದರೊಂದಿಗೆ ಅನೇಕ ಸಮಸ್ಯೆಗಳೂ ಸಹ ರೈತರಿಗೆ ಎದುರಾಗಿವೆ. ಇವುಗಳನ್ನು ಪರಿಹರಿಸುವ ಗೋಜಿಗೆ ಯಾವುದೇ ನಾಯಕರು ಮುಂದಾಗಿರಲಿಲ್ಲ. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದ ನಂತರ ನಮ್ಮ ತಾಲೂಕಿನಲ್ಲಿ ರೈಲ್ವೆ ಮಾರ್ಗದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ಮನವಿ ಮಾಡಿದ ಪರಿಣಾಮ ಅವರು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದರು.

ತಾಲೂಕಿನ ಅಕ್ಕಿಹೆಬ್ಬಾಳು, ದುಡುಕನಹಳ್ಳಿ, ಬೀರವಳ್ಳಿ ಗ್ರಾಮಗಳಲ್ಲಿ ಪ್ಲೈ ಓವರ್ ಮತ್ತು ಅಂಡರ್‌ಪಾಸ್ ಮತ್ತು ಮಂದಗೆರೆ ಗ್ರಾಮದಲ್ಲಿ ರೈಲ್ವೆ ಪ್ಲೈ ಓವರ್ ಮತ್ತು ರೈಲ್ವೇ ಗೇಟ್ ನಿರ್ಮಾಣ ಆಗಬೇಕಿದೆ. ತಾವುಗಳು ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಪ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಾಣದ ಸಮಸ್ಯೆಗಳನ್ನು ಪರಿಹರಿಸಿಕೊಟ್ಟರೆ ನಮ್ಮ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದರು.

ರೈಲ್ವೆ ಇಲಾಖೆಯ ಡೆಪ್ಯುಟಿ ಚೀಫ್ ಎಂಜಿನಿಯರ್ ಗೂಟನ್ ಮಾತನಾಡಿ, ಫ್ಲೈಓವರ್ ಹಾಗೂ ಅಂಡರ್ ಪಾಸ್ ನಿರ್ಮಾಣಕ್ಕೆ ಅಗತ್ಯವಾಗಿರುವ ಸ್ಥಳವನ್ನು ರೈಲ್ವೆ ಇಲಾಖೆಯ ಮುಖಾಂತರ ಖರೀದಿ ಮಾಡಬೇಕಾಗುತ್ತದೆ. ಅದಕ್ಕೆ ರೈತರು ಸಹಕಾರ ನೀಡಬೇಕು. ಇಲ್ಲಿರುವ ರೈಲ್ವೆ ಟ್ರಾಕ್‌ಗಳಿಗೆ ಹೊಂದಿಕೊಂಡಿರುವ ರಸ್ತೆಗಳನ್ನು ಒಂದಷ್ಟು ಬದಲಾವಣೆ ಮಾಡಬೇಕಾಗುತ್ತದೆ. ಅದನ್ನು ತಾವು ರಾಜ್ಯ ಸರ್ಕಾರದ ಜತೆ ಪತ್ರ ವ್ಯವಹಾರ ಮಾಡಲು ಅವಕಾಶ ಮಾಡಿಸಿಕೊಡುವಂತೆ ತಿಳಿಸಿದರು.

ಭೇಟಿ ಸಮಯದಲ್ಲಿ ವಕೀಲ ನವೀನ್‌ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರ ಅಕ್ಕಿಹೆಬ್ಬಾಳು ರಘು, ಗ್ರಾಪಂ ಸದಸ್ಯರಾದ ಮಂಜೇಗೌಡ, ಸಾಕ್ಷೀಬೀಡು ಅಶೋಕ್, ಪ್ರಭುದೇವೇಗೌಡ, ಈರೇಗೌಡ, ಬಿ.ಆರ್.ಕೃಷ್ಣ, ಬಿ.ಎನ್.ಕುಮಾರ್, ಬಸವಲಿಂಗಪ್ಪ, ಎನ್.ಕೆ.ನಿಂಗೇಗೌಡ, ಬಿ.ಟಿ.ಕುಮಾರ್, ಹರೀಶ್ ಇತರರಿದ್ದರು.