ಸಾರಾಂಶ
ಕೊಳ್ಳೇಗಾಲ: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹಳೇ ಕಾಮಗಾರಿ ಪುನರ್ ಆರಂಭಿಸುವ ಹಿನ್ನೆಲೆ ಸ್ಥಳಕ್ಕೆ ಕೆಆರ್‌ಐಡಿಎಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಡಾ.ಅಂಬೇಡ್ಕರ್ ಸ್ಮಾರಕ ಸಂಘದ ನೂತನ ಅಧ್ಯಕ್ಷ ಆನಂದಮೂರ್ತಿ ಅವರ ಮನವಿ ಮೇರೆಗೆ ಸ್ಥಳಕ್ಕೆ ಕೆಆರ್‌ಐಡಿಎಲ್ ಪ್ರಭಾರ ಇಇ ಚಿಕ್ಕಲಿಂಗಯ್ಯ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಭವನದಲ್ಲಿ ಬಾಕಿ ಉಳಿದಿರುವ ಕೆಲಸಗಳ ಕುರಿತು ಪಟ್ಟಿ ತಯಾರಿಸಿ ಕಾಮಗಾರಿ ಸಂಬಂಧ ಚರ್ಚಿಸಿದರು. ಈ ವೇಳೆ ಕೆಆರ್‌ಐಡಿಎಲ್ ಪ್ರಭಾರ ಇಇ ಚಿಕ್ಕಲಿಂಗಯ್ಯ ಮಾತನಾಡಿ, ಅಂಬೇಡ್ಕರ್ ಭವನದ ಪೌರ್ಟಿಕ್ ಪ್ರದೇಶದಲ್ಲಿ ಸುಮಾರು 8 ಮೀಟರ್ ಅಳತೆಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ, ವುಡ್ ಸೈನ್ಸ್ ಸೂಚನೆ ಮೇರೆಗೆ ಭವನದ ಅರ್ಥ ಮುಂಬಾಗಿಲು ಬದಲಾವಣೆ, ಸ್ಯಾನಟರಿ ಕನೆಕ್ಷನ್ ರೀಪೈಪ್‌ಲೈನ್ ಕಾಮಗಾರಿ, ಭವನದ ಸಭಾಂಗಣದ ಫಾಲ್ ಸೀಲಿಂಗ್‌ನಲ್ಲಿ ಅಲ್ಲಲ್ಲಿ ಹೊಡೆದಿರುವ ಪ್ಲೇಟ್ ಸರಿಪಡಿಸುವುದು, ಭವನದೊಳಗಿನ ನೆಲಕ್ಕೆ ಪಾಲೀಸ್, ಕೆಲವೆಡೆ ಜಖಂಗೊಂಡ ಗ್ಲಾಸ್ ಬದಲಾವಣೆ, ಫ್ಯಾನ್ ಹಾಗೂ ಲೈಟ್ಸ್ ಅಳವಡಿಕೆ ಹಾಗೂ ವಿವಿಧ ಡೋರ್‌ಗಳ ಪಾಲೀಸ್ ಕೆಲಸಗಳನ್ನು ಅನುದಾನ ಲಭ್ಯತೆ ಆಧಾರದಲ್ಲಿ ಶೀಘ್ರವೇ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.ಅಲ್ಲದೇ, ಈ ಎಲ್ಲ ಬಾಕಿ ಉಳಿದ ಕಾಮಗಾರಿಗಳನ್ನು ಆರಂಭಿಸಲು ಕಡ್ಡಾಯವಾಗಿ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಿಂದ ಲಿಖಿತ ಕಾರ್ಯಾದೇಶ ಅಗತ್ಯವಿದ್ದು ಕೊಡಿಸಿಕೊಡಿ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಎಂ.ಪಾಪಣ್ಣ, ಖಜಾಂಚಿ ರಾಜೇಶ್, ಸದಸ್ಯರಾದ ಕೃಷ್ಣಮೂರ್ತಿ, ಶಂಕರ್ ಚೇತನ್, ಬ್ಯಾಂಕ್ ರಾಚಪ್ಪಾಜಿ, ಎಲ್.ಲಿಂಗರಾಜು, ಎಸ್.ಎಲ್.ಲಿಂಗರಾಜು ಇದ್ದರು.
;Resize=(128,128))
;Resize=(128,128))
;Resize=(128,128))