ಸಾರಾಂಶ
ಕೊಟ್ಟೂರು: ಇಲ್ಲಿನ ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಷಷ್ಟಿಪೂರ್ಣ ಸಮಾರಂಭ ಮಾರ್ಚ್ 20ರಿಂದ ಏಪ್ರಿಲ್ 4ರ ವರೆಗೆ ಅದ್ಧೂರಿಯಾಗಿ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಉಜ್ಜಿಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಸೋಮವಾರ ಸಂಜೆ ಪಟ್ಟಣದ ಡೋಣೂರು ಚಾನುಕೋಟಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಗಳ ಷಷ್ಟಿ ಪೂರ್ಣ ಸಮಾರಂಭದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಸಮಾರಂಭ 2018ರಿಂದ ಹಲವಾರು ಕಾರಣಗಳಿಂದ ಸ್ಥಗಿತಗೊಂಡಿತ್ತು. ನಂತರ ಸೊಲ್ಲಾಪುರ, ಬಿಜಾಪುರ ಮತ್ತಿತರ ಕಡೆ ನಿಯಮಿತವಾಗಿ ನಡೆದುಕೊಂಡು ಬಂದಿದೆ. ಇದೀಗ ಕೊಟ್ಟೂರಿನಲ್ಲಿ ಈ ಬಾರಿ ಚಾನುಕೋಟಿ ಮಠಾಧ್ಯಾಕ್ಷರ ಷಷ್ಟಿಪೂರ್ತಿ ಸಮಾರಂಭದೊಂದಿಗೆ ಭಕ್ತರು 15ದಿನಗಳ ಕಾಲ ಹಮ್ಮಿಕೊಳ್ಳುವ ಮೂಲಕ ಶಿವಾಚಾರ್ಯರ ಬಗ್ಗೆ ತಮಗಿರುವ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.ಈ ಕಾರ್ಯಕ್ರಮಗಳಲ್ಲಿ ಪಂಚಪೀಠಾಧೀಶ್ವರರು ಪಾಲ್ಗೊಂಡು ಇಷ್ಟಲಿಂಗ ಮಹಾಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಏ. 3ರಂದು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದರು.
ಕೆರೂರಿನ ಶಿವಕುಮಾರ ಸ್ವಾಮಿ ಮತನಾಡಿ, ಚಾನುಕೋಟಿ ಶ್ರೀಗಳ ಷಷ್ಟಿ ಪೂರ್ತಿ ಸಮಾರಂಭದ ಪ್ರಯುಕ್ತ ಶ್ರೀಗಳಿಗೆ 60 ತುಲಾಭಾರ ಸೇವೆ ಕಲ್ಪಿಸಿಕೊಡಲಾಗುತ್ತಿದ್ದು, ಇದರ ಜೊತೆ 15 ದಿನಗಳ ಕಾಲ ದಿನನಿತ್ಯ ಅನ್ನ ದಾಸೋಹ ಸೇವೆ ಏರ್ಪಡಿಸಲು ಮುಂದಾಗಬೇಕು ಎಂದು ಹೇಳಿದರು.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಬೆಂಗಳೂರಿನ, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನಂದಿಪುರದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಪ್ರಕಾಶ್ ಕೊಟ್ಟೂರು ದೇವರು ಸೇರಿದಂತೆ 10ಕ್ಕೂ ಹೆಚ್ಚು ಶಿವಾಚಾರ್ಯರು ಭಾಗವಹಿಸಿದರು.
ಜಿಪಂ ಮಾಜಿ ಸದಸ್ಯರಾದ ಪಿ.ಎಚ್. ದೊಡ್ಡರಾಮಣ್ಣ, ಎಂ.ಎಂ.ಜೆ. ಹರ್ಷವರ್ದನ್, ಕೆ.ಎಸ್. ಈಶ್ವರಗೌಡರ್, ಎಂ. ಗುರುಬಸವ ಸ್ವಾಮಿ, ಕೆ. ಮಂಜುನಾಥ ಗೌಡ, ಮತ್ತಿತರರ ಮಾತನಾಡಿದರು.ಮುಖಂಡರಾದ ಬಸಾಪುರದ ಪಂಪಾಪತಿ, ಕರಡಿ ಕೊಟ್ರೇಶ್, ಚಾಪೆ ಚಂದ್ರಪ್ಪ, ಅಟವಾಳಿಗಿ ಭೋಜರಾಜ್ , ಅಡಕೆ ಮಂಜುನಾಥ, ಅಟವಾಳಿಗೆ ಸಂತೋಷ್, ಎಂ.ಎಂ.ಜೆ. ಶೋಬಿತ್, ಕೆ.ಶಿವಕುಮಾರ ಗೌಡ ಮತ್ತಿತರರು ಭಾಗವಹಿಸಿದರು.
ಪ್ರಶಾಂತ್ ಸಾಗರ ಶಿವಾಚಾರ್ಯ ಮಹಾಸ್ವಾಮೀಜಿ ಸ್ವಾಗತಿಸಿದರು. ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.