ಗ್ರಾಪಂನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ: ಗಾಯತ್ರಿ ಭರವಸೆ

| Published : Apr 04 2024, 01:02 AM IST

ಸಾರಾಂಶ

ಮುಂದಿನ ದಿನಗಳಲ್ಲಿ 3-4 ಗ್ರಾ.ಪಂ.ಗಳಿಗೆ 1ರಂತೆ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪಿಸುವ ಮೂಲಕ ಗ್ರಾಮೀಣ ನಿರುದ್ಯೋಗಿ ಯುವಕ, ಯುವತಿಯರು, ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಆ ಮೂಲಕ ಸ್ವಉದ್ಯೋಗಕ್ಕೆ ಪ್ರೋತ್ಸಾಹಿಸಲು ತಾವು ಬದ್ಧ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದಾವಣಗೆರೆಯಲ್ಲಿ ಭರವಸೆ ನೀಡಿದ್ದಾರೆ.

- ಹದಡಿ ಜಿಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತಯಾಚನೆ । ರವೀಂದ್ರನಾಥ ಸಾರಥ್ಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಂದಿನ ದಿನಗಳಲ್ಲಿ 3-4 ಗ್ರಾ.ಪಂ.ಗಳಿಗೆ 1ರಂತೆ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪಿಸುವ ಮೂಲಕ ಗ್ರಾಮೀಣ ನಿರುದ್ಯೋಗಿ ಯುವಕ, ಯುವತಿಯರು, ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಆ ಮೂಲಕ ಸ್ವಉದ್ಯೋಗಕ್ಕೆ ಪ್ರೋತ್ಸಾಹಿಸಲು ತಾವು ಬದ್ಧ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭರವಸೆ ನೀಡಿದರು.

ತಾಲೂಕಿನ ಹದಡಿ ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ, ಮತಯಾಚನೆ ವೇಳೆ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಅದೇ ಪರಿಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಗ್ರಾಮಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಈ ಹಿಂದೆ ತಮ್ಮ ಮಾವನವರು ಸಂಸದರಿದ್ದಾಗ ಆಗಿನ ಪ್ರಧಾನಿಯಾದ ಮುತ್ಸದ್ದಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೊಳಿಸಿದರು. ಅದೇ ಹಾದಿಯಲ್ಲಿ ಗ್ರಾಮಗಳಿಗೆ ಕಾಯಕಲ್ಪ ನೀಡಲು ನರೇಂದ್ರ ಮೋದಿ ಮುಂದಾಗಿದ್ದು, ಮೂರನೇ ಸಲ ಮೋದಿ ಅವರಿಗೆ ಆಡಳಿತ ಚುಕ್ಕಾಣಿ ನೀಡಬೇಕು ಎಂದು ಮನವಿ ಮಾಡಿದ ಅವರು, ಹದಡಿ ಗ್ರಾಮದ ಕೆರೆ ಅಭಿವೃದ್ಧಿ, ಎಲ್ಲ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ತಮ್ಮನ್ನು ಗೆಲ್ಲಿಸಿ, ಸಂಸತ್ತಿಗೆ ಕಳಿಸುವಂತೆ ಕೋರಿದರು.

ರವೀಂದ್ರನಾಥ್‌ ಸಾಥ್‌:

ಇದಕ್ಕೂ ಮುನ್ನ ಗಾಯತ್ರಿ ಸಿದ್ದೇಶ್ವರ ಅವರು ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ ನಿವಾಸಕ್ಕೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ರತ್ನಮ್ಮ ರವೀಂದ್ರನಾಥ, ವೀಣಾ ನಂಜಪ್ಪ, ಎಸ್.ಆರ್.ಬಸವರಾಜ, ರವೀಂದ್ರನಾಥರ ಮಕ್ಕಳು, ಸೊಸೆ, ಕುಟುಂಬ ವರ್ಗದವರು ಇದ್ದರು. ರವೀಂದ್ರನಾಥ್‌ ನೇತೃತ್ವದಲ್ಲಿ ಅಕ್ಕಪಕ್ಕದ ಗ್ರಾಮಗಳಲ್ಲಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.

ಎಸ್.ಎ.ರವೀಂದ್ರನಾಥ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಗುರು ಸೋಗಿ, ವಕೀಲ ರಾಘವೇಂದ್ರ ಮೊಹರೆ, ಲಿಂಗರಾಜ ಪಣಿಯಾಪುರ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಶ್ರೀನಿವಾಸ, ಮಂಡಲ ಅಧ್ಯಕ್ಷ ಆನಂದರಾವ್ ಸಿಂಧೆ, ವೆಂಕಟೇಶ, ನೀಲಗುಂದ ರಾಜು, ಗುರುಪ್ರಸಾದ, ಗ್ರಾಪಂ ಮಾಜಿ ಸದಸ್ಯ ಎಸ್.ಆರ್. ಬಸವರಾಜ್, ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ನೀಲಮ್ಮ, ಪಾಲಿಕೆ ಸದಸ್ಯರು, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಮುಖಂಡರು ಇದ್ದರು.

ಹದಡಿ ಜಿಪಂ ಕ್ಷೇತ್ರದ ವ್ಯಾಪ್ತಿಯ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಲೇರಿ, ಹಳೇ ಬಿಸಲೇರಿ, ದುರ್ಗಾಂಬಿಕಾ ಕ್ಯಾಂಪ್, ವಡೇರಹಳ್ಳಿ, ಬಟ್ಲಕಟ್ಟೆ, ಬಲ್ಲೂರು ಕ್ಯಾಂಪ್, ಜಡಗನಹಳ್ಳಿ, ಶಿರಗಾನಹಳ್ಳಿ, ಹಳೇ ಕೊಳೇನಹಳ್ಳಿ, ಗಿರಿಯಾಪುರ, ಕೈದಾಳೆ ಕ್ಯಾಂಪ್, ಹೊಸ ನಾಯ್ಕನಹಳ್ಳಿ, ಬುಳ್ಳಾಪುರ ಕ್ಯಾಂಪ್, ಚಂದ್ರನಹಳ್ಳಿ, ಮರಳು ಸಿದ್ದೇಶ್ವರ ನಗರ, ಹನುಮಂತಾಪುರ, ಎಸ್.ಎ.ರವೀಂದ್ರನಾಥ ಬಡಾವಣೆ, ಹಳೇ ಬೆಳವನೂರು, ಜವಳಘಟ್ಟ, ತರಳಬಾಳು ನಗರ, ಮಹಾದೇವಿಪುರ ಗ್ರಾಮಗಳಲ್ಲಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.

- - - -3ಕೆಡಿವಿಜಿ8:

ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸಕ್ಕೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ರತ್ನಮ್ಮ ರವೀಂದ್ರನಾಥ ಮತ್ತು ಮಕ್ಕಳೊಂದಿಗೆ ಕುಶಲೋಪರಿ ವಿಚಾರಿಸಿದರು.

- - - --3ಕೆಡಿವಿಜಿ9, 10, 11:

ದಾವಣಗೆರೆ ತಾಲೂಕು ಹದಡಿ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.