ಲಯನ್ಸ್ ಅಂತಾರಾಷ್ಟ್ರೀಯ ವಿಭಾಗದ ಸಹಕಾರದಲ್ಲಿ ಅಂಗವಿಕಲರಿಗೆ ಕೌಶಲ್ಯಾಭಿವೃದ್ಧಿ ವಿಸ್ತರಿಸುವ ಉದ್ದೇಶದಿಂದ ಪಟ್ಟಣದ ಹಾಳದಕಟ್ಟಾ ಮುರುಘ ರಾಜೇಂದ್ರ ಅಂಧ ಮಕ್ಕಳ ವಸತಿ ಶಾಲೆಯ ಆವರಣದಲ್ಲಿ ವಿಸ್ತರಣೆಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾ. ೨೮ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಹೇಳಿದರು.
ಸಿದ್ದಾಪುರ: ಲಯನ್ಸ್ ಅಂತಾರಾಷ್ಟ್ರೀಯ ವಿಭಾಗದ ಸಹಕಾರದಲ್ಲಿ ಅಂಗವಿಕಲರಿಗೆ ಕೌಶಲ್ಯಾಭಿವೃದ್ಧಿ ವಿಸ್ತರಿಸುವ ಉದ್ದೇಶದಿಂದ ಪಟ್ಟಣದ ಹಾಳದಕಟ್ಟಾ ಮುರುಘ ರಾಜೇಂದ್ರ ಅಂಧ ಮಕ್ಕಳ ವಸತಿ ಶಾಲೆಯ ಆವರಣದಲ್ಲಿ ವಿಸ್ತರಣೆಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾ. ೨೮ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಹಿಳೆಯರಿಗೆ ನೀಡಲಾಗುತ್ತಿರುವ ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿಯ ಜತೆಗೆ ಹೋಮ್ ಮೇಡ್ ಪ್ರಾಡೆಕ್ಟ್‌ಗಳ ತರಬೇತಿ ಮತ್ತು ಉತ್ಪಾದನೆ ಮಾಡುವ ಉದ್ದೇಶದಿಂದ ನೂತನವಾಗಿ ಮೂರು ಕೊಠಡಿಗಳನ್ನು ನಿರ್ಮಿಸಿದ್ದೇವೆ. ತಾಲೂಕಿನಲ್ಲಿ ೨೦೦ಕ್ಕೂ ಹೆಚ್ಚು ವಿಶೇಷ ಚೇತನ ಮಹಿಳೆಯರಿದ್ದು, ಅವರಿಗೆ ಆದ್ಯತೆ ನೀಡಲಾಗುತ್ತದೆ. ಮಾ. ೨೮ರಂದು ಮಧ್ಯಾಹ್ನ ೩.೩೦ರಿಂದ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಲಯನ್ಸ್ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ಮತ್ತು ಎಲ್‌ಸಿಐಎಫ್ ಅಂತಾರಾಷ್ಟ್ರೀಯ ವಿಭಾಗ ಮುಖ್ಯಸ್ಥ ಕೆ. ವಂಶೀಧರ ಬಾಬು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮಲ್ಟಿಪಲ್ ಕೌನ್ಸಿಲ್ ಚೇರ್‌ಮನ್ ಮೋಹನ ಕುಮಾರ ಎನ್. ಭಾಗಿಯಾಗಲಿದ್ದಾರೆ. ಜಿಲ್ಲಾ ಗವರ್ನರ್ ಜೈ ಅಮೋಲ ನಾಯಕ ವಿಶೇಷ ತರಬೇತಿ ಉದ್ಘಾಟಿಸುವರು. ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆ ವಹಿಸುವರು. ರಾಜಶೇಖರ ಹಿರೇಮಠ, ಸುದೇಶ ಬೋರ್ಕರ, ಮನೋಜ ಮಾಣಿಕ, ಗಣಪತಿ ನಾಯಕ, ಡಾ. ಗಿರೀಶ ಕುಚಿನಾಡ, ಡಾ. ಕೀರ್ತಿ ನಾಯಕ, ರಾಜೇಶ ಸಾಲೆಹಿತ್ತಲ, ವಿನಯ ಹೆಗಡೆ ಉಪಸ್ಥಿತರಿರುವರು ಎಂದರು.ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ ಮಾತನಾಡಿ, ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ, ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಮತ್ತು ಪೃಥ್ವಿರಾಜ್ ಪಾಟೀಲ್ ಅವರನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್. ಗೌಡರ್, ಖಜಾಂಚಿ ನಾಗರಾಜ ದೋಶೆಟ್ಟಿ, ಸ್ಥಳೀಯ ಲಯನ್ಸ್ ಕ್ಲಬ್ ಖಜಾಂಚಿ ಇಂದೂಧರ ಪಾಟೀಲ್ ಇದ್ದರು.