ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಗೆ ಕೌಶಲಾಭಿವೃದ್ಧಿ ತರಬೇತಿ

| Published : Dec 25 2024, 12:50 AM IST

ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಗೆ ಕೌಶಲಾಭಿವೃದ್ಧಿ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್‌ನ ಸಿಎಸ್‌ಆರ್ ನಿಧಿಯಿಂದ ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯ ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಗೆ 21 ದಿನಗಳ ಸೀರೆ ಕುಚ್ಚು, ಎಂಬ್ರಾಯಿಡರಿ ಹಾಗೂ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಗರದ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ರೋಬೋಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆಯ ಸಹ ಉಪಾಧ್ಯಕ್ಷ (ಆಕೌಂಟ್ಸ್) ಕೃಷ್ಣರಾಜ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಮಾನವ ಸಂಪನ್ಮೂಲದ ಮೇಲೆ ಮಾಡುವ ಹೂಡಿಕೆಯು ದೀರ್ಘಕಾಲದ ಫಲಿತಾಂಶ ನೀಡುತ್ತದೆ ಎಂದ ಅವರು, ತರಬೇತಿಯ ಪ್ರಯೋಜನವನ್ನು ನಿವಾಸಿಗಳು ಪಡೆಯುವಂತೆ ತಿಳಿಸಿದರು.ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ, ತರಬೇತಿಯ ಮಹತ್ವ ತಿಳಿಸುತ್ತಾ ನಿವಾಸಿಗಳು ಸಂಸ್ಥೆಯಿಂದ ಹೊರಗಡೆ ಹೋಗಿ ಬದುಕಲು ಸಹಾಯಕವಾಗುವುದರಿಂದ ಎಲ್ಲರೂ ತರಬೇತಿ ಪಡೆಯುವಂತೆ ಹುರಿದುಂಬಿಸಿದರು.ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನಿ, ಸಂಸ್ಥೆಯ ಅಧೀಕ್ಷಕಿ ಪುಷ್ಪಾರಾಣಿ ಎಚ್., ಸಂಪನ್ಮೂಲ ವ್ಯಕ್ತಿಗಳಾದ ರಮ್ಯ ಎ.ಸಿ., ಮುಕ್ತ ಶ್ರೀನಿವಾಸ, ಸನ್ನಿಹಿತ, ಸಂಸ್ಥೆಯ ಸಿಬ್ಬಂದಿ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.