ವಿದ್ಯೆ ಜತೆ ಕೌಶಲ್ಯ ಅವಶ್ಯಕ: ಡಾ.ದತ್ತಾತ್ರೇಯ ಗಾಂವ್ಕರ

| Published : Aug 21 2025, 02:00 AM IST

ಸಾರಾಂಶ

ಉತ್ತಮ ಚಾರಿತ್ರ್ಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು, ಸದ್ವಿಚಾರಗಳನ್ನು ತಿಳಿಯುವಂತಹ ಜ್ಞಾನವನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ

ಹಳಿಯಾಳ: ವಿದ್ಯಾಥಿಗಳು ವಿದ್ಯೆಯ ಜೊತೆಯಲ್ಲಿ ಕೌಶಲ್ಯ ಅರಿಯಬೇಕು. ಜತೆಗೆ ಉತ್ತಮ ಚಾರಿತ್ರ್ಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು, ಸದ್ವಿಚಾರಗಳನ್ನು ತಿಳಿಯುವಂತಹ ಜ್ಞಾನವನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ ಎಂದು ಯಲ್ಲಾಪುರದ ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ದತ್ತಾತ್ರೇಯ ಗಾಂವ್ಕರ ಹೇಳಿದರು.

ಪಟ್ಟಣದ ಕೆ.ಎಲ್.ಎಸ್ ಪದವಿ ಮಹಾವಿದ್ಯಾಲಯದ ಕೆ.ಎಲ್.ಎಸ್ ಪದವಿ ಮಹಾವಿದ್ಯಾಲಯದ 2025-26ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಲಕ್ಷ್ಯ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಜೀವ ಪ್ರಪಂಚದಲ್ಲಿ ಅತ್ಯಂತ ಒತ್ತಡದ ಜೀವನವನ್ನು ಮಾನವ ಬಾಳುತ್ತಿದ್ದು, ಯಾವ ಪ್ರಾಣಿಗಳಿಗೂ ಇರದ ಒತ್ತಡಗಳು ಇಂದು ಮಾನವನಿಗಿವೆ. ಆದುದರಿಂದ ಇತರ ಪ್ರಾಣಿಗಳಿಗಿರದ ಕಲಿಕೆಯು ಮಾನವನಿಗೆ ಅವಶ್ಯಕವಾಗಿದೆ. ಉದ್ಯೋಗಕ್ಕಾಗಿ ಬದುಕಿಗಾಗಿ ಅನ್ನಕ್ಕಾಗಿ ಶಿಕ್ಷಣ ಅವಶ್ಯಕ ಹಾಗೆಯೇ ಆನಂದಮಯ ಬದುಕಿಗಾಗಿ ಒಳ್ಳೆಯ ಹವ್ಯಾಸಗಳು ರೂಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ, ವಿದ್ಯಾರ್ಜನೆ ಮಾಡುವ ಕಾಲೇಜಿಗೆ ಹಾಗೂ ಸಮಾಜಕ್ಕೆ ವಿಧೇಯರಾಗಿ ಬಾಳುವ ಮೂಲಕ ಉಜ್ವಲ ಭಾರತದ ಭವಿಷ್ಯಕ್ಕೆ ಸಾಕ್ಷಿಯಾಗಬೇಕು ಎಂದರು.

ಸನ್ಮಾನ:

2024-25ನೇ ಸಾಲನಲ್ಲಿ ಬಿಸಿಯ ವ್ಯಾಸಂಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಪ್ರೀತಿ ಗೌಡಾ, ಮೇಘಾ ತೋರಸ್ಕರ, ಸವಿತಾ ಯಕ್ಕುಂಡಿ ಹಾಗೂ ಎಲ್ಲಾ ಸೆಮಿಸ್ಟರ್ನಲ್ಲಿ ಮೊದಲು ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಶೈಕ್ಷಣಿಕ ಸಂಯೋಜಕಿ ದೀಪಾ ನಾಯ್ಕ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ನಮೃತಾ ಗುರವ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಸಂಗೀತಾ ಪ್ರಭು, ಕ್ರೀಡಾ ನಿರ್ದೇಶಕ ಮಲ್ಲಿಕಾರ್ಜುನ ಕಾಜಗಾರ, ಎನ್.ಎಸ್.ಎಸ್ ಅಧಿಕಾರಿ ಶಾಂತಾರಾಮ ಚಿಬುಲಕರ, ಉಪನ್ಯಾಸಕರುಗಳಾದ ಮಿನಾಜ ಶೇಖ್, ಮಾಧವ ಸುರತ್ಕರ, ಮೆಹ್ತಾಬ್ ಶೇಖ್, ಪ್ರಗತಿ ಲಕ್ಕುಂಡಿ, ಹನುಮಂತಿ ಪವಾರ, ಅನುಷಾ ನಾಯ್ಕವಾಡ, ಸಿಬ್ಬಂದಿ ನಾಗೇಂದ್ರ ಖಂಡೇಕರ, ಅಕ್ಷತಾ ಹುಲಿಕೇರಿ, ಲೀಲಾ ಅಂಬಿಗ, ಶೀತಲ ತೋರಸ್ಕರ ಇದ್ದರು.