ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪರೀಕ್ಷೆಗಳಲ್ಲಿ ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆ ಇರುತ್ತದೆ. ಆದರೆ ಜೀವನದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಂದೇ ಆಗಿರುವುದಿಲ್ಲ. ಆ ಪರೀಕ್ಷೆಯಲ್ಲಿ ಗೆಲ್ಲುವ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರೊ.ಶಿವಲಿಂಗ ಸಿದ್ನಾಳ ಹೇಳಿದರು.ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆತ್ತವರ ಕಷ್ಟ ಅರಿತು ಏಕಾಗ್ರತೆಯಿಂದ ಓದಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
10ನೇ ತರಗತಿಯ ಪ್ರತಿ ವಿದ್ಯಾರ್ಧಿಯೂ ತನ್ನ ಜೀವನದ ಗುರಿ ಹೇಳಿ ಮೇಣದ ಬತ್ತಿ ಬೆಳಗಿಸಿ ಪ್ರತಿಜ್ಞೆ ಮಾಡಿ ಗುರು ಹಿರಿಯರ ಆಶೀರ್ವಾದ ಕೋರಿದ್ದು ವಿಶೇಷವೆನಿಸಿತು. ನಂತರ 9ನೇ ತರಗತಿ ಮಕ್ಕಳಿಗೆ ದೀಪದಾನ ಮಾಡಿದರು.ಸಂಸ್ಥೆಯ ನಿರ್ದೇಶಕರಾದ ರಾಜು ಘಟ್ಟೆಪ್ಪನವರ, ಈಶ್ವರ ಮುರಗೋಡ, ಪತ್ರಕರ್ತ ನಾರನಗೌಡ ಉತ್ತಂಗಿ, ಮುಖ್ಯ ಶಿಕ್ಷಕ ಎಸ್.ಜಿ. ಕೌಜಲಗಿ, ಶಿಕ್ಷಕಿಯರಾದ ಸುಧಾ ಕೊಂಗವಾಡ, ಸುಜಾತ ಹೊಸಕೇರಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಗದೀಶ ನಾಗನೂರ, ಪಲ್ಲವಿ ಸಿಂಗಾಡಿ ಮಾತನಾಡಿದರು,
10ನೇ ತರಗತಿಯ ಶ್ರೇಯಸ್ ಸಾವಳಗಿಮಠ, ಆರ್ಯನ್ ಶುಕ್ಲಾ , ಸಾಧಿಕ್ ಬರಗಿ, ಅಂಕಿತಾ ರಾಥೋಡ, ಸವಿತಾ ಹುದ್ದಾರ, ತೈಬಾ ನಂದಗಡ್ಕರ್, ಸುಪ್ರೀತ್ ಕೋಳಿ ಇತರರು ಅನಿಸಿಕೆ ಹಂಚಿಕೊಂಡರು.ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ್ ಪಟೇಲ್ ಉದ್ಘಾಟಿಸಿದರು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಶಿಕ್ಷಕ ಎಸ್.ಪಿ. ಸುತಾರ ಇದ್ದರು. ನಂದಿನಿ ರಂಜನಗಿ ಮತ್ತು ಸಿಂಚನಾ ಬಾಗೇವಾಡಿ ಗಣ್ಯರನ್ನು ಆಹ್ವಾನಿಸಿ, ಸಾಕ್ಷಿ ಗೊಂದಿ ಮತ್ತು ಮಹಾಲಕ್ಷ್ಮೀ ಗುಳದಳ್ಳಿ ಪ್ರಾರ್ಥಿಸಿದರು. ವರ್ಷಿತಾ ಉತ್ತಂಗಿ ಸ್ವಾಗತಿಸಿದರು, ರೆಹನುಮಾ ಮುಜಾವರ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠ ಪುಳ್ಯಾಗೋಳ, ವಿಶಾಲ ಮುರಗೋಡ, ಸಿದ್ಧಾರೂಢ ಪುಳ್ಯಾಗೋಳ, ಉದಯ ಮುಂಡಾಸ, ಸುಮಯ್ಯಾ ಕಡಕೋಳ, ನೆಹರಾ ಮಾಹುತ್, ಭೂಮಿ ಕಾಕಡೆ, ಅರ್ಫಾ ಖಲೀಫಾ, ಅನುಶ್ರಿ ಹುದ್ದಾರ, ಶ್ರೇಯಾ ಸಗರಿ, ಲಕ್ಷ್ಮಿ ಅಮಾತಿ, ವೇದಿಕಾ ಜಾನಕೂನವರ ನಿರೂಪಿಸಿದರು. ಸೃಷ್ಟಿ ಮುಗಳಖೋಡ, ಅಲ್ಫಿಯಾ ಮರೇಗುದ್ದಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))