ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ಅಪಪ್ರಚಾರ ಸರಿಯಲ್ಲ: ಸು. ರಾಮಣ್ಣ

| Published : Sep 02 2025, 01:00 AM IST

ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ಅಪಪ್ರಚಾರ ಸರಿಯಲ್ಲ: ಸು. ರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಸಮಾಜದಲ್ಲಿ ಸಾಮರಸ್ಯ, ಎಲ್ಲರಲ್ಲಿ ಏಕತೆ, ವಿಶ್ವಾಸ ನಂಬಿಕೆ, ದೇಶಾಭಿಮಾನ ಮೂಡಿಸುವ ಚಿಂತನೆಯಿಂದ ಗಣೇಶ ಹಬ್ಬ ಆಚರಿಸಲಾಗುತ್ತಿದೆ.

ರಾಣಿಬೆನ್ನೂರು: ದೇಶವನ್ನು ಗುಲಾಮಗಿರಿಯಿಂದ ಪಾರು ಮಾಡುವ ಸಲುವಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲಾಯಿತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದ ಹಿರಿಯ ಪ್ರಚಾರಕ ಸು. ರಾಮಣ್ಣ ತಿಳಿಸಿದರು.ಇಲ್ಲಿಯ ನಗರಸಭಾ ಕ್ರೀಡಾಂಗಣದಲ್ಲಿ ಸೋಮವಾರ ಸ್ಥಳೀಯ ವಂದೇ ಮಾತರಂ ಸ್ವಯಂಸೇವಾ ಸಂಸ್ಥೆ ವತಿಯಿಂದ ರಾಣಿಬೆನ್ನೂರು ಕಾ ರಾಜಾ ಮಹಾಗಣಪತಿಯ 17ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶತಮಾನದ ಸಂಘ ಸೂರ್ಯ ಸಾರ್ವಜನಿಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಹಿಂದೂ ಸಮಾಜದಲ್ಲಿ ಸಾಮರಸ್ಯ, ಎಲ್ಲರಲ್ಲಿ ಏಕತೆ, ವಿಶ್ವಾಸ ನಂಬಿಕೆ, ದೇಶಾಭಿಮಾನ ಮೂಡಿಸುವ ಚಿಂತನೆಯಿಂದ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಹಿಂದು ಹೆಸರನ್ನು ಜಾತ್ಯತೀತತೆ ನೆಪದಲ್ಲಿ ತೊಡೆದು ಹಾಕುವ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಹಿಂದೂ ಶ್ರದ್ಧಾ ಕೇಂದ್ರಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಇದಕ್ಕೆ ಧರ್ಮಸ್ಥಳ ಒಂದು ತಾಜಾ ಉದಾಹರಣೆಯಾಗಿದೆ ಎಂದರು.ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಬಹುಮುಖ್ಯವಾಗಿದೆ. 1926ಕ್ಕಿಂತ ಹಿಂದಿನ ಕಾಲದಲ್ಲಿ ಹಿಂದೂಗಳ ರಕ್ಷಣೆ ಇರಲಿಲ್ಲ. ಸಂಘ ಉದಯ ಆದ ಮೇಲೆ ಹಿಂದೂಗಳ ಪ್ರೇರಣೆ, ಬೆಂಬಲ, ರಕ್ಷಣೆಯ ಕಲ್ಪನೆ ಮೂಡಿತು ಎಂದರು. ಈ ಬಾರಿ ಗಣೇಶೋತ್ಸವ ಮಂಟಪದಲ್ಲಿ ಒಡಿಶಾದಲ್ಲಿ 13ನೇ ಶತಮಾನದಲ್ಲಿ ಸ್ಥಾಪನೆಯಾದ ದೇವಸ್ಥಾನ ಮರುಸೃಷ್ಟಿ ಮಾಡಲಾಗಿದೆ. ಗಾಳಿಯಲ್ಲಿ ತೇಲುವ ಸೂರ್ಯನ ಪರಿಕಲ್ಪನೆಯನ್ನು ಮಾಡಲಾಗಿದೆ. ಸಾರ್ವಜನಿಕರಿಗೆ ಇಂದಿನಿಂದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಈಶ್ವರ ಹಾವನೂರ, ಗುರುರಾಜ ಹಾವನೂರ, ವೀರೇಶ ಹೆದ್ದೇರಿ, ಅಜಯ ಮಠದ, ಅಶೋಕ ನಾಡಿಗೇರ, ನಗರಸಭೆ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಗಂಗಮ್ಮ ಹಾವನೂರ, ಮಂಜಳಾ ಹತ್ತಿ, ಪ್ರಭಾವತಿ ತಿಳವಳ್ಳಿ ಮತ್ತಿತರರಿದ್ದರು.