ಸಾರಾಂಶ
ಮಂಡ್ಯ: ಪ್ರಸ್ತುತ ರಾಜಕಾರಣಿಗಳಿಗೆ ಮುತ್ಸದ್ಧಿ ಎಸ್.ಎಂ.ಕೃಷ್ಣ ಮಾದರಿ ನಾಯಕರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು. ನಗರದ ಗಾಂಧಿಭವನದಲ್ಲಿ ಪ್ರತಿಭಾಂಜಲಿ ಸುಮಗ ಸಂಗೀತ ಅಕಾಡೆಮಿ, ಮಹಾತ್ಮ ಗಾಂಧಿ ಭವನ ಸ್ಮಾರಕ ಟ್ರಸ್ಟ್, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ, ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರೊಂದಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಗ್ರಾಮೀಣ ಪರಿಸರದಲ್ಲಿ ಬೆಳೆದ ಎಸ್.ಎಂ.ಕೃಷ್ಣ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗುವ ಮಟ್ಟಿಗೆ ಬೆಳೆದ ಧೀಮಂತ ನಾಯಕರು. ಇವರನ್ನು ಸಮಾಜ ಎಂದಿಗೂ ಮರೆಯದು. ಇವರ ಕೊಡಗೆ- ಸಾಧನೆಗಳು ಜನಮನ್ನಣೆಪಡೆದಿವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಕದಂಬಸೈನ್ಯ ಬೇಕ್ರಿ ರಮೇಶ್, ಗಾಂಧಿ ಭವನದ ಸಾಹಿತಿ ಲಿಂಗಣ್ಣ ಬಂಧೂಕರ್, ಶಿಕ್ಷಕಿ ಉಷಾರಾಣಿ, ಕಲಾವಿದ ಕೆಂಚೇಗೌಡ, ಅವಿನಾಶ್, ಕೆಂಪೇಗೌಡ, ಸಾತನೂರು ಜಯರಾಂ, ಅಂಕರಾಜು, ಮಂಜುಳಾ, ಲೋಕೇಶ್ ಮತ್ತಿತರರಿದ್ದರು.