ಯುಪಿಐ ಮೂಲಕ ₹40 ಲಕ್ಷ ಸ್ವೀಕರಿಸಿದ ಸಣ್ಣ ವರ್ತಕರಿಗೆ ಈಗ ಜಿಎಸ್‌ಟಿ ಕಟ್ಟುವ ಬಿಸಿ

| N/A | Published : Jul 13 2025, 01:19 AM IST / Updated: Jul 13 2025, 07:01 AM IST

ಯುಪಿಐ ಮೂಲಕ ₹40 ಲಕ್ಷ ಸ್ವೀಕರಿಸಿದ ಸಣ್ಣ ವರ್ತಕರಿಗೆ ಈಗ ಜಿಎಸ್‌ಟಿ ಕಟ್ಟುವ ಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದ, ವಾರ್ಷಿಕ 40 ಲಕ್ಷ ರು.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಸಣ್ಣ ವರ್ತಕರು ಶೇ. 1ರಷ್ಟು ತೆರಿಗೆ ಪಾವತಿಸಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಸೂಚನೆ ನೀಡಿದೆ.

 ಬೆಂಗಳೂರು :  ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದ, ವಾರ್ಷಿಕ 40 ಲಕ್ಷ ರು.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಸಣ್ಣ ವರ್ತಕರು ಶೇ. 1ರಷ್ಟು ತೆರಿಗೆ ಪಾವತಿಸಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಸೂಚನೆ ನೀಡಿದೆ.

ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಕಲಂ 22ರ ಅನ್ವಯ ವಾರ್ಷಿಕ ಸರಕು ಪೂರೈಕೆದಾರರ ಸಮಗ್ರ ವಹಿವಾಟು 40 ಲಕ್ಷ ರು. ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರು. ಮೀರಿದರೆ ಜಿಎಸ್‌ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.

2021-22ರಿಂದ 2024-25ರ ಸಾಲಿನಲ್ಲಿ ಯುಪಿಐ (ಆನ್‌ಲೈನ್‌ ಪೇಮೆಂಟ್‌ ಆ್ಯಪ್‌) ಮೂಲಕ 40 ಲಕ್ಷ ರು.ಗೂ ಹೆಚ್ಚಿನ ಮೊತ್ತದ ವಹಿವಾಟು ನಡೆಸಿರುವ ಸಣ್ಣ ವರ್ತಕರು ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದಿರುವುದು ಪತ್ತೆಯಾಗಿದೆ. ಅಂತಹ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್‌ ನೀಡಲಾಗಿದ್ದು, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರ ನೀಡಿ, ಸೂಕ್ತ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಹೀಗೆ ನೋಟಿಸ್‌ ಪಡೆದ ವರ್ತಕರು ಕೂಡಲೇ ಜಿಎಸ್‌ಟಿ ನೋಂದಣಿ ಪಡೆಯುವಂತೆಯೂ ಸೂಚಿಸಲಾಗಿದೆ.

ಯುಪಿಐ, ನಗದು ಸೇರಿದಂತೆ ಒಟ್ಟಾರೆ ವಾರ್ಷಿಕ 40 ಲಕ್ಷ ರು.ನಿಂದ ಗರಿಷ್ಠ 1.5 ಕೋಟಿ ರು.ವರೆಗೆ ವಹಿವಾಟು ನಡೆಸುವ ಸಣ್ಣ ವರ್ತಕರು ಶೇ. 1ರಷ್ಟು ತೆರಿಗೆ ಪಾವತಿಸಿ ಕೂಡಲೇ ಜಿಎಸ್‌ಟಿ ನೋಂದಣಿ ಪಡೆಯುವಂತೆ ಇಲಾಖೆ ನಿರ್ದೇಶಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ www.gst.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.

Read more Articles on