ಸಾರಾಂಶ
ಉಡುಪಿ ಜಿಲ್ಲಾ ಕೃಷಿಕ ಸಂಘವು ಇಲ್ಲಿನ ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಹೈನುಗಾರಿಕೆ, ವೈಜ್ಞಾನಿಕ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ಆಯೋಜಿಸಿತ್ತು. ಹಿರಿಯ ಪ್ರಗತಿಪರ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು ಸಂಪ್ಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಬೆಳೆಗೆ ಹಾಕುವ ಗೊಬ್ಬರಕ್ಕೆ ಬಿಸಿಲು, ಮಳೆ ನೀರು ಬೀಳದಂತೆ ಎಚ್ಚರವಹಿಸದಿದ್ದರೆ ಶೇ.10ರಷ್ಟೂ ಸಾರವೂ ಬೆಳೆಗಳಿಗೆ ಸಿಗದೆ, ಕೃಷಿಯಲ್ಲಿ ನಷ್ಟಕ್ಕೆ ಮೊದಲ ಕಾರಣವಾಗುತ್ತದೆ. ಜಮೀನಿನಲ್ಲಿ ಒಂದೇ ಕೃಷಿ ಮಾಡದೆ ಸಾವಯವ ಸಮಗ್ರ ಕೃಷಿ ಅನುಸರಿಸಿದರೆ ಲಾಭ ಸಾಧ್ಯವಿದೆ ಎಂದು ಹಿರಿಯ ಪ್ರಗತಿಪರ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.ಅವರು ಉಡುಪಿ ಜಿಲ್ಲಾ ಕೃಷಿಕ ಸಂಘವು ಇಲ್ಲಿನ ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಿದ ಹೈನುಗಾರಿಕೆ, ವೈಜ್ಞಾನಿಕ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕ ಆನಂದ ಭಟ್ ಉದ್ಘಾಟಿಸಿ ಆಶೀರ್ವಚಿಸಿದರು. ಕೋಟ ಕೃಷಿ ಅಧಿಕಾರಿ ಸುಪ್ರಭಾ, ಕೃಷಿ ಇಲಾಖೆಯಿಂದ ಕೃಷಿಕರಿಗೆ ಮತ್ತು ಸ್ವಾವಲಂಬಿ ಸ್ವ ಉದ್ಯೋಗ ಮಾಡಬಯಸುವವರಿಗೆ ಸಿಗುವ ಸೌಲಭ್ಯಗಳು ಮತ್ತು ಅದನ್ನು ಪಡೆಯುವ ಕ್ರಮಗಳ ಬಗ್ಗೆ ವಿವರಿಸಿದರು.ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಹೇರೂರು ವೆಂಕಪ್ಪ ಪೂಜಾರಿ, ಚಾಂತಾರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಮೀರಾ ಸದಾನಂದ, ಸದಸ್ಯೆ ಹೇಮಾ ಅಶೋಕ್ ಮತ್ತು ಕೃಷಿಕ ಸಂಘ ಪೆರಂಪಳ್ಳಿ ವಲಯಾಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಭಾಗವಹಿಸಿದ್ದರು.
ಸ್ಥಳೀಯ ಕೃಷಿಕರಾದ ಕರುಣಾಕರ ಪೂಜಾರಿ, ಅಶೋಕ್ ಪೂಜಾರಿ, ರವೀಂದ್ರ ಕಲ್ಯಾಣಪುರ, ದತ್ತಾತ್ರೇಯ ಮಲ್ಯ, ಸತೀಶ್ ಕಾಡೋಳಿ, ಸುಜಾತ ಪೂಜಾರಿ, ಮಮತಾ, ಮಾಲತಿ, ರತ್ನಾವತಿ ಶೆಟ್ಟಿ, ರಾಮ ಪೂಜಾರಿ, ಸ್ಯಾಮ್ಯುವೆಲ್ ರೋಡ್ರಿಗಸ್, ದಿನೇಶ್ ಕಾಮತ್, ಸದಾನಂದ ಶೆಟ್ಟಿ, ಪ್ರಭಾಕರ ಗೋಣಿಬೆಟ್ಟು, ಸ್ಟ್ಯಾನ್ಲಿ, ರಮಾ ಶೆಟ್ಟಿ, ಸೂರುಬೆಟ್ಟು ರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಚರಿತ್ ಅಭಿಮನ್ಯು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.