ಸಾರಾಂಶ
ಕೊಪ್ಪ, ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಆದರೆ ಯಾವುದೇ ಸರ್ಕಾರಗಳು ಈವರೆಗೆ ಜೀವನಕ್ಕಾಗಿ ಕೃಷಿ ಮಾಡಿಕೊಂಡವರ ಸಣ್ಣಪುಟ್ಟ ರೈತರ ಒತ್ತುವರಿ ಖುಲ್ಲಾ ಮಾಡಿಸಿರುವ ಉದಾಹರಣೆಗಳಿಲ್ಲ. ಸಣ್ಣ ಒತ್ತುವರಿದಾರರು ಆತಂಕ ಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಕಿಸಾನ್ ಸೆಲ್‌ನ ರಾಜ್ಯಾಧ್ಯಕ್ಷ ಸಚಿನ್ ಮಿಗ ಹೇಳಿದರು.
ಕನ್ನಡಪ್ರಭ ವಾರ್ತೆ, ಕೊಪ್ಪ
ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಆದರೆ ಯಾವುದೇ ಸರ್ಕಾರಗಳು ಈವರೆಗೆ ಜೀವನಕ್ಕಾಗಿ ಕೃಷಿ ಮಾಡಿಕೊಂಡವರ ಸಣ್ಣಪುಟ್ಟ ರೈತರ ಒತ್ತುವರಿ ಖುಲ್ಲಾ ಮಾಡಿಸಿರುವ ಉದಾಹರಣೆಗಳಿಲ್ಲ. ಸಣ್ಣ ಒತ್ತುವರಿದಾರರು ಆತಂಕ ಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಕಿಸಾನ್ ಸೆಲ್‌ನ ರಾಜ್ಯಾಧ್ಯಕ್ಷ ಸಚಿನ್ ಮಿಗ ಹೇಳಿದರು.ಕೊಪ್ಪ ತ್ಯಾಗರಾಜ ರಸ್ತೆಯ ಲಯನ್ಸ್ ಹೆಲ್ತ್ ಸೆಂಟರ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಒತ್ತುವರಿ ಭೂಮಿ ತೆರವುಗೊಳಿಸುವ ಬಗ್ಗೆ ಸರ್ಕಾರ ಕಾಯ್ದೆಯನ್ನು ರೂಪಿಸಿಲ್ಲ. ನ್ಯಾಯಾಲಯದ ಆದೇಶವನ್ನು ಮಾತ್ರ ಪಾಲನೆ ಮಾಡಲಾಗುತ್ತಿದೆ. ೨೦೧೫ರಲ್ಲಿ ಎಸ್.ಆರ್. ಹಿರೇಮಠ್‌ರವರು ಜಿಲ್ಲಾಧಿಕಾರಿಗಳ ಬಳಿ ಅಕ್ರಮ-ಸಕ್ರಮದಲ್ಲಿ ರೈತರು ರಾಜ್ಯ ದಲ್ಲಿ ಸಲ್ಲಿಸಿರುವ ಅರ್ಜಿಗಳ ಅಂಕಿ ಅಂಶಗಳನ್ನು ತೆಗೆದುಕೊಂಡು ಅಂದಾಜಿನಲ್ಲಿ ಇಷ್ಟು ಭೂಮಿ ಒತ್ತುವರಿಯಾಗಿದೆ ಎಂದು ನ್ಯಾಯಾಲಯದಲ್ಲಿ ಪಿಎಎಲ್ ಹಾಕಿದ್ದರು. ಬೇರೆ ಯಾವ ಒತ್ತುವರಿಯಾದ ಬಗ್ಗೆ ಖಚಿತವಾದ ಮಾಹಿತಿ ನೀಡಿಲ್ಲ. ಈ ವೇಳೆ ಸರ್ಕಾರ ಸಹ ಮೂರು ಎಕರೆ ಒಳಗಿನ ಒತ್ತುವರಿ ಭೂಮಿ ತೆರವು ಮಾಡಲ್ಲ ಎಂದು ಅಫಿಡವಿಟ್ ಸಹ ಸಲ್ಲಿಸಿ, ರೈತರ ಪರವಾಗಿ ನಿಂತಿದೆ. ಯಾವುದೇ ಸಂಘಟನೆಗಳು ಒತ್ತುವರಿ ತಡೆಯಲು ಹೋರಾಟ ರೂಪಿಸುವುದಾದರೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದರು.ಶೀಘ್ರದಲ್ಲಿ ಶಾಸಕ ರಾಜೇಗೌಡರ ನೇತೃತ್ವದಲ್ಲಿ ಮುಖ್ಯಮಂತ್ರಿ, ಅರಣ್ಯ ಸಚಿವರ ಬಳಿ ನಿಯೋಗ ತೆರಳಲಾಗುತ್ತದೆ. ಒತ್ತುವರಿ ಬಗ್ಗೆ ಉದ್ಬವಿಸಿರುವ ಗೊಂದಲ, ಅಪಪ್ರಚಾರಗಳಿಗೆ ಉತ್ತರ ನೀಡಲಾಗುತ್ತದೆ ಎಂದರು. ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್ ಮಾತನಾಡಿ ಅರಣ್ಯ ಭೂಮಿಯಲ್ಲಿ ಮೂರು ಎಕರೆ ಒಳಗೆ ಭೂಮಿ ಒತ್ತುವರಿ ಮಾಡಿ ಕೊಂಡು ಜೀವನಕ್ಕಾಗಿ ಕೃಷಿ ಚಟುವಟಿಕೆ ನಡೆಸುತ್ತಿರುವವರು ಹೆದರುವ ಅಗತ್ಯವಿಲ್ಲ, ಮೂರು ಎಕರೆ ಒಳಗೆ ಒತ್ತುವರಿ ಖುಲ್ಲಾ ಪಡಿಸಲ್ಲ. ಒತ್ತುವರಿ ವಿಚಾರವಾಗಿ ಮಲೆನಾಡ ರೈತರನ್ನು ಕೆಲವು ಸಂಘಟನೆಗಳು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆಯೇ ಹೊರತು, ವಾಸ್ತವ ಸತ್ಯವನ್ನು ರೈತರ ಮುಂದೆ ಇಡುತ್ತಿಲ್ಲ. ಈ ವಿಚಾರವಾಗಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಹೇಳಿದರು.
ಮಲೆನಾಡಿನ ರೈತರಿಗೆ ಒತ್ತುವರಿ ಬಗ್ಗೆ ತಪ್ಪು ಮಾಹಿತಿ ರವಾನಿಸಲಾಗುತ್ತಿದೆ. ಮೂರು ಎಕರೆ ಒಳಗೆ ಇರುವ ಒತ್ತುವರಿದಾರರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಸಣ್ಣ ರೈತರಿಗೆ ಅರಣ್ಯ ಇಲಾಖೆಯಿಂದ ಸಮಸ್ಯೆ ಉಂಟಾದಲ್ಲಿ ನಾವು ರೈತರ ಪರ ನಿಂತು ಕೊಳ್ಳುತ್ತೇವೆ. ೨೦೧೫ರ ಈಚೇಗಿನ ಹೊಸ ಒತ್ತುವರಿನ್ನು ಹಾಗೂ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರಕರಣ ಗಳನ್ನು ಮಾತ್ರ ತೆರವು ಕಾರ್ಯ ಮಾಡಲಾಗುತ್ತಿದೆ. ಅನಾವಶ್ಯಕವಾಗಿ ಯಾವುದೇ ತೆರವು ಕಾರ್ಯ ಶೃಂಗೇರಿ ಕ್ಷೇತ್ರದ ಒಳಗೆ ನಡೆದಿಲ್ಲ, ರೈತರಿಗೆ ಸಮಸ್ಯೆಯಾಗುವಂತೆ ರಾಜ್ಯ ಸರ್ಕಾರ ನಡೆದುಕೊಂಡಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ಜಿ.ಶೋಭಿಂತ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಚಿಂತನ್ ಬೆಳಗೊಳ, ಮುದ್ದಣ್ಣ, ಬರ್ಕತ್ ಆಲಿ, ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಟಿ. ಮುಂತಾದವರಿದ್ದರು.