23 ರಿಂದ ಕದಂಬ ನಗೆ ನಾಟಕೋತ್ಸವ

| Published : May 21 2024, 12:40 AM IST

ಸಾರಾಂಶ

3 ರಂದು ಸಂಜೆ 6.30ಕ್ಕೆ ಪಂಚಾಕ್ಷರ ನಾಟ್ಯ ಸಂಘದ ಮಾಲೀಕ ಜೇವರ್ಗಿ ರಾಜಣ್ಣ ನಾಟಕೋತ್ಸವಕ್ಕೆ ಚಾಲನೆ ನೀಡುವರು.

ಕನ್ನಡಪ್ರಭ ವಾರ್ತೆ ಮೈಸೂರು

ಕದಂಬ ರಂಗ ವೇದಿಕೆ ವತಿಯಿಂದ ಮೇ 23, 24 ಮತ್ತು 25 ರಂದು ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಕದಂಬ ನಗೆ ನಾಟಕೋತ್ಸವ ಆಯೋಜಿಸಿದೆ.

23 ರಂದು ಸಂಜೆ 6.30ಕ್ಕೆ ಪಂಚಾಕ್ಷರ ನಾಟ್ಯ ಸಂಘದ ಮಾಲೀಕ ಜೇವರ್ಗಿ ರಾಜಣ್ಣ ನಾಟಕೋತ್ಸವಕ್ಕೆ ಚಾಲನೆ ನೀಡುವರು. ಕಲಾವಿದ ಮೈಸೂರು ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಅತಿಥಿಯಾಗಿ ಆಗಮಿಸುವರು ಎಂದು ಕದಂಬ ರಂಗವೇದಿಕೆಯ ರಾಜಶೇಖರ ಕದಂಬ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳಿಕ ಶಶಿರಾಜ್ ರಾವ್ ಕಾವೂರು ರಚನೆಯ ಜೀವನ್ ಕುಮಾರ್ ಹೆಗ್ಗೋಡು ನಿರ್ದೇಶನದ ನೆಮ್ಮದಿ ಅಪಾರ್ಟ್ಮೆಂಟ್ ನಾಟಕ ಪ್ರದರ್ಶನ ಇರುತ್ತದೆ. 24 ರಂದು ಎಂ.ಎ. ಶೈಲೇಶ್ ಕುಮಾರ್ ನಿರ್ಮಾಣದ ಭರತ್ ಸ. ಜಗನ್ನಾಥ್ ರಚಿಸಿ ನಿರ್ದೇಶಿಸಿರುವ ''''''''ಈ ಪ್ರೇಮಲೋಕ ಗೀತೆಯೂ'''''''' ನಾಟಕ, 25 ರಂದು ಅಂತರಂಗ ಬಹಿರಂಗ ತಂಡದಿಂದ ಎಸ್. ವಿಕಾಸ್ ನಿರ್ದೇಶನದ ಮೊಲಿಯೇರ್ ವಿರಚಿತ ಅನುಮಾನದ ಅವಾಂತರ ನಾಟಕ ಪ್ರದರ್ಶನ ಇರಲಿದೆ ಎಂದು ಅವರು ಹೇಳಿದರು.

ನಾಟಕೋತ್ಸವಕ್ಕೆ ಪ್ರವೇಶ ದರ ನೂರು ರೂ. ಇರುತ್ತದೆ ಎಂದರು. ಇದೇ ವೇಳೆ ಹಿರಿಯ ರಂಗ ಕಲಾವಿದ ಮೈಮ್ ರಮೇಶ್ ನಾಟಕೋತ್ಸವದ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು. ಅಶ್ವತ್ಥ್ ಕದಂಬ, ಸೂರಜ್ ರಮೇಶ್, ಸುನೀತಾ ಇದ್ದರು.