ಕನ್ನಡಪ್ರಭ ವಾರ್ತೆ ಯಳಂದೂರು

ಮೈಸೂರು ಜಿಲ್ಲೆಯಿಂದ ಬಂದು ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಂದ 460 ಕೇಜಿ ಅಕ್ಕಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮೈಸೂರು ಜಿಲ್ಲೆಯ ತಲಕಾಡು ಹೋಬಳಿಯ ಕುಕ್ಕೂರು ಗ್ರಾಮದ ಮಖ್ಸೂದ್ ಪಾಷಾ, ನಯಿಮ್ ಪಾಷ ಹಾಗೂ ಕುಮಾರಸ್ವಾಮಿ ಎಂದು ಗುರುತಿಸಲಾಗಿದ್ದು, ತಾಲೂಕಿನ ಬೂದಿತಿಟ್ಟು, ಮದ್ದೂರು ಗ್ರಾಮಗಳಲ್ಲಿ ಆಹಾರ ಪಡಿತದಾರರಿಂದ ಅಕ್ರಮವಾಗಿ ಅಕ್ಕಿಯನ್ನು ಖರೀದಿಸಿ ಇದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿ ತಮ್ಮ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಅಧಿಕಾರಿಗಳು ಯರಿಯೂರು ಗ್ರಾಮದಿಂದ ಕೆಸ್ತೂರಿನ ಶನೇಶ್ವರ ದೇಗುಲದ ಬಳಿ ತಡೆದಿದ್ದಾರೆ. ಅಕ್ಕಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಲಾಗಿದೆ.

ಈ ದಾಳಿಯಲ್ಲಿ ಪಿಎಸ್‌ಐ ಆಕಾಶ್, ಆಹಾರ ನಿರೀಕ್ಷಕ ಬಿಲಸಯ್ಯ, ಮುಖ್ಯಪೇದೆ ನಾಗೇಂದ್ರ, ಪೇದೆಗಳಾದ ಜಡೇಸ್ವಾಮಿ, ಸಂಪತ್ ಭಾಗವಹಿಸಿದ್ದರು.

---25ಸಿಎಚ್‌ಎನ್‌53ವಶಪಡಿಸಿಕೊಳ್ಳಲಾಗಿರುವ 460 ಕೇಜಿ, ಕಾರು ಮತ್ತು ಆರೋಪಿಗಳು.