ಉಡುಪಿ ಹೊಸಬದುಕು ಆಶ್ರಮಕ್ಕೆ ಸಹಾಯಹಸ್ತ ಚಾಚಿದ ಸ್ನೇಹಕೂಟ

| Published : Dec 09 2024, 12:48 AM IST

ಸಾರಾಂಶ

ಸ್ನೇಹಕೂಟ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕವಾಗಿ ವಿನೂತನ ಮಾದರಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರತೀ ತಿಂಗಳು ಓರ್ವ ಸದಸ್ಯನ ಮನೆಗೆ ತೆರಳಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅನುಷ್ಠಾನಗಳ ಬಗ್ಗೆ ಸಾಮಾಜಿಕ ಪ್ರಜ್ಞೆ ಮೆರೆಯುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹೊಸ ಬದುಕು ಅನಾಥರ ಆಶ್ರಮದಲ್ಲಿ ಮಣೂರಿನ ಸ್ನೇಹಕೂಟದ ವತಿಯಿಂದ ಒಂದು ದಿನ ಅನಾಥಾಶ್ರಮದಲ್ಲಿ ಭಾವ ಮಿಲನ ಎನ್ನುವ ವಿನೂತ ಕಾರ್ಯಕ್ರಮ ಶನಿವಾರ ನಡೆಯಿತು.ಸ್ನೇಹಕೂಟ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕವಾಗಿ ವಿನೂತನ ಮಾದರಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರತೀ ತಿಂಗಳು ಓರ್ವ ಸದಸ್ಯನ ಮನೆಗೆ ತೆರಳಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅನುಷ್ಠಾನಗಳ ಬಗ್ಗೆ ಸಾಮಾಜಿಕ ಪ್ರಜ್ಞೆ ಮೆರೆಯುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಸಲಹುತ್ತಿದೆ.

ಈ ಸಂಸ್ಥೆ ಶನಿವಾರ, ಹೊಸ ಬದುಕು ಆಶ್ರಮದ ಅನಾಥರೊಂದಿಗೆ ವಿನೂತನ ಮಾದರಿಯ ಕಾರ್ಯಕ್ರಮಗಳನ್ನು ನೀಡಿ ವಿವಿಧ ಪರಿಕರಗಳು ಸೇರಿದಂತೆ ಆರ್ಥಿಕ ಸಹಾಯಹಸ್ತ ಚಾಚಿತು. ಅಷ್ಟೇ ಅಲ್ಲದೆ ಅಲ್ಲಿನ ಅನಾಥರೊಂದಿಗೆ ಭಜನೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವನದಲ್ಲಿ ನಾನಾ ರೀತಿಯಲ್ಲಿ ನೊಂದಿರುವ ಇಲ್ಲಿನ ಆನಾಥರ ಮನಸ್ಸಿಗೆ ಮುದ ನೀಡಿತು.

ಈ ಸಂದರ್ಭ ಸ್ನೇಹಕೂಟದ ಸಂಚಾಲಕಿ ಭಾರತಿ ವಿ. ಮಯ್ಯ, ಚಂದ್ರಿಕಾ ಭಟ್, ಸಾವಿತ್ರಿ ಮಯ್ಯ, ಹೊಸಬದುಕು ಆಶ್ರಮದ ಮುಖ್ಯಸ್ಥರಾದ ವಿನಯಚಂದ್ರ ಸಾಸ್ತಾನ, ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ರಾಜೇಶ್ವರಿ ವಿನಯಚಂದ್ರ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಸ್ನೇಹಕೂಟದ ಸದಸ್ಯೆ ಸುಜಾತ ಬಾಯರಿ ಸಂಯೋಜಿಸಿದರು.