ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಧ್ಯಾಹ್ನ ಭಾರಿ ಮಳೆಯಾದ ವರದಿಯಾಗಿದೆ.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಧ್ಯಾಹ್ನ ಭಾರಿ ಮಳೆಯಾದ ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಕೆಲವು ಕಾಫಿ ತೋಟದ ಮಾಲೀಕರು ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕಿ ಮಳೆಯ ನಿರೀಕ್ಷೆಯಲ್ಲಿದ್ದರು. ನಿನ್ನೆ ರಾತ್ರಿ ಪ್ರಾರಂಭವಾದ ಮಳೆ ರಾತ್ರಿ ಪೂರ್ತಿ ಸುರಿದಿದೆ.ಬಾರಿ ಗಾಳಿ ಮಳೆಯಿಂದ ಶುಕ್ರವಾರ ಬೆಳಗ್ಗಿನ ಜಾವ ಸೋಮವಾರಪೇಟೆ - ಬಾಣಾವರ ಮುಖ್ಯ ರಸ್ತೆಯ ಗೋಣಿಮರೂರು ಗ್ರಾಮದ ಬಳಿ ಬೃಹತ್ ಮರ ಬಿದ್ದಿದ್ದು, ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದರು.ಚಿತ್ರ : ಸೋಮವಾರಪೇಟೆ ಯಿಂದ ಬಾಣಾವಾರಕ್ಕೆ ತೆರಳುವ ಮಾರ್ಗದ ಮೇಲೆ ಗಾಳಿ ಮಳೆಗೆ ಮರ ಉರುಳಿರುವುದು.