ಯುವ ಸಮುದಾಯಕ್ಕೆ ಸಾಮಾಜಿಕ ಜಾಗೃತಿ ಅಗತ್ಯ: ವೈಶಾಲಿ ಕುಡ್ವ

| Published : Jan 10 2025, 12:45 AM IST

ಸಾರಾಂಶ

ಕುಶಾಲನಗರದ ಇನ್ನರ್ ವೀಲ್ ಕ್ಲಬ್‌ಗೆ ಮಂಗಳವಾರ ಅಧಿಕೃತ ಭೇಟಿ ನೀಡಿ ಸಮಾರಂಭದಲ್ಲಿ ಮಾತನಾಡಿದ ಇನ್ನರ್ ವೀಲ್ ಕ್ಲಬ್‌ ಜಿಲ್ಲಾ ಚೇರಮನ್ ವೈಶಾಲಿ ಕುಡ್ವ, ಸಮಾಜದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಮತ್ತು ಒಳ್ಳೆಯ ಸೇವೆ ಮಾಡುತ್ತಾ ಬಂದಿರುವ ಕಾರಣ ಇನ್ನರ್ ವೀಲ್ ಕ್ಲಬ್ ವಿಶೇಷ ಸ್ಥಾನ ಗಳಿಸಿದೆ ಎಂದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಯುವ ಸಮುದಾಯ ದುಶ್ಚಟ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕಾರ್ಯ ಚಟುವಟಿಕೆ ಮಾಡಬೇಕಿದೆ ಎಂದು ಇನ್ನರ್ ವೀಲ್ ಕ್ಲಬ್‌ ಜಿಲ್ಲಾ ಚೇರಮನ್ ವೈಶಾಲಿ ಕುಡ್ವ ಕರೆ ನೀಡಿದ್ದಾರೆ.

ಕುಶಾಲನಗರದ ಇನ್ನರ್ ವೀಲ್ ಕ್ಲಬ್‌ಗೆ ಮಂಗಳವಾರ ಅಧಿಕೃತ ಭೇಟಿ ನೀಡಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಮತ್ತು ಒಳ್ಳೆಯ ಸೇವೆ ಮಾಡುತ್ತಾ ಬಂದಿರುವ ಕಾರಣ ಇನ್ನರ್ ವೀಲ್ ಕ್ಲಬ್ ವಿಶೇಷ ಸ್ಥಾನ ಗಳಿಸಿದೆ ಎಂದರು.

ಯಾವುದೇ ಸೇವೆ ಮಾಡಿದರೂ ಪ್ರತಿಯೊಬ್ಬರೂ ನೆನಪಿಸಿಕೊಳ್ಳುವಂತಿರಬೇಕು. ಸೇವೆಯಿಂದ ನಮಗೆ ಮೊದಲು ಸ್ವಯಂ ಸಂತೃಪ್ತಿ ಸಿಗಬೇಕು. ಇತರರಿಗೂ ಸ್ಪೂರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನಮ್ಮ ಅವಶ್ಯವಿದ್ದು ಅವುಗಳ ಸಂಕಷ್ಟ ಅರಿತು ಕಾರ್ಯೋನ್ಮುಖರಾಗಬೇಕು ಎಂದರು.ಕುಶಾಲನಗರ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಮಾತನಾಡಿ, ಸ್ಥಳೀಯ ಸಂಸ್ಥೆ ಮೂಲಕ ನಡೆಸಿದ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಅಂತಾರಾಷ್ಟ್ರೀಯ ಬ್ಯಾಂಡಿ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುವ ತನುಷ್ಕ ಮತ್ತು ಅಂತಾರಾಷ್ಟ್ರೀಯ ಸೈನ್ಸ್ ಒಲಂಪಿಯಡ್ ನಲ್ಲಿ 617 ರ್‍ಯಾಂಕ್‌ ಪಡೆದ ಶಾರ್ವರಿ ಅವರನ್ನು ಸನ್ಮಾನಿಸಲಾಯಿತು.

ಕುಶಾಲನಗರ ಕ್ಲಬ್ ಉಪಾಧ್ಯಕ್ಷೆ ರೇಷ್ಮಾ ನವೀನ್, ಕಾರ್ಯದರ್ಶಿ ಸೀತಾಲಕ್ಷ್ಮಿ, ಖಜಾಂಚಿ ಜಾಸ್ಮಿನ್, ಎಡಿಟರ್ ಭಾರತಿ, ಮಾಜಿ ಅಧ್ಯಕ್ಷೆಯರಾದ ಸುನೀತಾ, ರೇಖಾ ಗಂಗಾಧರ್, ನೇಹಾ ಜಗದೀಶ್, ಕವಿತಾ ಸಾತಪ್ಪನ್, ನಿರ್ದೇಶಕಿಯರಾದ ಅಶ್ವಿನಿ ರವಿಕುಮಾರ್, ಸಂಧ್ಯಾ ಪ್ರಮೋದ್, ಪೂರ್ಣಿಮಾ ರಾಜೀವ್, ಶಾಲಿನಿ ನರೇಂದ್ರ, ಸುಪ್ರೀತಾ ಇದ್ದರು.