ಸಾರಾಂಶ
ಎನ್. ಎ. ಡಿ. ಜೆಡ್ ಮ್ಯಾನೇಜ್ಮೆಂಟ್ ಸರ್ವೀಸ್‌ಗಳ ನೇತೃತ್ವದಲ್ಲಿ ಪಟ್ಟಣದ ಜ್ಯೋತಿ ಅಂಗ್ಲ ಮಾಧ್ಯಮ ಶಾಲೆಯವರಿಂದ ಮಾತೃಭೂಮಿ ವೃದ್ಧಾಶ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭೇಟಿ ನೀಡಿ ಸಾಮಾಜಿಕ ಜಾಗೃತಿ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮದಲ್ಲಿ ನಾಗಣ್ಣ ಜೈಹಿಂದ್ ಹಾಗೂ ಮುಖ್ಯಶಿಕ್ಷಕ ರಂಗನಾಥ್ ಮಾತನಾಡಿ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಶ್ಲಾಘಿಸಿ ಇಂತಹ ಚಟುವಟಿಕೆಗಳಲ್ಲಿ ಮುಂದುವರಿಯುವಂತೆ ಪ್ರೇರೇಪಿಸಿ ಮಕ್ಕಳು ಬೆಳೆದ ನಂತರ ತಮ್ಮ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸುವ ಬದಲು ಉತ್ತಮ ಜೀವನ ನಡೆಸಿ ಅವರ ಸೇವೆ ಮಾಡುವುದು ಅನನ್ಯವಾದದ್ದು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಎನ್. ಎ. ಡಿ. ಜೆಡ್ ಮ್ಯಾನೇಜ್ಮೆಂಟ್ ಸರ್ವೀಸ್‌ಗಳ ನೇತೃತ್ವದಲ್ಲಿ ಪಟ್ಟಣದ ಜ್ಯೋತಿ ಅಂಗ್ಲ ಮಾಧ್ಯಮ ಶಾಲೆಯವರಿಂದ ಮಾತೃಭೂಮಿ ವೃದ್ಧಾಶ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭೇಟಿ ನೀಡಿ ಸಾಮಾಜಿಕ ಜಾಗೃತಿ ಕಾರ್ಯಕ್ರಮ ನಡೆಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೃದ್ಧರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅಗತ್ಯವಾದ ಮನೆಯ ಉಪಯೋಗದ ವಸ್ತುಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿದರು. ಕಾರ್ಯಕ್ರಮದಲ್ಲಿ ನಾಗಣ್ಣ ಜೈಹಿಂದ್ ಹಾಗೂ ಮುಖ್ಯಶಿಕ್ಷಕ ರಂಗನಾಥ್ ಮಾತನಾಡಿ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಶ್ಲಾಘಿಸಿ ಇಂತಹ ಚಟುವಟಿಕೆಗಳಲ್ಲಿ ಮುಂದುವರಿಯುವಂತೆ ಪ್ರೇರೇಪಿಸಿ ಮಕ್ಕಳು ಬೆಳೆದ ನಂತರ ತಮ್ಮ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸುವ ಬದಲು ಉತ್ತಮ ಜೀವನ ನಡೆಸಿ ಅವರ ಸೇವೆ ಮಾಡುವುದು ಅನನ್ಯವಾದದ್ದು ಎಂದರು.
ಈ ಸಮಯದಲ್ಲಿ ಶಾಲೆಯ ಸ್ಥಾಪಕ ನದೀಮ್ , ಹುಡಾ ಫಾತಿಮಾ, ಸಮಾಜ ಸೇವಕ ರಯಾನ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))