ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ

| Published : Aug 07 2025, 12:46 AM IST

ಸಾರಾಂಶ

ಸೂಲಿಬೆಲೆ: ಇಂದಿನ ನಾಗಾಲೋಟದಲ್ಲಿ ಯಾವುದೇ ಬೇದಭಾವವಿಲ್ಲದೇ ಸಮಾಜ ಬದಲಾವಣೆ ಕಾಣಬೇಕಾದರೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.

ಸೂಲಿಬೆಲೆ: ಇಂದಿನ ನಾಗಾಲೋಟದಲ್ಲಿ ಯಾವುದೇ ಬೇದಭಾವವಿಲ್ಲದೇ ಸಮಾಜ ಬದಲಾವಣೆ ಕಾಣಬೇಕಾದರೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.

ಹೋಬಳಿಯ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಲ್ಟನ್ ಕಂಪನಿ ಹಾಗೂ ಹೊಸಕೋಟೆಯ ಸಾಯಿ ಗೋಕುಲ ಸೇವಾ ಸಂಸ್ಥೆ ಮತ್ತು ಐ೨ಯು ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿಗಳ ಕಿಟ್ ಹಾಗೂ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಲ್ಟಿ ಇಂಡಿಯಾ ಪ್ರೈ ಲಿ ಕಂಪನಿಯವರು ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಚಟುವಟಿಕೆಗಳಿಗೆ ಪೂರಕ ಲೇಖನ ಪರಿಕರಗಳು ಲ್ಯಾಪ್‌ಟಾಪ್ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಮತ್ತಷ್ಟು ಸಂಸ್ಥೆಗಳು ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಸಹಾಯ ಹಸ್ತ ನೀಡಬೇಕು ಎಂದರು.

ಹಿಲ್ಟಿ ಇಂಡಿಯಾ ಪ್ರೈ ಲಿ. ಕಂಪನಿಯ ವ್ಯವಸ್ಥಾಪಕ ರಾಜಶೇಖರ್‌ಪಾಟೀಲ್ ಮಾತನಾಡಿ, ಪ್ರತಿವರ್ಷ ಸರ್ಕಾರಿ ಪ್ರೌಢಶಾಲೆಯನ್ನು ಗುರಿಯಾಗಿಸಿ ಮಕ್ಕಳ ಪಠ್ಯ ಚಟುವಟಿಕೆಗಳಿಗೆ ಪೂರಕವಾದ ಲೇಖನ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಗುತ್ತದೆ. ಹೆಚ್ಚುವರಿ ಪ್ರಸಕ್ತ ಸಾಲಿನಲ್ಲಿ ೮ ಲ್ಯಾಪ್‌ಟಾಪ್ ಶಾಲೆಗೆ ನೀಡಲಾಗಿದೆ ಎಂದರು.

ಸಾಯಿಗೋಕುಲ ಸೇವಾ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಾವು ಖಾಸಗಿ ಕಂಪನಿಯ ಸಿಎಸ್‌ಆರ್‌ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಸಬಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮುಖ್ಯಶಿಕ್ಷಕ ಲೋಕಪ್ಪ ಮಾತನಾಡಿ, ಶಾಲೆಗೆ ಅಗತ್ಯವಿರುವ ಪರಿಪೂರ್ಣವಾದ ಮೂಲ ಸೌಕರ್‍ಯಗಳನ್ನು ಶಾಲಾಭಿವೃದ್ಧಿ ಅಧ್ಯಕ್ಷ ಬಿ.ವಿ.ಸತೀಶಗೌಡರು ಕಲ್ಪಿಸಿಕೊಟ್ಟಿದ್ದಾರೆ. ಕಳೆದ ಸಾಲಿನ ಸುಮಾರು ೨೦ ಲಕ್ಷ ವೆಚ್ಚದಲ್ಲಿ ರಂಗ ಮಂದಿರವನ್ನು ಪೂಜ್ಯ ವೆಂಕಟರಮಣಗೌಡ ಸ್ಮರಣಾರ್ಥವಾಗಿ ನಿರ್ಮಿಸಿಕೊಟ್ಟಿದ್ದಾರೆ, ಯಾವುದೇ ಶಿಕ್ಷಕರ ಕೊರತೆ ಇಲ್ಲದೇ ಇರುವ ಶಾಲೆಗೆಯಾಗಿದ್ದು ಮುಂದಿನ ವರ್ಷದಲ್ಲಿ ಶೇ ೧೦೦ ಫಲಿತಾಂಶ ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಹಿಲ್ಟಿ ಇಂಡಿಯಾ ಕಂಪನಿಯ ರಾಜಶೇಖರ ಪಾಟೀಲ್, ಹೇಮಾ, ಹರೀಶಕುಮಾರ್, ಆದರ್ಶ, ಐ೨ಯು ಕಂಪನಿಯ ಅಮ್ರಿತಾ, ಸೋನಿಪ್ರಿಯಾ, ಸಾಯಿಗೋಕುಲ ಸೇವಾ ಸಂಸ್ಥೆ ಅಧ್ಯಕ್ಷ ರಾಜೇಂದ್ರಪ್ರಸಾದ್‌, ಮುಖ್ಯಶಿಕ್ಷಕ ಲೋಕಪ್ಪ, ಉಷಾರಾಣಿ, ನಾರಾಯಣ್, ಶೀಲಾದೇವಿ, ಯುವ ಮುಖಂಡ ಹಸಿಗಾಳ ಜಗದೀಶ್, ಚಿಕ್ಕಹರಳಗೆರೆ ಜಗನ್ನಾಥ್, ಕಸಾಪ ಅಧ್ಯಕ್ಷ ಎಚ್.ಎಂ.ಮುನಿರಾಜು ಇತರರಿದ್ದರು.

(ಸುದ್ದಿಗೆ ಈ ಫೋಟೋ ಬಳಸಿ)

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಸತೀಶಗೌಡ, ರಾಜೇಂದ್ರಪ್ರಸಾದ್‌, ರಾಜಶೇಖರಪಾಟೀಲ್, ಹೇಮಾ ಇತರರು ಪಾಲ್ಗೊಂಡಿದ್ದರು.

(ಈ ಫೋಟೋ ಪ್ಯಾನಲ್‌ನಲ್ಲಿ ಬಳಸಿ)

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಹಿಲ್ಟಿ ಇಂಡಿಯಾ ಹಾಗೂ ಸಾಯಿಗೋಕುಲ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮವನ್ನು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಉದ್ಘಾಟಿಸಿದರು. ಸೇವಾ ಸಂಸ್ಥೆಯ ರಾಜೇಂದ್ರ ಪ್ರಸಾದ್‌, ಹಿಲ್ಟಿ ಇಂಡಿಯಾ ರಾಜಶೇಖರಪಾಟೀಲ್ ಇತರರಿದ್ದರು.