ನಾರಾಯಣ ಗುರುಗಳ ಆಧ್ಯಾತ್ಮಿಕತೆಯಿಂದ ಸಾಮಾಜಿಕ ಬದಲಾವಣೆ

| Published : Aug 24 2025, 02:00 AM IST

ಸಾರಾಂಶ

ನಾರಾಯಣ ಗುರುಗಳು ಆಧ್ಯಾತ್ಮಿಕತೆ ಮೂಲಕ ಸಾಮಾಜಿಕ ಬದಲಾವಣೆ ತಂದು ಬಹುದೊಡ್ಡ ಸಾಮಾಜಿಕ ಚಳವಳಿ ಹುಟ್ಟು ಹಾಕಿದರು. ಅವರ ಚಳವಳಿಯಿಂದ ಉಂಟಾದ ಸಾಮಾಜಿಕ ಬದಲಾವಣೆಯು ಜನರ ಬದುಕಿನಲ್ಲಿ ಜೀವನಮಟ್ಟವನ್ನು ಉನ್ನತ ಸ್ಥಿತಿಗೆ ತಂದಿದೆ.

ಗಂಗಾವತಿ:

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾರಾಯಣ ಗುರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿ ಆಚರಿಸಲಾಯಿತು.

ಪ್ರಾಂಶುಪಾಲ ಪ್ರೊ. ಕರಿಗೂಳಿ ಮಾತನಾಡಿ, ನಾರಾಯಣ ಗುರುಗಳು ಆಧ್ಯಾತ್ಮಿಕತೆ ಮೂಲಕ ಸಾಮಾಜಿಕ ಬದಲಾವಣೆ ತಂದು ಬಹುದೊಡ್ಡ ಸಾಮಾಜಿಕ ಚಳವಳಿ ಹುಟ್ಟು ಹಾಕಿದರು. ಅವರ ಚಳವಳಿಯಿಂದ ಉಂಟಾದ ಸಾಮಾಜಿಕ ಬದಲಾವಣೆಯು ಜನರ ಬದುಕಿನಲ್ಲಿ ಜೀವನಮಟ್ಟವನ್ನು ಉನ್ನತ ಸ್ಥಿತಿಗೆ ತಂದಿದೆ ಎಂದು ಅಭಿಪ್ರಾಯಪಟ್ಟರು.

ಸಹಾಯಕ ಪ್ರಾಧ್ಯಾಪಕ ವಿರೂಪಾಕ್ಷ ಮಾತನಾಡಿ, ಶ್ರೀನಾರಾಯಣ ಗುರುಗಳು ಜನರ ಬದುಕಿಗೆ ಹೊರೆಯಾಗಿದ್ದ ಸಾಮಾಜಿಕ ಕಂದಾಚಾರ ತೊರೆದು ವೈಚಾರಿಕವಾಗಿ ಜೀವಿಸುವ ಅವಕಾಶಗಳನ್ನು ಅನುಸರಿಸುವಂತೆ ಜನ ಚಳವಳಿಯನ್ನು ಕಟ್ಟಿದರು ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ ಮಾತನಾಡಿ, ದೇವರಾಜ ಅರಸು ಅವರ ಬದುಕಿನ ರಾಜಕೀಯ ಹೋರಾಟ ಮತ್ತು ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತಂದು ಜನರ ಬದುಕಿನಲ್ಲಿ ಬದಲಾವಣೆಗೆ ಕಾರಣವಾದರು ಎಂದರು.

ಈ ವೇಳೆ ಸಹ ಪ್ರಾಧ‍್ಯಾಪಕ ಸರ್ಫರಾಜ್ ಅಹ್ಮದ್, ಐಕ್ಯೂಎಸಿ ಸಂಚಾಲಕ ರವಿಕುಮಾರ, ಸಹಾಯಕ ಪ್ರಾಧ್ಯಾಪಕ ವೀರೇಶ, ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ, ಚಿನ್ನ ವರಪ್ರಸಾದ, ಶರಣ, ಶಾಂತಿ ಹಾಜರಿದ್ದರು.