ಶೈಕ್ಷಣಿಕ, ಆರ್ಥಿಕ ಸದೃಢತೆಯಿಂದ ಸಮಾಜ ಅಭಿವೃದ್ಧಿ

| Published : Jul 13 2024, 01:44 AM IST

ಸಾರಾಂಶ

ಮಸ್ಕಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮಸ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ವೀರೇಶ್ ಸೌದಿ ಅವರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಸ್ಕಿ

ಪ್ರತಿಯೊಬ್ಬರೂ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮಸ್ಕಿ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಪತ್ರಕರ್ತ ವೀರೇಶ್ ಸೌದ್ರಿ ಹೇಳಿದರು.

ಪಟ್ಟಣದಲ್ಲಿ ಬ್ರಹ್ಮಾರಂಭ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಬಣಿಜಿಗ ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಈ ವೇಳೆ ಸಮಾಜದ ಮುಖಂಡರಾದ ಮಲ್ಲೇಶಪ್ಪ ಬ್ಯಾಳಿ, ಪಂಪಣ್ಣ ಗುಂಡಳ್ಳಿ, ಶಶಿಕಾಂತ್ ಬ್ಯಾಳಿ, ಉಮಾಕಾಂತಪ್ಪ ಸಂಗನಾಳ, ಡಾ.ಮಲ್ಲಿಕಾರ್ಜುನ ಇತ್ಲಿ, ಬಸಲಿಂಗಪ್ಪ ಶೆಟ್ಟಿ, ಸುಗಣ್ಣ ಬಾಳೆಕಾಯಿ, ಬಸವರಾಜ್ ಬೆಲ್ಲದ, ನಾಗರಾಜ್ ಎಂಬಲದ, ವೀರೇಶ್ ತಾಳಿಕೋಟಿ, ಡಾ.ಮಲ್ಲೇಶಪ್ಪ, ಬಸವರಾಜ್ ಗುಂಡಳ್ಳಿ, ಗವಿಸಿದ್ದಪ್ಪ ಸೇರಿ ಅನೇಕರಿದ್ದರು.

*ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮಸ್ಕಿ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ನಾಗರಾಜ್ ಚೌಶೆಟ್ಟಿ ಹಾಗೂ ತಾಲೂಕು ಘಟಕದ ಅಧ್ಯಕ್ಷರಾಗಿ ವೀರೇಶ್ ಸೌದ್ರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.