ಸಾರಾಂಶ
ಶಿಗ್ಗಾಂವಿ: ಸಾಮಾಹಿಕ ವಿವಾಹದಿಂದ ವಿವಿಧ ಸಮುದಾಯಗಳು, ಕುಟುಂಬಗಳು ಮತ್ತು ಜನಗಳನ್ನು ಒಂದುಗೂಡಿಸುವಂತಾಗುತ್ತದೆ ಭಾರತ ಸೇವಾ ಸಂಸ್ಥೆ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ತಿಳಿಸಿದರು.ತಾಲೂಕಿನ ಬನ್ನೂರ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನಡೆದ ೧೧ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಮೂಹಿಕ ವಿವಾಹಗಳಿಂದ ಖರ್ಚು- ವೆಚ್ಚಗಳಿಗೆ ಕಡಿವಾಣ ಹಾಕುವುದು ಅಲ್ಲದೇ ಮೇಲು ಕೀಳೆಂಬ ಭಾವನೆಯಿಲ್ಲದೆ ಎಲ್ಲ ಧರ್ಮಿಯರು ಸಮಾನರೆನ್ನುವ ಮನೋಭಾವನೆಯನ್ನು ಹುಟ್ಟುಹಾಕುತ್ತದೆ ಎಂದರು.ಸಾನ್ನಿಧ್ಯವನ್ನು ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು ವಹಿಸಿ ಮಾತನಾಡಿ, ಭಾರತ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ. ತಾಲೂಕಿನಲ್ಲಿ ಎಲ್ಲ ಸಾಮಾಜಿಕ ಕೆಲಸಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಶಿಗ್ಗಾಂವಿ ಮತ್ತು ಸವಣೂರು ತಾಲೂಕುಗಳಲ್ಲಿ ಮಾದರಿಯಾಗುವಂಥ ಕಾರ್ಯಗಳನ್ನು ಸಂಸ್ಥೆ ಮಾಡುತ್ತ ಬಂದಿದ್ದು, ತಮ್ಮ ಕಾರ್ಯ ಶ್ಲಾಘನೀಯ ಎಂದರು.ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮಿಗಳು ಮಾತನಾಡಿ, ಸರ್ವಧರ್ಮ ಸಾಮೂಹಿಕ ವಿವಾಹ ಮಾದರಿ ಕಾರ್ಯಕ್ರಮ ಸತತವಾಗಿ ೧೧ ವರ್ಷಗಳ ಕಾಲ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯವನ್ನು ಬನ್ನೂರಿನಲ್ಲಿ ಮಾಡಿಕೊಂಡು ಬಂದಿರುವುದು ಮಾದರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಬಂಕಾಪುರ ಅರಳೆಲೆಹಿರೇಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಿರೇಮಣಕಟ್ಟಿಯ ಶ್ರೀಗಳು ಸೇರಿದಂತೆ ಶಿವಾನಂದಯ್ಯ ಹಿರೇಮಠ, ಮಹಾಲಿಂಗಯ್ಯ ಚಿಕ್ಕಮಠ, ಮುಪ್ಪಯ್ಯ ಹಿರೇಮಠ, ಕುಬೇರಗೌಡ ಪೋಲಿಸಗೌಡ್ರ, ಶಂಭನಗೌಡ ಪೊಲೀಸಗೌಡ್ರ, ಟಾಕನಗೌಡ ಪಾಟಿಲ್, ವೀರನಗೌಡ ಸಿ. ಹೊನ್ನಾಗೌಡ್ರ, ಶಂಕರಗೌಡ ಪೊಲೀಸಗೌಡ್ರ, ದೇವಪ್ಪ ಬಡಿಗೇರ, ಧರ್ಮಪ್ಪ ಹೊನ್ನಪ್ಪನವರ, ವೀರನಗೌಡ ಕೆ. ದುಂಡಿಗೌಡ್ರ, ಎಫ್.ವಿ. ಪೊಲೀಸಗೌಡ್ರ, ಎನ್.ಸಿ. ಸಿದ್ದಣ್ಣವರ, ನೇಮನಗೌಡ ಪೊಲೀಸಗೌಡ್ರ, ನಿಸ್ಸಿಮಪ್ಪ ಗಾಣಿಗೇರ, ಗುರುಬಸಪ್ಪ ಹಡಪದ, ವೀರಭದ್ರಗೌಡ ಮಾ ಪೊಲೀಸಗೌಡ್ರ, ಬಸವರಾಜ ಲಂಗೋಟಿ, ವೀರಭದ್ರಪ್ಪ ಆಗಡಿ, ರುದ್ರಗೌಡ ಮ. ಪೊಲೀಸಗೌಡ್ರ ಇತರರು ಇದ್ದರು.ಹಿರೇಕೆರೂರಿನಲ್ಲಿ ಮಹಿಳಾ ದಿನಾಚರಣೆ
ಹಿರೇಕೆರೂರು: ಪಟ್ಟಣದ ಮಾಚಿದೇವ ಸಮುದಾಯ ಭವನದಲ್ಲಿ ಮಾಚಿದೇವ ಮಹಿಳಾ ಮಂಡಳಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಮಾಚಿದೇವ ಮಹಿಳಾ ಮಂಡಳಿಯ ಅಧ್ಯಕ್ಷೆ ಮಧುಶ್ರೀ ಮಡಿವಾಳರ ಮಾತನಾಡಿ, ಮಹಿಳೆಯು ಮನೆಯಲ್ಲಿ ತಾಯಿಯಾಗಿ, ಮಗಳಾಗಿ, ಅತ್ತೆಯಾಗಿ ಹೆಂಡತಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾರೆ. ಜತೆಗೆ ಮನೆಯ ಹೊರಗೂ ಕೆಲಸ ನಿರ್ವಹಿಸಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸದಸ್ಯರಾದ ಅಕ್ಕಮ್ಮ ಮಡಿವಾಳರ, ಪುಟ್ಟಮ್ಮ, ಮಂಜುಳಾ ಪಿ., ಇಂದ್ರಮ್ಮ, ವೇದಾವತಿ, ಚಿನ್ನಮ್ಮ, ರಾಧಾ, ರೇಣುಕಾ, ಸುನಂದಮ್ಮ, ಗೌರಮ್ಮ ಶಾಂತಮ್ಮ, ರತ್ನಮ್ಮ, ಮಂಜುಳಾ ಎಲ್., ಪ್ರೇಮ ಮಡಿವಾಳರ, ಜಯಶೀಲ ಮಡಿವಾಳರ ಸೇರಿದಂತೆ ಇತರರಿದ್ದರು.