ಸಾಮಾಜಿಕ ಸಮಸ್ಯೆಗಳು ಯುವಕರ ಅಶಾಂತಿಗೆ ಕಾರಣ: ಡಾ. ವೀರೇಂದ್ರ ಕುಮಾರ

| Published : Aug 05 2024, 12:32 AM IST

ಸಾಮಾಜಿಕ ಸಮಸ್ಯೆಗಳು ಯುವಕರ ಅಶಾಂತಿಗೆ ಕಾರಣ: ಡಾ. ವೀರೇಂದ್ರ ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಜಗತ್ತಿನಲ್ಲಿ ಬಹುಪಾಲು ಯುವಕರು ಸಾಮಾಜಿಕ ದಾರಿದ್ರ್ಯದಲ್ಲಿ ಬಳಲುತ್ತಿದ್ದಾರೆ.

ಭಾರತದಲ್ಲಿ ಯುವಕರ ಅಶಾಂತಿ, ಪರಿಹಾರೋಪಯಗಳು-ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ ಕೊಪ್ಪಳ

ಇಡೀ ಜಗತ್ತಿನಲ್ಲಿ ಬಹುಪಾಲು ಯುವಕರು ಸಾಮಾಜಿಕ ದಾರಿದ್ರ್ಯದಲ್ಲಿ ಬಳಲುತ್ತಿದ್ದಾರೆ. ಕಾನೂನು ಬಾಹಿರವಾಗಿ ಆಯುಧಗಳ ಸರಬರಾಜು, ಕಾನೂನು ಬಾಹಿರ ವ್ಯವಹಾರ, ಮಾದಕ ದ್ರವ್ಯ ವ್ಯವಹಾರ, ಮಾನವ ಕಳ್ಳಸಾಗಣೆಗಳು ಜ್ವಲಂತ ಸಮಸ್ಯೆಗಳಾಗಿವೆ. ಇಂತಹ ಅನೇಕ ಸಾಮಾಜಿಕ ಸಮಸ್ಯೆಗಳು ಯುವಕರ ಅಶಾಂತಿಗೆ ಕಾರಣ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೀರೇಂದ್ರ ಕುಮಾರ ಎನ್. ಮಾತನಾಡಿದರು.

ಶನಿವಾರ ತಾಲೂಕಿನ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಭಾರತದಲ್ಲಿ ಯುವಕರ ಅಶಾಂತಿ, ಪರಿಹಾರೋಪಯಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಸಮುದಾಯವನ್ನು ಸರ್ಕಾರಗಳು ನಿರ್ಲಕ್ಷಿಸಿವೆ. ಇದು ಯುವಕರ ಅಶಾಂತಿಗೆ ಕಾರಣ. ಯುವಕರ ಮನಸ್ಥಿತಿಯಲ್ಲಿ ಈ ಜಗತ್ತಿನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಧೋರಣೆ ಬಂದಿದೆ. ವಿವಿಧ ಅಸಮಾನತೆಗಳಿಂದಾಗಿ ಯುವಕರಲ್ಲಿ ಅಶಾಂತಿ ಉಂಟಾಗುತ್ತಿದೆ.

ಇದನ್ನು ಹೋಗಲಾಡಿಸಲು ವಿದ್ಯಾರ್ಥಿ ಚಳವಳಿಗಳು ರೂಪಾಗೊಳ್ಳುತ್ತಿವೆ. ಎಐ ತಂತ್ರಜ್ಞಾನ ಯುವಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಆದ್ದರಿಂದ ಯುವಕರು ಮೂಲ ಕೌಶಲಗಳಾದ ಇಂಗ್ಲಿಷ್ ಸಂವಹನ ಕೌಶಲ, ಕಂಪ್ಯೂಟರ್ ಜ್ಞಾನ, ಆಧುನಿಕ ತಂತ್ರಜ್ಞಾನಗಳನ್ನು ರೂಢಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಸಮಾಜ ಯುವಕರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಅವರ ಅತೃಪ್ತಿಯನ್ನು ಹೋಗಲಾಡಿಸಬೇಕು. ಅರ್ಹತೆ ಹೊಂದಿರುವ ಯುವ ಜನತೆ ಸಮಾಜದೊಂದಿಗೆ ಹೊಂದಾಣಿಕೆ ಒಡನಾಟ ಹೊಂದಿದಾಗ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜ ಅಭಿವೃದ್ಧಿ ಹೊಂದಬಹುದು ಎಂದರು.

ಕಾಲೇಜಿನ ರಾಜ್ಯಶಾಸ್ತ್ರದ ಉಪನ್ಯಾಸಕ ಬಸವರಾಜ ಕಲ್ಮನಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ ಅಂಗಡಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಎಂಬುದು ಕೇವಲ ಪಠ್ಯಪುಸ್ತಕದಿಂದ ಮಾತ್ರ ನೆರವೇರುವುದಿಲ್ಲ. ಅದು ಇಂತಹ ಗುಣಾತ್ಮಕ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ ಎಂದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಮೆಹಬೂಬ್ ಪಾಷಾ ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಮುಖ್ಯಸ್ಥೆ ಪ್ರೊ. ಅನಿತಾ ಎಂ., ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ. ಚಿನ್ನತಾಯಮ್ಮ, ಪ್ರಥಮ ದರ್ಜೆ ಸಹಾಯಕ ಶ್ರೀಧರ, ಉಪನ್ಯಾಸಕರಾದ ನಾಗಪ್ಪ ಹಳ್ಳಿಗುಡಿ, ಮಹೇಶಕುಮಾರ, ಜಗದೀಶ ಹೂಗಾರ, ಎಚ್.ಕೆ. ನರೆಗಲ್, ಚೆನ್ನಪ್ಪ ಸಂಗಮೇಶ್ವರ, ವೆಂಕಟೇಶ ನಾಯಕ ಇತರರು ಭಾಗವಹಿಸಿದ್ದರು.