ಸಮಾಜ ತಿದ್ದಲು ಪತ್ರಿಕೆಗಳು ಪೂರಕ: ಡಿ ಆರ್ ರಾಜು

| Published : Aug 04 2024, 01:28 AM IST

ಸಾರಾಂಶ

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜೋಡು ರಸ್ತೆ ಹೋಟೆಲ್‌ ಸಭಾಂಗಣದಲ್ಲಿ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸಮಾಜವನ್ನು ತಿದ್ದುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ ಎಂದು ಉದ್ಯಮಿ ಡಿ ಆರ್ ರಾಜು ಹೇಳಿದರು.

ಅವರು ಮಂಗಳವಾರ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜೋಡು ರಸ್ತೆ ಹೋಟೆಲ್‌ ಸಭಾಂಗಣದಲ್ಲಿ ನಡೆದ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದರು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಹಾಗೂ ಇನ್ನಿತರ ಸಮಸ್ಯೆ ಕುರಿತು ಮಾತನಾಡಿದರು.

ಸಾಹಿತಿ, ಶಿಕ್ಷಕಿ ಸಾವಿತ್ರಿ ಮನೋಹರ್ ಮಾತನಾಡಿ, ಪತ್ರಕರ್ತರು ಎಂದರೆ ಜನರ ಜೀವನದ ಪ್ರತಿ ಬಿಂಬ ಪತ್ರಕರ್ತ ಬದುಕು ತುಂಬಾ ಕಠಿಣವಾಗಿದೆ ಎಂದರು .

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಬಿಪಿನ್ ಚಂದ್ರ ಪಾಲ್ ಮಾತನಾಡಿ, ಪತ್ರಕರ್ತರು ಸಮಾಜದ ವರ್ತಮಾನದ ಪರಿಸ್ಥಿತಿಯನ್ನು ಗ್ರಹಿಸಿ ವರದಿಮಾಡಬೇಕು, ಸಮಾಜದ ಏಳಿಗೆಗಾಗಿ ಚಿಂತನೆ ಮಾಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು .

ಪತ್ರಕರ್ತ ಸಂಘದ ಉಡುಪಿ ಜಿಲ್ಲಾ ರಾಜೇಶ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ವಹಿಸಿದರು.

ವೇದಿಕೆಯಲ್ಲಿ ತಾಲೂಕು ಕೋಶಾಧಿಕಾರಿ ಕೆ ಎಂ ಕಲೀಲ್, ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸದಸ್ಯ ಉದಯಶೆಟ್ಟಿ ವಂದಿಸಿದರು.