ಸಾರಾಂಶ
ಸಾಮಾಜಿಕ ಪಿಡುಗಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ಧ್ವನಿ ಎತ್ತಿ ಸಮಾಜಕ ಕಂದಾಚಾರದ ಪಿಡುಗುಗಳನ್ನು ತಿದ್ದಿದವರು, ಜನರಿಗೆ ಸನ್ಮಾರ್ಗವನ್ನು ತೋರಿಸಿಕೊಟ್ಟವರು. ಇಂತಹ ಮಹಾನೀಯರ ಜಯಂತಿ ಆಚರಣೆ ನಮ್ಮ ಪೂರ್ವಜನ್ಮದ ಸುಕೃತ .
ಸೂಲಿಬೆಲೆ: ಸಮಾಜದಲ್ಲಿದ್ದ ಜಾತಿ, ಮತ, ಕಂದಾಚಾರದ ವಿರುದ್ಧ ಗಟ್ಟಿ ಧ್ವನಿ ಎತ್ತಿ ಸಾಮಾಜಿಕ ಸುಧಾರಣೆಯತ್ತ ಹೊಸ ಮುನ್ನಡಿ ಬರೆದವರು ಜಗಜ್ಯೋತಿ ಬಸವೇಶ್ವರರು ಎಂದು ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಎಸ್.ಸಿ.ರವಿಕುಮಾರ್ ಹೇಳಿದರು. ಪ್ರಸನ್ನ ಪಾರ್ವತಿ ಪರಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಯಾವುದೇ ಒಂದು ವರ್ಗಕ್ಕಾಗಲಿ, ಜಾತಿಗಾಗಲಿ ಸೀಮಿತರಲ್ಲ. ಅವರೊಬ್ಬ ಮಾನವತವಾದಿ, ಅವರ ತತ್ವ ಸಿದ್ಧಾಂತಗಳು ಚಿರಕಾಲ ಸಮಾಜಕ್ಕೆ ದಾರಿದೀಪ ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವರುದ್ರಪ್ಪ ಮಾತನಾಡಿ, ಸಾಮಾಜಿಕ ಪಿಡುಗಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ಧ್ವನಿ ಎತ್ತಿ ಸಮಾಜಕ ಕಂದಾಚಾರದ ಪಿಡುಗುಗಳನ್ನು ತಿದ್ದಿದವರು, ಜನರಿಗೆ ಸನ್ಮಾರ್ಗವನ್ನು ತೋರಿಸಿಕೊಟ್ಟವರು. ಇಂತಹ ಮಹಾನೀಯರ ಜಯಂತಿ ಆಚರಣೆ ನಮ್ಮಗಳ ಪೂರ್ವಜನ್ಮದ ಸುಕೃತ ಎಂದರು.ಹಿರಿಯರಾದ ಸೂ.ಚಿ.ಬಸವರಾಜ್, ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಜುಂಜಪ್ಪ, ವಿನಯ್, ಕೆಇಬಿ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಗ್ಯಾಸ್ ಮುನಿರಾಜು, ರಮೇಶ್, ರುದ್ರಪ್ಪ, ಮಲ್ಲೇಶ್ ಆರಾಧ್ಯ, ಶಂಕರ ಆರಾಧ್ಯ, ಗಿರೀಶ್, ವಿಜಯಕುಮಾರ್, ಶ್ರೀಕಂಠ, ವಿಶ್ವನಾಥ್, ವಿಮಲ, ಮಧುರಾ, ಭಾಗ್ಯಮ್ಮ, ಫೂಜಾ ಇತರರಿದ್ದರು.