ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಅವಶ್ಯ: ಹೆಬ್ಬಳ್ಳಿ

| Published : Jul 15 2025, 01:12 AM IST

ಸಾರಾಂಶ

ಪತ್ರಕರ್ತರು ಜಾತ್ಯತೀತ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.

ಗದಗ: ಪತ್ರಕರ್ತರು ಜಾತ್ಯತೀತ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.ನಗರದ ಉಷಾದೇವಿ ಜಿ. ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್ ಸೆಂಟರ್‌ದಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ ಸಾಪ್ತಾಹಿಕ ಸಭೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಬದ್ಧತೆ, ಹೊಣೆಗಾರಿಕೆ, ಜವಾಬ್ದಾರಿ ಇಲ್ಲದವರು ಪತ್ರಕರ್ತರಾಗಲು ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವದು ಕೂಡ ಪತ್ರಕರ್ತರಾದವರ ಹೊಣೆಗಾರಿಕೆಯಾಗಿದೆ. ಬ್ರೇಕಿಂಗ್ ನ್ಯೂಸ್‌ ನೀಡುವ ಭರಾಟೆಯಲ್ಲಿ ಸುದ್ದಿಯ ನೈಜತೆಗೆ ಧಕ್ಕೆ ಆಗಬಾರದು, ವಾಸ್ತವಿಕ ಸುದ್ದಿಗಳು ಸಾರ್ವಜನಿಕರ ಗಮನ ಸಳೆಯುವವು ಎಂದರು.ಪತ್ರಕರ್ತ ಬಸವರಾಜ ದಂಡಿನ ಮಾತನಾಡಿ, ಪತ್ರಕರ್ತರು ಸಂಯಮ, ಬದ್ಧತೆ ಮತ್ತು ಸಾಮಾಜಿಕ ಹೊಣೆಗಾರಿಕೆ ವೃತ್ತಿಯಲ್ಲಿ ರೂಢಿಸಿಕೊಳ್ಳುವದು ಅವಶ್ಯ ಹಾಗೂ ಅನಿವಾರ್ಯವಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರವೂ ಇದೆ. ಬೇರೆ ಜಿಲ್ಲೆಗೆ ಹೊಲಿಕೆ ಮಾಡಿದಲ್ಲಿ ಗದಗ ಪರಿಸರದಲ್ಲಿ ಆರೋಗ್ಯಕರ ಪತ್ರಿಕೋದ್ಯಮ, ಪತ್ರಕರ್ತರ ಬಳಗವಿದೆ ಎಂದರು.ಕ್ಲಬ್ ಅಧ್ಯಕ್ಷ ಆರ್.ಕೆ.ಗಚ್ಚಿನಮಠ ಮಾತನಾಡಿ, ರೋಟರಿ ಕ್ಲಬ್‌ನ ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳಿಗೆ ಗದುಗಿನ ಪತ್ರಿಕೆಗಳು ವ್ಯಾಪಕ ಪ್ರಚಾರ ನೀಡುವ ಮೂಲಕ ನಮ್ಮನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿದ್ದಾರೆ. ಆಡಳಿತ ಸುಧಾರಣೆ, ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.ಈ ಸಂದರ್ಭದಲ್ಲಿ ಕ್ಲಬ್‌ನ ಕಾರ್ಯದರ್ಶಿ ಸುರೇಶ ಕುಂಬಾರ ಅವರ ಜನ್ಮದಿನವನ್ನು ಆಚರಿಸಲಾಯಿತು. ಪತ್ರಕರ್ತರಾದ ರಾಜು ಹೆಬ್ಬಳ್ಳಿ, ಬಸವರಾಜ ದಂಡಿನ ಅವರನ್ನು ಸನ್ಮಾನಿಸಲಾಯಿತು.ಸಂತೋಷ ಅಕ್ಕಿ ಹಾಗೂ ಶ್ರೀಧರ ಸುಲ್ತಾನಪೂರ ಪರಿಚಯಿಸಿದರು. ಶೈಲೇಂದ್ರ ಬಿರಾದಾರ, ಡಾ. ರಾಜಶೇಖರ ಬಳ್ಳಾರಿ, ಡಾ. ಶೇಖರ ಸಜ್ಜನರ, ಪ್ರಾ. ಅಶೋಕ ಅಕ್ಕಿ, ಪತ್ರಕರ್ತ ಈಶ್ವರ ಬೆಟಗೇರಿ, ಶ್ರೀಧರ ಧರ್ಮಾಯತ, ಬಾಲಕೃಷ್ಣ ಕಾಮತ, ಶಿವಾಚಾರ್ಯ ಹೊಸಳ್ಳಿಮಠ, ಲಲಿತಾ ಗಚ್ಚಿನಮಠ ಸೇರಿದಂತೆ ಮುಂತಾದವರು ಇದ್ದರು. ಕಾರ್ಯದರ್ಶಿ ಸುರೇಶ ಕುಂಬಾರ ಸ್ವಾಗತಿಸಿ, ನಿರೂಪಿಸಿದರು.