ಬಸವಣ್ಣರಿಂದ ಸಾಮಾಜಿಕ ಕ್ರಾಂತಿ: ಶಿವಲಿಂಗ ಸ್ವಾಮೀಜಿ

| Published : May 02 2025, 12:14 AM IST

ಬಸವಣ್ಣರಿಂದ ಸಾಮಾಜಿಕ ಕ್ರಾಂತಿ: ಶಿವಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದರೆ ಸದ್ಗತಿ ಪಡೆಯಲು ಸಾಧ್ಯ. ಜಗತ್ತಿನ ಬಹುತೇಕ ದಾರ್ಶನಿಕರು ಸಂಸಾರಿಗಳು. ಅವರೆಲ್ಲರೂ ಆಧ್ಯಾತ್ಮಿಕ ಜೀವನವನ್ನು ಪ್ರತಿಪಾದಿಸಿದರು.

ಹಾವೇರಿ: ಬಸವೇಶ್ವರರು ೧೨ನೇ ಶತಮಾನದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿ ದಾರಿದೀಪವಾಗವಾಗಬೇಕು ಎಂದು ಹಂದಿಗನೂರಿನ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹಾಲಗಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಆಂಜನೇಯ ಶಿಲಾ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಮತ್ತು ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಪೀಠದ ಫಕೀರ ಸಿದ್ದರಾಮ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದರು.ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದರೆ ಸದ್ಗತಿ ಪಡೆಯಲು ಸಾಧ್ಯ. ಜಗತ್ತಿನ ಬಹುತೇಕ ದಾರ್ಶನಿಕರು ಸಂಸಾರಿಗಳು. ಅವರೆಲ್ಲರೂ ಆಧ್ಯಾತ್ಮಿಕ ಜೀವನವನ್ನು ಪ್ರತಿಪಾದಿಸಿದರು. ಅಷ್ಟೇ ಅಲ್ಲ, ನಾವು ಪೂಜಿಸುವ ಬಹುತೇಕ ದೇವರುಗಳು ಸಂಸಾರಿಗಳೇ. ಹೀಗಾಗಿ ಸಂಸಾರದಲ್ಲಿಯೇ ಸದ್ಗತಿ ಕಾಣಲು ಸಾಧ್ಯ ಎಂಬುದನ್ನು ದಾರ್ಶನಿಕರು ಮತ್ತು ದೇವರು ತೋರಿಸಿಕೊಟ್ಟಿದ್ದಾರೆ ಎಂದರು.ಪ್ರತಿಯೊಬ್ಬ ರೈತರು ಯಶಸ್ಸು ಗಳಿಸಬೇಕಾದರೆ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಜತೆಗೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ಕೃಷಿಯನ್ನು ಲಾಭದಾಯಕ ಮಾಡಲು ಸಾಧ್ಯವಿದೆ ಎಂದರು. ವಿಜಯಪುರದ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ರೈತರು ಕೃಷಿಯಲ್ಲಿ ಯಶಸ್ಸು ಗಳಿಸಬೇಕಾದರೆ ಅಗತ್ಯ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.ಗ್ರಾಮದ ಅಭಿವೃದ್ಧಿಗೆ ಯುವಕರು ಜಾತ್ಯತೀತವಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ಪತ್ರಕರ್ತರಾದ ರವೀಂದ್ರ ಮುದ್ದಿ, ಗೋವಿಂದ ಮಡಿವಾಳರ, ಜಗದೀಶ ಕುಲಕರ್ಣಿ ಮಾತನಾಡಿದರು. ಮಾನ್ವಿ ತಾಲೂಕು ಬೆಟ್ಟದೂರಿನ ಪ್ರಭುಲಿಂಗೇಶ್ವರ ಮಠದ ಮಹಾದೇವ ಸ್ವಾಮೀಜಿ ಪ್ರವಚನ ನೀಡಿದರು. ಮರೋಳದ ಮುದಕಯ್ಯ ಶಾಸ್ತ್ರಿಗಳು ಅಧ್ಯಾತ್ಮ ಮತ್ತು ಪ್ರಾಪಂಚಿಕ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೇವಸ್ಥಾನದ ನಿರ್ಮಾಣ ಮತ್ತು ಅನ್ನದಾಸೋಹಕ್ಕೆ ನೆರವು ನೀಡಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸಮಿತಿ ಪರವಾಗಿ ಸನ್ಮಾನಿಸಲಾಯಿತು. ಬಸವರಾಜ ಕುರಿಯವರ ಸ್ವಾಗತಿಸಿ, ನಿರೂಪಿಸಿದರು. ಚನ್ನವೀರಯ್ಯ ಕುಲಕರ್ಣಿ ವಂದಿಸಿದರು. ಕಲಬುರಗಿಯ ಸಂಗಮೇಶ ಸೋಂತ ಮತ್ತು ಗದಗದ ಮಹಾಂತೇಶ ತಾಳಗಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಣದ ಜತೆ ಸಂಸ್ಕಾರ ಕಲಿಸಿ

ಶಿಗ್ಗಾಂವಿ: ಮಕ್ಕಳಿಗೆ ಸಂಸ್ಕಾರದ ಭಾರ ದೊಡ್ಡದು. ಅದನ್ನು ಪ್ರತಿಯೊಬ್ಬ ತಾಯಂದಿರು ಪಾಲಕರು ನೀಡಿದಾಗ ದೇಶಕ್ಕೆ ಒಬ್ಬ ಉತ್ಕೃಷ್ಟವಾದ ಮನುಷ್ಯನಾಗುತ್ತಾನೆ ಎಂದು ತಿರುಮಲಕೊಪ್ಪ(ತಡಸ ಕ್ರಾಸ್) ಧರ್ಮನಿವಾಸದ ದಾನಯ್ಯದೇವರು ರೇಣುಕ ತಿಳಿಸಿದರು.ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಕಲಬುರಗಿ ಶರಣ ಬಸವೇಶ್ವರರ ೩೬ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಧರ್ಮಸಭೆಯ ನೇತೃತ್ವವನ್ನು ವಹಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಂಸ್ಕಾರವನ್ನು ಉಣಬಡಿಸುವುದು ಮುಖ್ಯವಾಗಿದ್ದು, ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವೂ ಅಗತ್ಯವಾಗಿದೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಗಂಜೀಗಟ್ಟಿ ಚರಮೂರೇಶ್ವರ ಮಠದ ಡಾ. ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡಿದರು.ನೂತನ ತೇರಿನ ಕಳಸಾರೋಹಣವನ್ನು ಬಂಕಾಪುರ ಅರಳೆಲೆ ಹಿರೇಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ನೆರವೆರಿಸಿದರು. ನಂತರ ಸಾಯಂಕಾಲ ಶರಣ ಬಸವೇಶ್ವರ ನೂತನ ರಥೋತ್ಸವ ಜರುಗಿತು.ಪುರಾಣ ಪ್ರವಚನಕಾರರು ಫಕ್ಕೀರಯ್ಯ ಶಾಸ್ತ್ರಿಗಳ ಶಿಷ್ಯರಾದ ಗುರುಪಾದಯ್ಯ ಶಾಸ್ತ್ರಿಗಳು ಹಿರೇಮಠ, ಸಂಗೀತ ಸೇವೆಯನ್ನು ಶಂಕ್ರಪ್ಪ ಬ. ಮುಂದಿನಮನಿ, ತಬಲಾ ಸೇವೆಯನ್ನು ಉಮೇಶ ನೀಡಿದರು. ಸುರೇಶ ಬೆಂಡಿಗೇರಿ ನಿರೂಪಿಸಿದರು.