ಸಾರಾಂಶ
ರೋಟರಿ ಸಂಸ್ಥೆ ಸೇವಾ ಮನೋಭಾವದ ಆಶಯ ಹೊತ್ತು ಕೆಲಸ ಮಾಡುತ್ತಿರುವ ಸಂಘಟನೆ ಆಗಿದ್ದು, ಇಲ್ಲಿ ಸದಸ್ಯರಾಗುವವರು ರೋಟರಿ ಆಶಯಕ್ಕೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ರೋಟರಿ ಜಿಲ್ಲಾ ಪಾಲಕ ಶ್ರೀಧರ್ ತಿಳಿಸಿದರು. ಹೊಸಕೋಟೆಯಲ್ಲಿ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
-2024-25ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ
ಹೊಸಕೋಟೆ: ರೋಟರಿ ಸಂಸ್ಥೆ ಸೇವಾ ಮನೋಭಾವದ ಆಶಯ ಹೊತ್ತು ಕೆಲಸ ಮಾಡುತ್ತಿರುವ ಸಂಘಟನೆ ಆಗಿದ್ದು, ಇಲ್ಲಿ ಸದಸ್ಯರಾಗುವವರು ರೋಟರಿ ಆಶಯಕ್ಕೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ರೋಟರಿ ಜಿಲ್ಲಾ ಪಾಲಕ ಶ್ರೀಧರ್ ತಿಳಿಸಿದರು.ನಗರದಲ್ಲಿ 2024-25ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, . ರೋಟರಿ ಉಚಿತ ಪೋಲಿಯೋ ಲಸಿಕೆ ಪ್ರಾರಂಭಿಸಿದ ಮೇಲೆ ದೇಶ 14 ವರ್ಷಗಳಿಂದ ಪೊಲಿಯೋ ಮುಕ್ತವಾಗಿದೆ. ಕ್ರೀಡೆ, ಆರೋಗ್ಯ, ಶಿಕ್ಷಣ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ರೊಟರಿ ಸೇವೆ ಮಾಡುತ್ತಿದೆ ಎಂದು ಹೇಳಿದರು.
ವಿಭಾಗೀಯ ಪಾಲಕ ರಾಜ್‌ಕುಮಾರ್ ಮಾತನಾಡಿ, ಹೊಸಕೋಟೆಯಲ್ಲಿ ರೋಟರಿಯಿಂದ 10 ಸಾವಿರ ಗಿಡ ನೆಡುವುದು, 3 ಸರ್ಕಾರಿ ಶಾಲೆ ದತ್ತು, 200 ಡೆಸ್ಕ್, 150 ವೀಲ್ ಚೇರ್ ವಿತರಣೆ, 9 ಜನರಿಗೆ ಪ್ರತಿ ದಿನ ಉಚಿತ ಡಯಾಲಿಸೀಸ್ ಮಾಡಲಾಗುತ್ತಿದೆ. 30 ಶುದ್ಧ ಕುಡಿಯುವ ನೀರಿನ ಯಂತ್ರ, 50 ಸಾವಿರ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಎಂದರು.ಎಲ್‌ಜಿ ಫೌಡೇಷನ್ ವತಿಯಿಂದ ರೋಟರಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಅಧ್ಯಕ್ಷ ಲಕ್ಷ್ಮಣಗೌಡ ವಿತರಿಸಿದರು.
ರೋಟರಿ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ರೋಟರಿ ಸಹಾಯಕ ಪಾಲಕ ರಾಜೇಂದ್ರ ಮೌನಿ, ರೋಟರಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ವಿಭಾಗೀಯ ಕಾರ್ಯದರ್ಶಿ ಶಿವಮೂರ್ತಿ, ಪದಾಧಿಕಾರಿಗಳಾದ ಪ್ರಸನ್ನ ಕಲ್ಪತರು, ನೂತನ ಅಧ್ಯಕ್ಷ ಕಮ್ಮಸಂದ್ರ ಮುನಿರಾಜು, ಕಾರ್ಯದರ್ಶಿ ಬಚ್ಚಣ್ಣ, ಖಜಾಂಚಿ ಭದ್ರಾಚಾರಿ, ಪದಾಧಿಕಾರಿಗಳಾದ ವೆಂಕಟೇಶ್, ನಟರಾಜು, ಸೋಮಶೇಖರ್, ಉಮಾಶಂಕರ್, ಆರ್‌ಟಿಸಿ ಗೋವಿಂದರಾಜ್, ಸುಬ್ರಮಣಿ, ಸುರೇಶ್, ವೆಂಕಟೇಶ್ ಇತರರಿದ್ದರು.