ಸಾರಾಂಶ
ಅಡುಗೆ ಮಾಡುವುದು ಬಹುದೊಡ್ಡ ಸೇವೆ. ಹಸಿದವರಿಗೆ ಅನ್ನ ಮಾಡಿ ಬಡಿಸಿ ಸೇವೆ ಮಾಡುತ್ತಿರುವವರು ಸಂಘಟನೆಯಾಗಿ ಸಂಘವನ್ನು ಹುಟ್ಟುಹಾಕಿಕೊಂಡಿದ್ದಲ್ಲದೆ, ಕಳೆದ ಐದು ವರ್ಷಗಳಿಂದ ಕಾರ್ಯಕ್ರಮ ಆಯೋಜನೆ ಮಾಡುವುದು ಮತ್ತು ಸಾಮೂಹಿಕ ಮಾಡುತ್ತಿರುವ ಕಾರ್ಯ ಶ್ಲಾಘನೀಯ.
ಕೊಪ್ಪಳ: ಅಡುಗೆ ಮಾಡುವವರೆಲ್ಲರೂ ಸಂಘಟನೆ ಮಾಡಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಸಂಘಟನೆ ಮಾಡಿಕೊಂಡು ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.ನಗರದ ಶಿವಶಾಂತಮಂಗಲಭವನದಲ್ಲಿ ಜಿಲ್ಲಾ ಅನ್ನಪೂರ್ಣೇಶ್ವರಿ ಅಡುಗೆ ಭಟ್ಟರ ಕ್ಷೇಮಾಭಿವೃದ್ಧಿ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಡುಗೆ ಮಾಡುವುದು ಬಹುದೊಡ್ಡ ಸೇವೆ. ಹಸಿದವರಿಗೆ ಅನ್ನ ಮಾಡಿ ಬಡಿಸಿ ಸೇವೆ ಮಾಡುತ್ತಿರುವವರು ಸಂಘಟನೆಯಾಗಿ ಸಂಘವನ್ನು ಹುಟ್ಟುಹಾಕಿಕೊಂಡಿದ್ದಲ್ಲದೆ, ಕಳೆದ ಐದು ವರ್ಷಗಳಿಂದ ಕಾರ್ಯಕ್ರಮ ಆಯೋಜನೆ ಮಾಡುವುದು ಮತ್ತು ಸಾಮೂಹಿಕ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಚನ್ನಬಸವೇಶ್ವರ ಕಪ್ಪತಮಠ ಹಿರಸಿಂದೋಗಿಯ ಚಿದಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಮಂಜುನಾಥ ಅರಿಕೇರಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಶರಣಯ್ಯ ನಿಟ್ಟಾಲಿ ಇದ್ದರು. ಗಿರೀಶ್ ಪಾನಘಂಟಿ ಸ್ವಾಗತಿಸಿದರು.